Home Archive by category ರಾಷ್ಟ್ರೀಯ (Page 6)

ಇಂಡಿಯ ಮೈತ್ರಿಗೆ ಮುತ್ತಡೆ

ಇಂಡಿಯಾ ಮೈತ್ರಿ ಕೂಟದ ಕ್ಷೇತ್ರ ಹಂಚಿಕೆಯು ಪಡುವಣ ಬಂಗಾಳ ಮತ್ತು ಪಂಜಾಬಗಳಲ್ಲಿ ಒಂದು ಸಮಸ್ಯೆ ಆಗಿದೆ. ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಪಶ್ಚಿಮ ಬಂಗಾಳದ 42 ಮತ್ತು ಪಂಜಾಬಿನ 13 ತಮ್ಮ ಆಸ್ತಿ ಎಂದು ನಂಬಿವೆ. ಬಹು ಕಾಲ ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷಗಳು ಬಂಗಾಳದ್ದು ಮತ್ತು ಪಂಜಾಬಿನದು ತಮ್ಮ ಆಸ್ತಿ ಎಂದು ತಿಳಿದಿದ್ದವು. ಆ ಕಾಲವೆಲ್ಲ

ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರ ಭಾರತ ರತ್ನ ಪುರಸ್ಕಾರ

ಜನವರಿ 24 ಸಮಾಜವಾದಿ ಕರ್ಪೂರಿ ಠಾಕೂರ್ ಬದುಕಿದ್ದರೆ ನೂರು ವರುಷ. ಅದರ ಮೊದಲ ದಿನ ಜನವರಿ 23ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಿದರು. 1954ರ ಜನವರಿ 2ರಲ್ಲಿ ಆರಂಭವಾದುದು ಭಾರತ ರತ್ನ ಪ್ರಶಸ್ತಿ. ಇದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಆಗಿದೆ. 1966ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡುವುದು ಆರಂಭವಾಗಿ ಕರ್ಪೂರಿ ಠಾಕೂರ್ ಸೇರಿ 15 ಮಂದಿಗೆ

ಕೊಪ್ಪದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆ

*ಚಿಕ್ಕಮಗಳೂರು:ಮಾರ್ಚ್ 10ರಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಕೊಪ್ಪ ನಾರಾಯಣ ಗುರು ಸಮಾಜ ಸೇವಾ ಸಂಘದಲ್ಲಿ ಅಧ್ಯಕ್ಷರಾದ ಪ್ರಕಾಶ್ ಪೂಜಾರಿಯವರ ನೇತೃತ್ವದಲ್ಲಿ ಜನವರಿ 21ರಂದು ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್,ಉಪಾಧ್ಯಕ್ಷರಾದ ಹರೀಶ್ ಸಾಲ್ಯಾನ್,ಮಹಾಮಂಡಲದ ಸದಸ್ಯರಾದ ರತ್ನಾಕರ್ ಸಾಲ್ಯಾನ್ ಗೋವಾ,ಚಿಕ್ಕಮಂಗಳೂರು ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಹೆಚ್ ಎಂ

ಅಯೋಧ್ಯೆಯಲ್ಲಿ ದ.ಕ. ಜಿಲ್ಲೆಯ ಬಿಜೆಪಿ ಮುಖಂಡರು

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ದೇಶದಲ್ಲೂ ರಾಮಮಂದಿರದ ಉದ್ಘಾಟನೆ ಸಂಭ್ರಮ ಮನೆ ಮಾಡಿದೆ. ರಾಮಲಲ್ಲಾ ಪ್ರತಿಷ್ಠಾಪನೆಯ ಸಂಭ್ರಮದಲ್ಲಿ ಭಾಗಿಯಾಗಲು ಮಂಗಳೂರಿನಿಂದ ಬಿಜೆಪಿಯ ಜಿಲ್ಲಾ ಕೋಶಾಧಿಕಾರಿ ಜಿತೇಂದ್ರ ಕೊಟ್ಟಾರಿಯವರೂ ತೆರಳಿದ್ದಾರೆ. ಅವರ ಜೊತೆಗೆ ಡಾ. ಡಿ ವಿರೇಂದ್ರ ಹೆಗ್ಗಡೆ, ಡಾ. ಕಲ್ಲಡ್ಕ ಪ್ರಭಾಕರ್ ಭಟ್, ನಿಟ್ಟೆ ಸಂಸ್ಥೆಯ ವಿಶಾಲ್ ಹೆಗ್ಡೆ, ಎಂ.ಬಿ. ಪುರಾಣಿಕ್ ದಂಪತಿ, ಸೇರಿದಂತೆ ಜಿಲ್ಲೆಯ ಎಲ್ಲಾ

ಮುಂಬೈ: ಜ.21ರಂದು ಕೋಟಿ ಚೆನ್ನಯ ಸ್ಪೋರ್ಟ್ಸ್ ಮೀಟ್ – 2024

ಬಿಲ್ಲವರ ಎಸೋಸಿಯೇಶನ್ ಮುಂಬಯಿ ವತಿಯಿಂದ ಜ.21ರಂದು ಕೋಟಿ ಚೆನ್ನಯ ಸ್ಪೋರ್ಟ್ಸ್ ಮೀಟ್ 2023-24 ಎಂಬ ಕಾರ್ಯಕ್ರಮವು ಮುಂಬೈನ ಯೂನಿವರ್ಸಿಟಿ ಸ್ಪೋರ್ಟ್ಸ್ ಗ್ರೌಂಡ್ ನ್ಯೂ ಮರೀಸ್ ಲೈನ್ಸ್‌ನಲ್ಲಿ ನಡೆಯಲಿದೆ. ಈ ಕ್ರೀಡೋತ್ಸವವು ಬೆಳಿಗ್ಗೆ 7.30ರಿಂದ ಸಂಜೆ 5 ಗಂಟೆಯವರೆಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಕ್ರೀಡೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಂಬೈ ಬಿಲ್ಲವ ಅಸೋಸಿಯೇಶನ್‌ನ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಹರಿಕಥಾ

ಡಾಲರ್ ಮೇಲೆ ದಿನಾರ್ ವಿಜಯ

ಫೋರ್ಬ್ಸ್ 2023ರ ಲೆಕ್ಕಾಚಾರದ ಮೇಲೆ ಪ್ರಪಂಚದ ಅತಿ ಶಕ್ತಿಯುತ ಚಲಾವಣಾ ಹಣ ಯಾವುದು ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವ್ಯಾಪಕತೆಯ ಯುಎಸ್‍ಎ ಡಾಲರ್‍ನದು ಹತ್ತನೆಯ ಸ್ಥಾನ. ಅದರ ಚಲಾವಣಾ ಬಲ ಕುಸಿದಿದೆ ಎನ್ನಬಹುದು. ಹಣ ಕಂಡರೆ ಹೆಣ ಬಾಯಿ ಬಿಡುತ್ತದೆ ಎಂಬುದು ಗಾದೆ. ಇದು ಕಾಮಿಡಿ ಕಿಲಾಡಿಗಳ ಸರಕಿನಂತೆ ಕಂಡರೂ ಲೋಕದ ಕ್ಷುಲ್ಲಕ ಭೀಕರ ಸತ್ಯಗಳಲ್ಲಿ ಒಂದು. ತಿರುಕನ ಕನಸು ಧನಿಕನಾಗುವುದು. ಆದರೆ ಕಯ್ಯಲ್ಲಿ ನೋಟಿನ ಕಟ್ಟು ಇದ್ದರೂ ಅದಕ್ಕೆ ಏನೂ

ವೈಎಸ್‌ಆರ್ ಸಂಸ್ಥಾಪಕಿ ವೈ. ಎಸ್. ಶರ್ಮಿಳಾ ಕಾಂಗ್ರೆಸ್‌ಗೆ ಸೇರ್ಪಡೆ

ತೆಲಂಗಾಣದಲ್ಲಿ ವೈಎಸ್‌ಆರ್ ಪಕ್ಷವನ್ನು ಸ್ಥಾಪಿಸಿದ್ದ ಹಿಂದಿನ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಆಗಿದ್ದ ರಾಜಶೇಖರ ರೆಡ್ಡಿಯವರ ಮಗಳು ಮತ್ತು ಈಗಿನ ಆಂಧ್ರದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯವರ ಸಹೋದರಿ ವೈ. ಎಸ್. ಶರ್ಮಿಳಾ ಅವರು ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಶರ್ಮಿಳಾ ಅವರು ಕಾಂಗ್ರೆಸ್ ಸೇರಿದ್ದಲ್ಲದೆ ತಮ್ಮ ಪಕ್ಷವನ್ನು ಕಾಂಗ್ರೆಸ್ಸಿನಲ್ಲಿ

ಕುಂದಾಪುರ: ಜರ್ಮನಿಯ ಯುವತಿಯನ್ನು ವರಿಸಿದ ಕುಂದಾಪುರದ ಯುವಕ..!

ಜರ್ಮನಿ ಮೂಲದ ಯುವತಿಯೋರ್ವರು ಕುಂದಾಪುರ ತಾಲೂಕಿನ ಆಜ್ರಿ ಮೂಲದ ಯುವಕ ಜೊತೆ ಹಿಂದೂ ಸಂಪ್ರದಾಯದಂತೆ ಮದುವೆಯಾದ ಘಟನೆ ಕುಂದಾಪುರದಲ್ಲಿ ನಡೆಯಿತು. ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಇವರು ಹಸೆಮಸೆ ಏರಿದ್ದು ಎರಡೂ ಕುಟುಂಬಗಳ ಹಿರಿಯರು ಮದುವೆಗೆ ಸಾಕ್ಷಿಯಾದರು. ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಆಜ್ರಿಯ ಕರಿಮನೆ ಸುವರ್ಣ ಮತ್ತು ಪಂಜು ಪೂಜಾರಿ ದಂಪತಿಯ ಪುತ್ರ ಚಂದನ್ ಹಾಗೂ ಜರ್ಮನಿಯ ಪೆಟ್ರ ಶ್ರೂಆರ್

ಪಂಜಾಬ್ : ಅರ್ಜುನ ಪ್ರಶಸ್ತಿ ವಿಜೇತ ಪೊಲೀಸ್ ಅಧಿಕಾರಿ ಶವವಾಗಿ ಪತ್ತೆ

ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದ ಪಂಜಾಬಿನ ಡಿಎಸ್‌ಪಿ- ಉಪ ಪೊಲೀಸ್  ವರಿಷ್ಠಾಧಿಕಾರಿ ದಲ್ಬೀರ್ ಸಿಂಗ್ ಡಿಯೋಲ್ ಅವರು ಜಲಂಧರಿನಲ್ಲಿ ಮರ್ಮಮಯ ರೀತಿಯಲ್ಲಿ ಸಾವನ್ನಪ್ಪಿರುವುದು ಸೋಮವಾರ ಬೆಳಕಿಗೆ ಬಂದಿದೆ. ಹೊಸ ವರುಷದ ದಿನವೇ ಈ ದುರಂತ ಬೆಳಕಿಗೆ ಬಂದಿದೆ. ರಾತ್ರಿ ಹೊಸ ವರುಷಾಚರಣೆ ಸಂಬಂಧ ದಲ್ಬೀರ್ ಸಿಂಗ್ ಹೋದವರು ಮನೆಗೆ ವಾಪಾಸು ಆಗಿಲ್ಲ. ಹಾಗಾಗಿ ಇಂದು ಮನೆಯವರು ನಾಪತ್ತೆ ದೂರು ದಾಖಲಿಸಿದ್ದರು. ಪೋಲೀಸರು ಹುಡುಕಾಟ ನಡೆಸಿದಾಗ ಜಲಂಧರ್ ಹೊರ ವಲಯದ ಬಸ್ತಿ

ಆಂಧ್ರಪ್ರದೇಶ : ಎಕ್ಸ್‌ ರೇ ಪೋಲಾರಿಮೀಟರ್ ಉಪಗ್ರಹ ಯಶಸ್ವಿ ಉಡಾವಣೆ

ಎಕ್ಸ್‌ ರೇ ಮೂಲಗಳ ನಿಗೂಢತೆ ಹಾಗೂ ಕಪ್ಪುರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಿರ್ಮಿತ ಎಕ್ಸ್‌ ರೇ ಪೋಲಾರಿಮೀಟರ್ ಉಪಗ್ರಹವನ್ನು ಇಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಬೆಳಿಗ್ಗೆ 9.10ಕ್ಕೆ ‘ಎಕ್ಸ್‌ ಪೊಸ್ಯಾಟ್’ ಸೇರಿದಂತೆ ವಿದ್ಯಾಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಸಂಬಂಧಿಸಿದ ಇತರೆ 9 ಉಪಗ್ರಹಗಳನ್ನು