Home Archive by category ಕ್ರೀಡೆ (Page 6)

ಮೂಡುಬಿದಿರೆ: 6ನೇ ವರ್ಷದ ಕಂಬಳ ಓಟಗಾರ ತರಬೇತಿ ಶಿಬಿರ ಉದ್ಘಾಟನೆ

ಮೂಡುಬಿದಿರೆ: ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲಾ ವ್ಯಾಪ್ತಿ ಹೊಂದಿರುವ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿಯಿಂದ ಮೂಡುಬಿದಿರೆ ಒಂಟಿಕಟ್ಟೆಯಲ್ಲಿರುವ ವೀರ ರಾಣಿ ಅಬ್ಬಕ್ಕ ಸಂಸ್ಕøತಿ ಗ್ರಾಮದ ಕೋಟಿ-ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ 15 ದಿನಗಳು ನಡೆಯುವ 6ನೇ ವರ್ಷದ ಕಂಬಳ ಓಟಗಾರ ತರಬೇತಿ ಶಿಬಿರಕ್ಕೆ ಭಾನುವಾರ ಕಡಲಕೆರೆಯ ಸೃಷ್ಟಿ

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕನ್ನಡಿಗ ಸುಹಾಸ್: ಸಚಿವ ಕೆ. ಗೋಪಾಲಯ್ಯ ಅವರಿಂದ ಅಭಿನಂದನೆ

ಜಪಾನ್ ರಾಜಧಾನಿ ಟೋಕಿಯೋದಲ್ಲಿ ವಿಶೇಷ ಚೇತನ ಕ್ರೀಡಾಪಟುಗಳಿಗಾಗಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ನಲ್ಲಿ ಉತ್ತರ ಪ್ರದೇಶದ ಜಿಲ್ಲಾಧಿಕಾರಿಯಾಗಿರುವ ಹಾಸನ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಎಲ್ ಯತಿರಾಜ್ ಅವರು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿರುವುದು ಭಾರತದ ಮೊದಲ ಐ ಎ ಎಸ್ ಅಧಿಕಾರಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ ಸುಹಾಸ್ ಒಬ್ಬ ಕನ್ನಡಿಗ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಅಬಕಾರಿ ಸಚಿವ ಗೋಪಾಲಯ್ಯ ಹೇಳಿದರು. ಸುಹಾಸ್

ಪ್ಯಾರಾಲಿಂಪಿಕ್ಸ್‌ ನಲ್ಲಿ ಭಾರತಕ್ಕೆ ಐದನೇ ಚಿನ್ನ: ಬ್ಯಾಡ್ಮಿಂಟನ್ ನಲ್ಲಿ ಬಂಗಾರ ಗೆದ್ದ ಕೃಷ್ಣ ನಾಗರ್

ಟೋಕಿಯೊ: ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನ ಕೊನೆಯ ದಿನವಾದ ರವಿವಾರ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ (ಎಸ್‌ಎಚ್-6)ನಲ್ಲಿ ಭಾರತದ ಕೃಷ್ಣ ನಾಗರ್ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. ಕೂಟದಲ್ಲಿ ಇದು ಭಾರತಕ್ಕೆ ಐದನೇ ಚಿನ್ನದ ಪದಕವಾಗಿದೆ. ಬ್ಯಾಡ್ಮಿಂಟನ್ ಸ್ಪರ್ಧೆಯ ಎಸ್ ಎಚ್ 6 ವಿಭಾಗದಲ್ಲಿ ಭಾರತದ ಕೃಷ್ಣ ನಾಗರ್ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಹಾಂಗ್ ಕಾಂಗ್ ನ ಚು ಮನ್ ಕೈ ಅವರನ್ನು

ಟೋಕಿಯೋ ಪ್ಯಾರಾಲಿಂಪಿಕ್ಸ್ : ಬೆಳ್ಳಿ ಪದಕ ಗೆದ್ದ ಕನ್ನಡಿಗ ಸುಹಾಸ್

 ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ ಎಲ್ 4 ಫೈನಲ್ ನಲ್ಲಿ  ಅಗ್ರ ಶ್ರೇಯಾಂಕದ ಫ್ರಾನ್ಸ್ ಆಟಗಾರ ಲುಕಾಸ್ ಮಝೂರ್ ಅವರ ವಿರುದ್ಧ ತೀವ್ರ ಹೋರಾಟ ನೀಡಿದ ಹೊರತಾಗಿಯೂ 1-2 (21-15, 17-21, 15-21) ಅಂತರದಿಂದ ಸೋತಿರುವ ಭಾರತದ ಐಎಎಸ್ ಅಧಿಕಾರಿ ಹಾಗೂ ನೊಯ್ಡಾ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್ ಬೆಳ್ಳಿ ಪದಕವನ್ನು ಗೆದ್ದುಕೊಂಡು ಹೊಸ ಇತಿಹಾಸ ನಿರ್ಮಿಸಿದರು. ಸುಹಾಸ್ ಇವರು ಕರ್ನಾಟಕ  ಮೂಲದ ಐಎಎಸ್ ಅಧಿಕಾರಿ.

ಟೋಕಿಯೊ ಪ್ಯಾರಾಲಿಂಪಿಕ್ಸ್: ಬ್ಯಾಡ್ಮಿಂಟನ್ ನಲ್ಲಿ ಪ್ರಮೋದ್ ಭಗತ್ ಗೆ ಚಿನ್ನದ ಪದಕ

ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಯ ಪುರುಷರ ಸಿಂಗಲ್ಸ್‌ನಲ್ಲಿ  ಹಾಲಿ ವಿಶ್ವ ಚಾಂಪಿಯನ್ ಪ್ರಮೋದ್ ಭಗತ್  ಚಿನ್ನದ ಪದಕವನ್ನು ಜಯಿಸಿದರು. ಶನಿವಾರ ನಡೆದ ಫೈನಲ್ ನಲ್ಲಿ ಬ್ರಿಟನ್ ನ ಡೇನಿಯಲ್ ಬೆಥೆಲ್ ಅವರನ್ನು 21-14, 21-17  ಗೇಮ್ ಗಳಿಂದ ಸೋಲಿಸಿದರು. 33ರ ಹರೆಯದ ಪ್ರಮೋದ್ ವಿಶ್ವದ ನಂ.1 ಆಟಗಾರನಾಗಿದ್ದು, ಹಾಲಿ ಏಶ್ಯನ್ ಚಾಂಪಿಯನ್ ಆಗಿದ್ದಾರೆ. ಶನಿವಾರ 36 ನಿಮಿಷಗಳಲ್ಲಿ ಅಂತ್ಯಗೊಂಡ ಪುರುಷರ ಸಿಂಗಲ್ಸ್ ಎಸ್

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ:ಶೂಟರ್ ಮನೀಶ್ ನರ್ವಾಲ್ ಗೆ ಚಿನ್ನ

ಶೂಟರ್ ಮನೀಶ್ ನರ್ವಾಲ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.  ಇನ್ನೋರ್ವ ಶೂಟರ್ ಸಿಂಗ್ ರಾಜ್ ಅಧಾನ ಅವರು ಬೆಳ್ಳಿ ಪದಕ ಗೆದ್ದುಕೊಂಡರು. ಈ ಇಬ್ಬರು ಶನಿವಾರ ನಡೆದ ಪಿ4 ಮಿಕ್ಸೆಡ್ 50 ಮೀ. ಪಿಸ್ತೂಲ್ ಎಸ್ಎಚ್ 1 ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ.19ರ ರ ಹರೆಯದ ನರ್ವಾಲ್ ಒಟ್ಟು 218.2 ಅಂಕ ಗಳಿಸಿ ಒಲಿಂಪಿಕ್ಸ್ ದಾಖಲೆ  ನಿರ್ಮಿಸಿ ಚಿನ್ನ ಜಯಿಸಿದರು. ಮಂಗಳವಾರ ಕಂಚು ಗೆದ್ದಿದ್ದ ಅಧಾನ 216.7 ಅಂಕ ಗಳಿಸಿ

ಪ್ಯಾರಾ ಓಲಂಪಿಕ್ ನಲ್ಲಿ ಚಿನ್ನ ಗೆದ್ದರೆ 5 ಕೋಟಿ ಬಹುಮಾನ – ಸಚಿವ ಡಾ. ನಾರಾಯಣಗೌಡ

ಜಪಾನ್‍ನ ಟೋಕಿಯೊದಲ್ಲಿ ನಡೆಯಲಿರುವ ಪ್ಯಾರಾ ಓಲಂಪಿಕ್‍ಗೆ ರಾಜ್ಯದಿಂದ ಇಬ್ಬರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಅವರಿಗೆ ಪ್ರೋತ್ಸಾಹಧನವಾಗಿ ತಲಾ ರೂ. 10 ಲಕ್ಷ ನೀಡಲಾಗಿದೆ. ಪ್ಯಾರಾ ಪವರ್ ಲಿಪ್ಟಿಂಗ್‍ನಲ್ಲಿ ಶಕೀನ್ ಖಾತುನ್ ಹಾಗೂ ಪ್ಯಾರಾ ಈಜಿನಲ್ಲಿ ನಿರಂಜನ್ ಮುಕುಂದನ್ ಪಾಲ್ಗೊಳ್ಳುತ್ತಿದ್ದಾರೆ. ಇಬ್ಬರೂ ಕ್ರೀಡಾಪಟುಗಳು ರಾಜ್ಯದ, ದೇಶದ ಕೀರ್ತಿಪತಾಕೆ ಹಾರಿಸುತ್ತಾರೆ ಎಂಬ ನಂಬಿಕೆ ಇದೆ. ಪ್ಯಾರಾ ಓಲಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರೆ ರಾಜ್ಯ

ನವೀನ್ ಪಟ್ನಾಯಕ್ – ಹಾಕಿ ಕ್ರೀಡೆಯ ರಿಯಲ್ ಹಿರೋ

ಒಲಿಂಪಿಕ್ಸ್ ಹಾಕಿ ಪಂದ್ಯದಲ್ಲಿ ಭಾರತದ ಪುರಷರ ತಂಡ 41 ವರ್ಷಗಳ ಬಳಿಕ ಪದಕ ಗೆದ್ದಿದೆ. ಮಹಿಳಾ ಹಾಕಿ ತಂಡ ಕಂಚಿನ ಪದಕ ಗೆಲ್ಲುವ ಸಾಧ್ಯತೆಯ ನಡುವೆ ಕೊನೆ ಗಳಿಗೆಯಲ್ಲಿ ವೀರೋಚಿತ ಸೋಲೊಪ್ಪಿದರೂ ವನಿತೆಯರು ಭಾರತದ ಮಹಿಳಾ ಹಾಕಿಗೆ ಹೊಸದೊಂದು ಸಂಭ್ರಮವನ್ನು ತಂದಿದ್ದಾರೆ. `ಗೆಲುವಿಗೆ ನೂರು ವಾರಿಸುದಾರರು` ಎಂಬಂತೆ ಭಾರತದ ಹಾಕಿ ತಂಡದ ಸಾಧನೆಗೂ ಈಗ ಹಲವು ವಾರಿಸುದಾರರು. ಈ ರೀತಿಯ ವಿದ್ಯಾಮಾನಗಳು ಯಾವುದೇ ಕ್ಷೇತ್ರದ ಗೆಲವಿನ ಸಂದರ್ಭದಲ್ಲೂ ಸಾಮಾನ್ಯ. ಆದರೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ನೀರಜ್ ಚೋಪ್ರಾಗೆ ಚಿನ್ನದ ಪದಕ

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚೊಚ್ಚಲ ಚಿನ್ನದ ಪದಕ ಲಭಿಸಿದೆ. ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಒಲಿಂಪಿಕ್ಸ್ ನಲ್ಲಿ  ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ ನಲ್ಲಿ ಅತ್ಯಮೋಘ ಪ್ರದರ್ಶನ ನೀಡಿ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದಾರೆ.ಚೋಪ್ರಾ ತನ್ನ ಎರಡನೇ ಪ್ರಯತ್ನದಲ್ಲಿ 87.58 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದು, ಇದು ಫೈನಲ್ ನಲ್ಲಿ ಅವರ ಶ್ರೇಷ್ಠ ಪ್ರದರ್ಶನವಾಗಿತ್ತು.  ಮೊದಲ ಪ್ರಯತ್ನದಲ್ಲಿ

ಟೋಕಿಯೋ ಒಲಿಂಪಿಕ್ಸ್: ಕುಸ್ತಿಪಟು ಬಜರಂಗ್ ಪೂನಿಯಾಗೆ ಕಂಚಿನ ಪದಕ

ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇಂದು ನಡೆದ ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿಯ ಕಂಚಿನ ಪದಕಕ್ಕಾಗಿನ ಹೋರಾಟದಲ್ಲಿ ಭಾರತದ ಪೈಲ್ವಾನ ಬಜರಂಗ್ ಪೂನಿಯಾ, ಕಜಕಿಸ್ತಾನದ ದೌಲತ್ ನಿಯಾಜ್‌ಬೆಕೋವ್ ವಿರುದ್ಧ 8-0 ಗೆಲುವು ದಾಖಲಿಸಿದರು. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸುವ ಭರವಸೆಯಾಗಿದ್ದ ಬಜರಂಗ್ ಪೂನಿಯಾ, ಗಾಯದ ಸಮಸ್ಯೆಯಿಂದಾಗಿ ಹಿನ್ನಡೆ ಅನುಭವಿಸಿದರು. ಆದರೂ ದೇಶಕ್ಕಾಗಿ ಕಂಚಿನ ಪದಕ