Home Archive by category ಕರಾವಳಿ (Page 42)

ಬಂಟ್ವಾಳ:ಆಲದಪದವಿನಲ್ಲಿ ವೈಭವಯುತವಾಗಿ ಸಂಪನ್ನಗೊಂಡ ಬೈದಶ್ರೀ ಸೌಹಾರ್ದ ಕ್ರೀಡಾಕೂಟ

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಸ್ವಾಮಿ ಗುರು ಸಮಾಜ ಸೇವಾ ಸಂಘ, ವಾಮದಪದವು-ಆಲದಪದವು ಆಶ್ರಯದಲ್ಲಿ ಬೈದಶ್ರೀ ಸೌಹಾರ್ದ ಕ್ರೀಡಾಕೂಟವು ಆಲದಪದವು ಮೈದಾನದಲ್ಲಿ ವೈಭವಯುತವಾಗಿ ಸಂಪನ್ನಗೊಂಡಿತು.ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದಿದ್ದು ಉತ್ಸಾಹದಿಂದ ಪಾಲ್ಗೊಂಡರು.ಸಂಘದ ಗೌರವಾಧ್ಯಕ್ಷ ಮೋನಪ್ಪ‌ ಪೂಜಾರಿ ಪಾಲೆದಡಿ ಸಭಾ

ಬಂಟ್ವಾಳ : ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಎ.ಗೋಪಾಲ ಅಂಚನ್ ನೇಮಕ

ಬಂಟ್ವಾಳ: ದಕ್ಷಿಣಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಬಂಟ್ವಾಳ ಹೋಬಳಿ ಅಧ್ಯಕ್ಷರಾಗಿ‌ ಪತ್ರಕರ್ತ ಗೋಪಾಲ ಅಂಚನ್ ಆಯ್ಕೆಯಾಗಿದ್ದಾರೆ.ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷರ ಅನುಮತಿಯಂತೆ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅವರ ಶಿಫಾರಸ್ಸಿನಂತೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ ಅವರು ಈ ನೇಮಕಾತಿ ಮಾಡಿದ್ದಾರೆ.ಕರ್ನಾಟಕ ತುಳು

ಮಂಗಳೂರಿನಲ್ಲಿ ಪೈಪ್ ಹಾನಿ, ಒಂದು ವಾರ ಉಳ್ಳಾಲಕ್ಕೆ ನೀರಿಲ್ಲ

ಉಳ್ಳಾಲ: ಮಂಗಳೂರಿ‌ನ ಪಡೀಲ್ ಸಮೀಪ ಉಳ್ಳಾಲಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಒಡೆದ ಪರಿಣಾಮ ದುರಸ್ತಿ ಕಾರ್ಯಕ್ಕಾಗಿ ಉಳ್ಳಾಲ ನಗರಕ್ಕೆ ಒಂದು ವಾರದ ಕಾಲ ನೀರು ಸರಬರಾಜು ಇರುವುದಿಲ್ಲ ಎಂದು ಉಳ್ಳಾಲ ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.ಫೆ. 6 ರಂದು ಪಂಪ್ವೆಲ್ ಮಹಾವೀರ ವೃತ್ತ ಸಮೀಪದ ಪಡೀಲ್ ರೋಹನ್ ಸ್ಕ್ವೇರ್‌ ಕಟ್ಟಡದ ಮುಂಭಾಗದಲ್ಲಿ ತುಂಬೆ ಅಣೆಕಟ್ಟಿನಿಂದ ಉಳ್ಳಾಲಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಹಾನಿಯಾಗಿದೆ. ಈ ನಿಟ್ಟಿನಲ್ಲಿ

ಗುಡ್ಡೆ ಹೋಟೆಲಿನ ಅಯ್ಯಪ್ಪ ಸ್ವಾಮಿ ಭಕ್ತವೃಂದದವರಿಂದ ಹೆಮ್ಮುಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿಗಾಗಿ ನೆರವು

ಬೈಂದೂರು ತಾಲೂಕುಗುಡ್ಡೆ ಹೋಟೆಲ್ ಅಯ್ಯಪ್ಪ ಸ್ವಾಮಿ ಮಂದಿರದ ಗುರು ಸ್ವಾಮಿ ಕಾಮೇಶ್ ಹಾಗೂ ಭಕ್ತವೃಂದದವರು ಹೆಮ್ಮುಂಜೆಯಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಿಹಿ ತಿಂಡಿ ಹಂಚಿ ರೂಪಾಯಿ ಹತ್ತು ಸಾವಿರದ ನೂರನ್ನು ಶಾಲೆಯ ಕಂಪ್ಯೂಟರ್ ಕ್ಯಾಬಿನ್ ರಚನೆಗೆ ದೇಣಿಗೆಯಾಗಿ ನೀಡಿದರು. ಶಾಲೆಯ ಬಗ್ಗೆ ಇರುವ ಕಾಳಜಿ, ಅಭಿಮಾನ ಹಾಗೂ ಪ್ರೋತ್ಸಾಹವನ್ನು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ,ಎಸ್.ಎಮ್. ಡಿ .ಸಿ.ಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಊರಿನ ಜನತೆ ತಮ್ಮ

ಮಂಗಳೂರು ಇಎಸ್ ಐ ಆಸ್ಪತ್ರೆ ಮೇಲ್ದರ್ಜೆಗೇರಿಸಲು ನಳಿನ್ ಕುಮಾರ್ ಕಟೀಲ್ ಮನವಿ

ಮಂಗಳೂರಿನಲ್ಲಿರುವ ಇ ಎಸ್ ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಕೇಂದ್ರ ಕಾರ್ಮಿಕ ಸಚಿವರಾದ ಶ್ರೀ ಭೋಪೇಂದ್ರ ಯಾದವ್ ರವರನ್ನು ಇಂದು ನಳಿನ್ ಕುಮಾರ್ ಕಟೀಲ್ ರವರು ನವದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.ಜಿಲ್ಲೆಯ ಶ್ರಮಿಕ ವರ್ಗಕ್ಕೆ ಅನುಕೂಲವಾಗುವಂತೆ, ಮಂಗಳೂರು ಇಎಸ್ಐ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಅತ್ಯಾದುನಿಕ ವೈದ್ಯಕೀಯ ಉಪಕರಣಗಳು, ಎಂ.ಆರ್.ಐ. ಘಟಕ, ಸಿ.ಟಿ. ಸ್ಕಾನಿಂಗ್ ಯಂತ್ರಗಳ ಅಳವಡಿಕೆ, ತಜ್ಞ ವೈದ್ಯರ ಹಾಗೂ ಇತರೆ

ಉರ್ವ ಶ್ರೀ ಮಹಾಗಣಪತಿ ದೇವಳದಲ್ಲಿ ಬ್ರಹ್ಮಕಲಶೋತ್ಸವ

ನಗರದ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಫೆ.11ರಿಂದ 18ರವರೆಗೆ ಭಾರೀ ವಿಜೃಂಭಣೆಯ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಬ್ರಹ್ಮರಥೋತ್ಸವ ನಡೆಯಲಿದ್ದು ಅದರ ಪೂರ್ವಸಿದ್ಧತೆಯ ಹಿನ್ನಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಮಹಾನಗರ ಪಾಲಿಕೆ, ಆರೋಗ್ಯ, ಪೊಲೀಸ್ ಹಾಗೂ ಮೆಸ್ಕಾಂ ಅಧಿಕಾರಿಗಳ ಸಭೆ ನಡೆಸಿದರು. ಈ ಬಾರಿ ಬ್ರಹ್ಮಕಲಶೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಆಗಮಿಸಲಿದ್ದಾರೆ. ಅದರಲ್ಲೂ ವಿಶೇಷವಾಗಿ ನಡೆಯಲಿರುವ ನೂತನ ಬ್ರಹ್ಮರಥದ

ಮೂಡುಬಿದಿರೆ: ಸುಸಜ್ಜಿತವಾದ ಪೊಲೀಸ್ ಠಾಣೆ, ಮೈನ್ ಶಾಲೆಗಳಿಗೆ ಕಟ್ಟಡಗಳ ಬೇಡಿಕೆ

ಮೂಡುಬಿದಿರೆಯ ಆರಕ್ಷಕರ ಠಾಣೆಯು ಸುಸಜ್ಜಿತವಾಗಿಲ್ಲ, ಪೊಲೀಸರಿಗೆ ಬೇಕಾಗುವ ಮೂಲಭೂತವಾದ ವ್ಯವಸ್ಥೆ ಸರಿಯಾಗಿಲ್ಲ, 60 ಸಿಬಂದಿಗಳ ಅವಶ್ಯಕತೆ ಇರುವ ಠಾಣೆಯಲ್ಲಿ ಕೇವಲ 40 ಸಿಬಂದಿಗಳಷ್ಟೇ ಇದ್ದಾರೆ, ಇದರಿಂದಾಗಿ ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ಶಾಸಕರ ಗಮನಕ್ಕೆ ತಂದರು. ಶಾಸಕ ಉಮನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಸೌಧದಲ್ಲಿ ನಡೆದ ಮೊದಲ ತಾಲೂಕು ಕೆಡಿಪಿ

ಮಾಡು ಮೂಡದ ಮೋಡ

ಏಶಿಯಾ ಪೆಸಿಫಿಕ್ ವಲಯದ ವಸತಿ ಕ್ಷೇತ್ರದ ಬೆಲೆಯೇರಿಕೆಯಲ್ಲಿ ಬೆಂಗಳೂರು 8ನೇ ಮತ್ತು ಮುಂಬಯಿ 9ನೇ ಸ್ಥಾನದಲ್ಲಿ ಇದೆ ಎಂದು ನೈಟ್ ಫ್ರಾಂಕ್ ರಿಯಲ್ ಎಸ್ಟೇಟ್ ಸಂಸ್ಥೆ ಸಂತೋಷ ಪ್ರಕಟಿಸಿದೆ. ಬೆಂಗಳೂರಿನಲ್ಲಿ ವರುಷದಿಂದ ವರುಷಕ್ಕೆ ವೃದ್ಧಿ ದರ 7.1 ಶೇಕಡಾದಷ್ಟು ಇದ್ದರೆ, ಮುಂಬಯಿಯದು 7ಶೇಕಡಾದಷ್ಟು ಇದೆ. ಏಶಿಯಾ ಪೆಸಿಫಿಕ್ ವಲಯದ 25 ನಗರಗಳಲ್ಲಿ 21 ನಗರಗಳು ರಿಯಲ್ ಎಸ್ಟೇಟ್ ಪೂರಕವಾಗಿ ಇವೆ. ನಾಲ್ಕು ಚಪಟ್ ಎನ್ನಲಾಗಿದೆ. ಸಿಂಗಾಪುರ 13.7 ವಾರ್ಷಿಕ ವೃದ್ಧಿ ದರದೊಡನೆ

ಅಂಕಿ ಅಂಶದ ಪ್ರಶ್ನೆಗೆ ಸೊನ್ನೆ ಸೊನ್ನೆ ಉತ್ತರ

ಜಿಎಸ್‍ಟಿ ವಂಚನೆಯಲ್ಲಿ ಗುಜರಾತ್ ಮತ್ತು ಮುಂಬಯಿಯ ಗುಜರಾತ್ ಉದ್ಯಮಿಗಳೇ ಮೊದಲ ಸ್ಥಾನದಲ್ಲಿರುವುದು ವರದಿಯಾಗಿದೆ. ಕರ್ನಾಟಕದ ಕಾಂಗ್ರೆಸ್ ಸರಕಾರವು ಒಕ್ಕೂಟ ಸರಕಾರವು ತನಗೆ ಮಾಡಿರುವ ಹಣಕಾಸು ವಂಚನೆಯ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಈ ನಡುವೆ ಲೋಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿಯವರು ತೆರಿಗೆ ಪಾಲು ನೀಡಿಕೆ ಮತ್ತು ಅನುದಾನ ಕೊಡುವುದರಲ್ಲಿ ಬಿಜೆಪಿಯೇತರ ಸರಕಾರಗಳನ್ನು ಒಕ್ಕೂಟ ಸರಕಾರವು ವಂಚಿಸಿದೆ ಎಂದು ಆಳುವವರನ್ನು

ಮೂಡುಬಿದಿರೆ: ಆಳ್ವಾಸ್‌ನಲ್ಲಿ ಪಟ್ಲ ಫೌಂಡೇಶನ್‌ನ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ

ಮೂಡುಬಿದಿರೆ: ಯಕ್ಷಗಾನವನ್ನು ಒಂದು ಪರಿಪೂರ್ಣ ಕಲೆಯನ್ನಾಗಿ ಮಾಡುವ ಮಹತ್ಕಾರ್ಯವನ್ನು ಕಲಾವಿದರು, ಭಾಗವತರು, ವೇಷಧಾರಿಗಳು ಮಾಡುತ್ತಿದ್ದಾರೆ. ಇವರ ಕೊಡುಗೆಯಿಂದ ಯಕ್ಷಗಾನ ಅತ್ಯುನ್ನತ ಸ್ಥಾನಕ್ಕೇರಿದೆ. ಸಂಗೀತ, ಭಾಗವತಿಗೆ, ಹಿಮ್ಮೇಳ, ವೇಷಭೂಷಣ, ನೃತ್ಯಗಳನ್ನು ಒಳಗೊಂಡ ಸರ್ವ ಗುಣ ಸಂಪನ್ನವಾದAತ ಕಲೆ ಯಕ್ಷಗಾನ. ಪಟ್ಲ ಸತೀಶ್ ಶೆಟ್ಟಿ ಕೇವಲ ಕಲಾವಿದ ಮಾತ್ರವಲ್ಲ. ಪಟ್ಲ ಫೌಂಡೇಶನ್ ಸ್ಥಾಪಿಸಿ ಅನೇಕ ಕಲಾವಿದರಿಗೆ ಬದುಕು ಕೊಡುತ್ತಿದ್ದಾರೆ ಎಂದು ಯಕ್ಷಧ್ರುವ ಪಟ್ಲ