Home Archive by category ಕರಾವಳಿ (Page 38)

ಕೀಟೋ ಡಯಟ್

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಅದರಲ್ಲೂ ದೇಹದ ತೂಕದ ಬಗ್ಗೆ ವಿಶೇಷವಾದ ಕಾಳಜಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಯುವಕರು ಮತ್ತು ಯುವತಿಯರಲ್ಲಿ ಆಕರ್ಷಕವಾಗಿ ಕಾಣಲು ದೇಹದ ತೂಕ ಇಳಿಸುವ ವಿಶೇಷವಾದ ಆಹಾರ ಪದ್ಧತಿ, ದೈಹಿಕ ಕಸರತ್ತು, ಏರಿಯಲ್ ಯೋಗ, ಜಿಮ್ ಕಸರತ್ತು ಮುಂತಾದವುಗಳಿಗೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಈ ಪಟ್ಟಿಗೆ

ಬಜ್ಪೆ ನಾರಾಯಣ ಗುರು ಸಮಾಜ ಸೇವಾ ಸಂಘದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆ

ಮಾರ್ಚ್ 10ರಂದು ನಡೆಯುವ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಮಂಗಳೂರು ತಾಲೂಕಿನ ಬಜ್ಪೆ ನಾರಾಯಣ ಗುರು ಸಮಾಜ ಸೇವಾ ಸಂಘದಲ್ಲಿ ಅಧ್ಯಕ್ಷರಾದ ಶಿವರಾಮ್ ಪೂಜಾರಿಯವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್,ಪ್ರಧಾನ ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ,ಜೊತೆ ಕಾರ್ಯದರ್ಶಿ ಗಣೇಶ್ ಪೂಜಾರಿ,ಶೇಖರ್ ಪೂಜಾರಿ,ಗಂಗಾಧರ ಪೂಜಾರಿ,ಬಜ್ಪೆ ಯುವವಾಹಿನಿ ಘಟಕದ

ಮಂಗಳೂರು: ಫೆ.12 ರಿಂದ 16 ವರಗೆ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಕುಂಭ ಮಹೋತ್ಸವ

ಮಂಗಳೂರು: ಕಳೆದ ವರ್ಷ ಸಂಪೂರ್ಣವಾಗಿ ನವೀಕರಣಗೊಂಡು ಸಂಭ್ರಮದಿಂದ ಬ್ರಹ್ಮಕಲಶೋತ್ಸವವನ್ನು ಆಚರಿಸಿರುವ ಕುಲಶೇಖರದ ಶ್ರೀ ವೀರನಾರಾಯಣ ದೇವರ ವರ್ಷಾವಧಿ ಜಾತ್ರೋತ್ಸವ “ಕುಂಭ ಮಹೋತ್ಸವ” ಎಂಬ ಪದನಾಮದಲ್ಲಿ ಆಚರಿಸಲ್ಪಡುತ್ತಿದ್ದು, ಈ ಬಾರಿಯ ಮಹೋತ್ಸವ ಫೆ. 12 ರಿಂದ 16ರ ತನಕ ಸಂಭ್ರಮದಿಂದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಶ್ರೀ ಅನಂತ ಉಪಾದ್ಯಾಯ ಮತ್ತು ಶ್ರೀ ಹರಿ ಉಪಾದ್ಯಾಯರು ತಂತ್ರಿ ಸ್ಥಾನದಲ್ಲಿದ್ದು, ಪರಮಪೂಜ್ಯರಾದ ಮಾಣಿಲ

ಮಂಗಳೂರು: ಇಂದು ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್‌ನಿಂದ ಸ್ವರ ಶ್ರದ್ಧಾಂಜಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ನಗರದ ಉರ್ವಸ್ಟೋರ್ ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತ ಇಲಾಖೆ ಕರ್ನಾಟಕ ಸರಕಾರ ಸಹಯೋಗದೊಂದಿಗೆ ಸ್ವರ ಶ್ರದ್ಧಾಂಜಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಫೆ.೧೦ರಂದು ಸಂಜೆ ೫ ಗಂಟೆಗೆ ನಗರದ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ.ಇತ್ತೀಚೆಗೆ ನಿಧನಹೊಂದಿದ ಹಿಂದೂಸ್ತಾನಿ ಸಂಗೀತ ದಿಗ್ಗಜರಾದ ಪ್ರಭಾ ಅತ್ರೆ,ಪಮಡಿತ್ ರಶೀದ್ ಖಾನ್ ಪಂಡಿತ್ ಕೇದಾರ್ ಬೋಡಸ್ ಅವರ ಸ್ಮರಣಾರ್ಥವಾಗಿ

ಮತ ಯತ್ನದ ಭಾರತ ರತ್ನ 

ಭಾರತ ರತ್ನ ಪ್ರಶಸ್ತಿಯ ಬಗೆಗೆ ಪ್ರಧಾನಿಯವರು ರಾಷ್ಟ್ರಪತಿಗಳಿಗೆ ಹೆಸರು ಸೂಚಿಸುತ್ತಾರೆ. ಅದಕ್ಕೆ ರಾಷ್ಟ್ರಪತಿ ಅವರು ಅಂಗೀಕಾರ ಮುದ್ರೆ ಒತ್ತುತ್ತಾರೆ. ಹಿಂದೆಲ್ಲ ಸಮಿತಿ ರಚನೆ, ಅಭಿಪ್ರಾಯ, ಮಂತ್ರಿ ಮಂಡಲದಲ್ಲಿ ಚರ್ಚೆ ಮೂಲಕ ಹೆಸರನ್ನು ಪ್ರಧಾನಿಯವರು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುತ್ತಿದ್ದರು. ಈಗ ಪ್ರಧಾನಿ ಮೋದಿಯವರು ಕಿಸೆಯಿಂದ ತೆಗೆದುಕೊಟ್ಟಂತೆ ಭಾರತ ರತ್ನ ಎಂದು ಸದ್ದು ಮಾಡಿದ್ದಾರೆ. ಕ್ರಮ ಪ್ರಕಾರ ಕರ್ಪೂರಿ ಠಾಕೂರ್, ಆಮೇಲೆ ಲಾಲ್ ಕೃಷ್ಣ ಅಡ್ವಾಣಿ,

ಕೊಕ್ಕಡ: ಬೈಕ್‌ಗಳ ಮುಖಾಮುಖಿ ಡಿಕ್ಕಿ-ಮೂವರಿಗೆ ಗಾಯ

ಕೊಕ್ಕಡ:ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಗಂಭೀರ ಗಾಯಗೊಂಡಿರುವ ಘಟನೆ ನೆಲ್ಯಾಡಿ-ಕೊಕ್ಕಡ ರಸ್ತೆಯ ನೆಲ್ಯಾಡಿ ಪುತ್ಯೆ ಸಮೀಪ ಫೆ.9ರಂದು ರಾತ್ರಿ ನಡೆದಿದೆ.ನೆಲ್ಯಾಡಿ ಪಡ್ಡಡ್ಕ ನಿವಾಸಿ ಬೆನ್ನಿ, ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ಸಮೀಪದ ಮುಂಡ್ರೇಲು ನಿವಾಸಿಗಳಾದ ಮಹೇಂದ್ರ ಹಾಗೂ ಮಂಜುನಾಥ ಎಂಬವರು ಗಾಯಗೊಂಡು ಪುತ್ತೂರು ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ರಿಂಗ್ ವರ್ಕ್ಸ್ ಕೆಲಸ ನಿರ್ವಹಿಸುತ್ತಿರುವ ಪಡ್ಡಡ್ಕ ನಿವಾಸಿ

ಬಂಟ್ವಾಳ: ಸೇವಾಂಜಲಿಯ ಕೆ.ಕೃಷ್ಣ ಕುಮಾರ್ ಪೂಂಜ ಅವರಿಗೆ ವಿಷ್ಣು ಪ್ರಸಾದ ಪ್ರಶಸ್ತಿ ಪ್ರದಾನ

ಬಂಟ್ವಾಳ: ತಾಲೂಕು ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರತಿಷ್ಠಾವರ್ಧಂತಿ ಹಾಗೂ ವರ್ಷಾವಧಿ ಜಾತ್ರೆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಕ್ಷೇತ್ರದ ವತಿಯಿಂದ ಕೊಡ ಮಾಡುವ ವಿಷ್ಣು ಪ್ರಸಾದ ಪ್ರಶಸ್ತಿಯನ್ನು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣ ಕುಮಾರ್ ಪೂಂಜ ಅವರಿಗೆ ಪ್ರದಾನ ಮಾಡಲಾಯಿತು.ಮಾಜಿ ಸಚಿವ ಬಿ.ರಮಾನಾಥ ರೈ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಸೇವೆಯಿಂದ ಸಾರ್ಥಕತೆ ಎಂಬ ಧ್ಯೇಯ

ಪುತ್ತೂರು: ಫೆ.11ರಂದು ಯುವ ಕ್ರೀಡಾ ಸಂಭ್ರಮ-2024

ಪುತ್ತೂರು: ಯುವ ಒಕ್ಕಲಿಗ ಗೌಡರ ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ-2024 ಫೆ.11ರಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಕ್ರೀಡಾ ಸಂಯೋಜಕ ಮಾಧವ ಗೌಡ ಪೆರಿಯತ್ತೋಡಿ ತಿಳಿಸಿದ್ದಾರೆ. ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿ, ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಸಹಯೋಗದೊಂದಿಗೆ ಯುವ ಒಕ್ಕಲಿಗ ಗೌಡ ಸೇವಾ ಸಂಘ

ತೇಲುವತ್ತ ತೇಲಿಗಳು

ರಾಹುಲ್ ಗಾಂಧಿಯವರ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ನಡೆದಿದೆ. ರಾಹುಲ್ ಗಾಂಧಿಯವರು ಒಂದು ಕಡೆ ಮಾತನಾಡುತ್ತ ಮೋದಿಯವರು ಓಬಿಸಿ ಇತರ ಹಿಂದುಳಿದ ವರ್ಗಕ್ಕೆ ಸೇರಿಲ್ಲ. ಅವರು ವೈಶ್ಯ ಸಾಮಾನ್ಯ ವರ್ಗಕ್ಕೆ ಸೇರಿದವರು ಎಂದು ಹೇಳಿದರು. ಇದನ್ನು ಬಿಜೆಪಿ ಅಲ್ಲಗಳೆದಿದೆ. ಆದರೆ ಇದು ಒಂದಷ್ಟು ಸತ್ಯ ಒಂದಷ್ಟು ಸುಳ್ಳನ್ನು ಒಳಗೊಂಡಿದೆ. ತುಳುನಾಡಿನಲ್ಲಿ ಗಾಣಿಗರು ಇದ್ದಾರೆ. ಇವರು ಜನಿವಾರ ಧರಿಸುತ್ತಾರೆ. ಊರಿಗೆ ಎಣ್ಣೆ ತೆಗೆಯುವ ಗಾಣ ಹೊಂದಿರುವ ಜಾತಿಯವರು ಇವರು.

ಪುತ್ತೂರು: ಉದ್ಯೋಗ ನೀಡುವುದಾಗಿ ವಂಚನೆ: ಮೂವರು ಆರೋಪಿಗಳ ಸೆರೆ

ಪುತ್ತೂರು: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ವಂಚನೆ ಮಾಡಿದ ಪ್ರಕರಣವನ್ನು ಭೇಧಿಸಿರುವ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ತುಮಕೂರಿನ ಚಿಕ್ಕನಾಯಕನಹಳ್ಳಿಯ ಸುಮಿತ್ರ ಬಾಯಿ ಸಿ.ಆರ್.(23), ಹಾಸನದ ಹಳಸಿನಹಳ್ಳಿಯ ಸೌಂದರ್ಯ ಎಂ.ಎಸ್.(21), ತುಮಕೂರಿನ ಚಿಕ್ಕನಾಯಕನಹಳ್ಳಿಯ ರಾಹುಲ್‌ ಕುಮಾರ್ ನಾಯ್ಕ(19) ಎಂದು ಗುರುತಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ