Home Archive by category ಕರಾವಳಿ (Page 58)

ಮಂಜೇಶ್ವರ: ಸ್ನೇಹಾಲಯದಲ್ಲಿ ನಿವಾಸಿಗಳು ಮತ್ತು ಸಿಬ್ಬಂದಿಗಳಿಂದ ಹಬ್ಬದ ಸಂಭ್ರಮ

ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಪ್ರಮುಖ ಸಂಸ್ಥೆಯಾದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವು ಡಿಸೆಂಬರ್ 21 ರಂದು ತನ್ನ ನಿವಾಸಿಗಳಿಗೆ ಕ್ರಿಸ್‌ಮಸ್ ಆಚರಣೆಯನ್ನು ಏರ್ಪಡಿಸಿತ್ತು. ನಿವಾಸಿಗಳು ಮತ್ತು ಸಿಬ್ಬಂದಿ ವರ್ಣರಂಜಿತ ಹಬ್ಬದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಸಿಬ್ಬಂದಿ ಮತ್ತು ನಿವಾಸಿಗಳು ಪ್ರದರ್ಶಿಸಿದ

ಪುತ್ತೂರು: ಸರ್ಕಾರಿ ಆಸ್ಪತ್ರೆಯಲ್ಲಿ ಶಾರ್ಟ್‌ಸಕ್ಯೂಟ್ ಅವಘಡ

ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಐಸಿಯುವಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡ ಘಟನೆ ಡಿ.22ರ ತಡ ರಾತ್ರಿ ನಡೆದಿದ್ದು ಅದೃಷ್ಟವಶಾತ್ ಹೆಚ್ಚಿನ ಅನಾಹುತವೊಂದು ತಪ್ಪಿದೆ. ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ದಟ್ಟ ಹೊಗೆ ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಭದ್ರತಾ ಸಿಬ್ಬಂದಿಗಳು ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರಿಂದ ರೋಗಿಗಳು ಅಪಾಯದಿಂದ

ಮೂಲ್ಕಿ: ನಗರೋತ್ಥಾನ ಯೋಜನೆಯಡಿ ಕಚೇರಿ ಕಟ್ಟಡ ಶಂಕುಸ್ಥಾಪನೆ

ಮುಲ್ಕಿ ನಗರೋತ್ಧಾನ ಯೋಜನೆಯಡಿ ಸುಮಾರು 50 ಲಕ್ಷ ವೆಚ್ಚದ ವಿಶೇಷ ಅನುದಾನದಲ್ಲಿ ಮುಲ್ಕಿ ನಗರ ಪಂಚಾಯತ್ ನೂತನ  ಕಛೇರಿ ಕಟ್ಟಡದ ಶಂಕುಸ್ದಾಪನೆ ಕಾರ್ಯಕ್ರಮವನ್ನು ರಾಜ್ಯ ಆರೋಗ್ಯ. ಸಚಿವ ಹಾಗೂ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಿದರು. ಈ ಸಂದರ್ಭ ಮಾತನಾಡಿ, ಸರಕಾರವು ರಾಜ್ಯದಲ್ಲಿ ಶಿಸ್ತು ಬದ್ದ ಹಾಗೂ ಪಾರದರ್ಶಕ ಆಡಳಿತದೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಅನೇಕ ಯೋಜನೆಗಳನ್ನು ತಯಾರಿಸಿದ್ದು ಅಭಿವೃದ್ಧಿ ನಿರಂತರವಾಗಿ ನಡೆಯಲಿದೆ ಎಂದರು. ಈ ಸಂದರ್ಭ

ಬಜ್ಪೆ: ಮಾದಕ ವಸ್ತು ಮಾರಾಟ, ಮೂವರ ಬಂಧನ

ಬೈಕ್‌ನಲ್ಲಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಮೂವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್‌ನ ಹೊಸಬೆಟ್ಟು ಈಶ್ವರನಗರ ನಿವಾಸಿ ಅಣ್ಣಪ್ಪಸ್ವಾಮಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ  ಬಡಜೇ  ನಿವಾಸಿ ಮೊಹಮ್ಮದ್ ಜುನೈದ್  ಹಾಗೂ ಹೊಸಬೆಟ್ಟು ವಿನ ಪಡ್ಡಾಯಿ ನಿವಾಸಿ ಎಂ.ಕೆ ಆಕಾಶ ಬಂಧಿತರು. ಬಜಪೆ ಪೊಲೀಸ್ ಠಾಣೆಯ ಪಿಎಸ್ ಐ ಗುರಪ್ಪ ಕಾಂತಿ ರವರು ಸಿಬ್ಬಂದಿಯವರ ಜೊತೆ ಬಜಪೆಯ ಶಾಂತಿಗುಡ್ಡೆ ಚೆಕ್ ಪಾಯಿಂಟ್ ಬಳಿ ಬಜಪೆಯಿಂದ ಕಳವಾರು

ಉಡುಪಿ: ರುಪಿ ಬಾಸ್ MSME ಮಿಲನ್ ಕಾರ್ಯಕ್ರಮ

ಸೇಲ್‌ಎಕ್ಸ್‌ಪರ್ಟ್ ಬ್ಯುಸಿನೆಲ್ ಸೊಲ್ಯೂಷನ್ಸ್ ವತಿಯಿಂದ ರುಪಿ ಬಾಸ್ ಎಮ್‌ಎಸ್‌ಎಮ್‌ಇ ಮಿಲನ್ ಮತ್ತು ಎನ್‌ಎಸ್‌ಇ ಎಮರ್ಜ್ ಹಾಗೂ ರೋಟರಿ ಉಡುಪಿ ಮಿಡ್ ಟೌನ್ ಸಹಯೋಗದೊಂದಿಗೆ ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬ್ಯುಸ್‌ನೆಸ್‌ಮೆನ್ ಹಾಗೂ ರುಪಿ ಬಾಸ್ ಎಮ್‌ಎಸ್‌ಎಮ್‌ಇ ಮಿಲನ್ ಸಹಯೋಗದೊಂದಿಗೆ ಈ ಕಾರ್ಯಾಗಾರವು ಸೇಲ್ ಎಕ್ಸ ಪರ್ಟ್ ಬ್ಯುಸಿನೆಸ್‌ನ ಸಂಸ್ಥಾಪಕ ಪ್ರವೀಣ್ ಚಂದ್ರ

ಬಂಟ್ವಾಳ: ಡಿ.26ರಂದು ರೈತ ಸಂಘದಿಂದ ತುಂಬೆ ಡ್ಯಾಂ ಬಳಿ ಆಹೋರಾತ್ರಿ ಪ್ರತಿಭಟನೆ

ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂನ ಕೆಳಭಾಗದ ಬಲಪಾರ್ಶ್ವದಲ್ಲಿ ಡ್ಯಾಂನಿಂದ ಹರಿದು ಹೋಗುವ  ನೀರಿನ ರಭಸಕ್ಕೆ  ಸುಮಾರು 10 ಎಕರೆ ಯಷ್ಟು ವಿಸ್ತೀರ್ಣದ ಅಡಿಕೆ ತೋಟ, ತೆಂಗಿನ ತೋಟ, ಗದ್ದೆಗಳು ಕೊಚ್ಚಿಕೊಂಡು ಹೋಗಿ ಸ್ಥಳೀಯ ರೈತರಿಗೆ ನಷ್ಟ ಉಂಟಾದರೂ, ಜಿಲ್ಲಾಡಳಿತವಾಗಲಿ, ಮಹಾನಗರ ಪಾಲಿಕೆಯಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಈ ಸಮಸ್ಯೆಗೆ ಯಾವುದೇ ಪರಿಹಾರ ಕಂಡುಕೊಳ್ಳದೆ ಭೂಮಿ ನದಿ ಪಾಲಾಗಲು ಸಹಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಸಮಿತಿಯ

ಕಡಬ: ಡಿ.23ರಂದು ಕುಟ್ರುಪ್ಪಾಡಿ ಮುಳಿಮಜಲಿನಲ್ಲಿ ಕಬಡ್ಡಿ ಪಂದ್ಯಾಟ

ದ.ಕ, ಜಿಲ್ಲಾ ಹಾಗೂ ಕಡಬ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಹಾಗೂ ಕೇಪು ಕುಟ್ರುಪ್ಪಾಡಿ ಐಡಿಯಲ್ ಪ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ, ಟೀಮ್ ಸಾರಂಗ್ ಸಾರಥ್ಯದಲ್ಲಿ ಮ್ಯಾಟ್ ಅಂಕಣದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಡಿ.23ನೇ ಕಡಬ ಗ್ರಾಮದ ಮುಳಿಮಜಲು ಎಂಬಲ್ಲಿ ಸಂಜೆ ನಡೆಯಲಿದೆ ಎಂದು  ಟೀಮ್‌ಸಾರಂಗ್ ಮುಖಂಡ ಹರೀಶ್ ರೈ ಮೈಲೇರಿ ತಿಳಿಸಿದರು. ಅವರು ಕಡಬ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಕಳೆದ ಹದಿನೈದು ವರ್ಷಗಳಿಂದ

ಉಡುಪಿ: ನಟೋರಿಯಸ್ ಬನಿಯನ್ ಗ್ಯಾಂಗ್!: ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರಿಂದ ತನಿಖೆ

ಇತ್ತೀಚೆಗೆ ಉಡುಪಿಯ ಸಂತಕಟ್ಟೆ ಬಳಿ ನಡೆದ ದರೋಡೆ ಪ್ರಕರಣದ ತನಿಖೆ  ಕೈಗೆತ್ತಿಕೊಂಡ ಉಡುಪಿ ಪೊಲೀಸರಿಗೆ ಶಾಕ್ ಕಾದಿತ್ತು. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಅದರಲ್ಲಿ ಕಂಡ ದೃಶ್ಯಗಳನ್ನು ಕಂಡು ಪೊಲೀಸರು  ಬೆಚ್ಚಿ ಬಿದ್ದಿದ್ದರು. ದಿಲ್ಲಿ ಕ್ರೈಮ್-2 ವೆಬ್ ಸೀರೀಸ್‌ನ ಕಚ್ಚಾ ಬನಿಯನ್ ಗ್ಯಾಂಗ್ ಮಾದರಿಯಲ್ಲೇ.. ಬರೀ ಚೆಡ್ಡಿ ಧರಿಸಿ, ಮೈಗೆ ಎಣ್ಣೆ ಹಚ್ಚಿಕೊಂಡು, ಸೊಂಟದಲ್ಲೊಂದು ಚಪ್ಪಲಿ ಕಟ್ಟಿಕೊಂಡು ಈ ಗ್ಯಾಂಗ್   ದರೋಡೆ ನಡೆಸುತ್ತೆ.  ಬಳಿಕ

ಕುಸ್ತಿ ಆಟಕ್ಕೆ ವಿದಾಯ ಹೇಳಿದ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಸಿ ಮಲಿಕ್

ಆರೋಪಿಯ ಆಪ್ತನೇ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಿಗೇ ಸುದ್ದಿಗೊಷ್ಟಿ ನಡೆಸಿದ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಸಿ ಮಲಿಕ್ ಅವರು ಇನ್ನೆಂದೂ ಕುಸ್ತಿ ಆಡುವುದಿಲ್ಲ ಎಂದು ಘೋಷಣೆ ಮಾಡಿದರು. ಭಾರತೀಯ ಕುಸ್ತಿ ಫೆಡರೇಶನ್‍ನಲ್ಲಿ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ಇನ್ನೂ ನಿಲ್ಲುವ ಲಕ್ಷಣ ಇಲ್ಲ. ಮನಸಾಕ್ಸಿಯೊಡನೆ ಕುಸ್ತಿಯಲ್ಲಿ ಮುಂದುವರಿಯುವುದು ಸಾಧ್ಯವಿಲ್ಲ ಎಂದು ಸಾಕ್ಸಿ ಮಲಿಕ್ ಹೇಳಿದರು. ಸಾಕ್ಸಿಯವರ ಜೊತೆಗೆ ಬಜರಂಗ್

ಉಡುಪಿ: ಮಲ್ಪೆಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ: ಎಂಟು ಮಂದಿಯ ರಕ್ಷಣೆ

ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಬೋಟು ಮಲ್ಪೆಯಿಂದ ನೇರ 26 ಮಾರು ಆಳ ದೂರದಲ್ಲಿ ಮುಳುಗಡೆಗೊಂಡಿದೆ. ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ರಕ್ಷಿಸಿಸಲಾಗಿದೆ. ಕಡೆಕಾರು ರಕ್ಷಾ ಅವರಿಗೆ ಸೇರಿದ ಬೋಟು ಡಿ. 12ರಂದು ರಾತ್ರಿ ಮಲ್ಪೆ ಬಂದರಿನಿಂದ ತೆರಳಿತ್ತು. ಡಿ. 19ರಂದು ಬೆಳಗ್ಗೆ 6.30ರ ವೇಳೆಗೆ ಮೀನುಗಾರಿಕೆ ನಡೆಸುವಾಗ ನೀರಿನಡಿಯಲ್ಲಿದ್ದ ಯಾವುದೋ ವಸ್ತು ಬೋಟ್‌ನ ತಳ ಒಡೆದು ನೀರು ನುಗ್ಗಲಾರಂಭಿಸಿತು. ತತ್‌ಕ್ಷಣ ಬೋಟಿನವರು ವಯರ್‌ಲೆಸ್ ಮೂಲಕ ಇತರ ಬೋಟ್‌ಗಳಿಗೆ