Home Archive by category ಕರಾವಳಿ

ಬಂಟ್ವಾಳ: ಬಿ.ವಿ.ಕಾರಂತ ನೆನೆಪಿನ ಮಂಚಿ ನಾಟಕೋತ್ಸವಕ್ಕೆ ಚಾಲನೆ

ಬಂಟ್ವಾಳ: ಬಿ.ವಿ.ಕಾರಂತ್, ಜಿ.ವಿ. ಅಯ್ಯರ್ ಅವರಂತಹ ಶ್ರೇಷ್ಠ ಸಾಧಕರೊಂದಿಗಿನ ಒಡನಾಟ ನನ್ನ ಬದುಕಿಗೆ ಧನ್ಯತೆ ನೀಡಿದೆ ಎಂದು ಅಂತರಾಷ್ಟೀಯ ಜಾದೂಗಾರ್ ಪ್ರೊ. ಶಂಕರ್ ಹೇಳಿದರು. ಅವರು ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಮಂಚಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರುಇದರ ಸಹಯೋಗದಲ್ಲಿ ಕುಕ್ಕಾಜೆಯ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ಮೂರು ದಿನಗಳ

ಮುಂಡ್ಕೂರು: ನೇಪಥ್ಯಕ್ಕೆ ಸರಿದ ಸಂಕಲಕರಿಯ ಹಿರಿಯ ಪ್ರಾಥಮಿಕ ಶಾಲೆ

ಸುಮಾರು ನೂರು ವರ್ಷಗಳ ಕಾಲ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯ ಬರೆದಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕೊರತೆಯಿಂದ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಂಕಲಕರಿಯ ಪ್ರಾಥಮಿಕ ಶಾಲೆ ಮುಚ್ಚಿ ಹೋಗಿದೆ. ಆಂಗ್ಲ ಮಾಧ್ಯಮ ಶಾಲೆಗಳ ವೈಭವೀಕರಣ ಹಾಗೂ ಪೋಷಕರಿಂದ ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಮೊಹಗಳ ಕಾರಣದಿಂದ ವಿದ್ಯಾರ್ಥಿಗಳ ಕೊರತೆಯಿಂದಾಗಿ ಅನುಪಾತದ ಪರಿಣಾಮವಾಗಿ ಶಿಕ್ಷಕರ ಕೊರತೆಯಿಂದ ಶತಮಾನ ಕಂಡ ಶಾಲೆ, ಮುಚ್ಚಿ ಹೋಗಿದ್ದು

ಮುಂಬಯಿ : ಕ್ರೈಸ್ತ ಸಮುದಾಯದ ಸಂವಹನ ಸಭೆ

ರಾಷ್ಟ್ರದ ಸೇವೆಯಲ್ಲಿ ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯದ ಸೇವೆಯಲ್ಲಿ ಕ್ರೈಸ್ತರ ಕೊಡುಗೆ ಏನೆಂದು ಇಡೀ ವಿಶ್ವಕ್ಕೆ ತಿಳಿದಿದೆ. ದೇಶವನ್ನು ಸುಶಿಕ್ಷಿತರನ್ನಾಗಿಸಿ ಆರೋಗ್ಯವಂತವಾಗಿಸಿದ ಹೆಗ್ಗಳಿಕೆ ಕ್ರೈಸ್ತರದ್ದಾಗಿದೆ. ಇಂತಹ ಕ್ರೈಸ್ತ ಸಮುದಾಯದ ಕಡೆಗಣನೆ ಬರೇ ರಾಜಕೀಯ ಪ್ರೇರಿತವಾಗಿದೆ. ಪ್ರಧಾನಮಂತ್ರಿ ಮೋದಿ ಮತ್ತು ಎನ್‌ಡಿಎ ಕೂಟವು ರಾಷ್ಟ್ರದ ಮೈನಾರಿಟಿ ಮತ್ತು ಮೆಜಾರಿಟಿ ಬಗ್ಗೆ ಮಾತೆತ್ತುವುದೇ ಹಾಸ್ಯಾಸ್ಪದವಾಗಿದೆ ಎಂದು ಮಾಜಿ ಎಂಎಲ್‌ಸಿ ಐವಾನ್ ಡಿ’ಸೋಜಾ

ಉಡುಪಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮ – ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ

ಉಡುಪಿ ಜಿಲ್ಲೆಯ ಕೆಲವು ಗ್ರಾಪಂ ಹಾಗೂ ಉಡುಪಿ ಮತ್ತು ಬೈಂದೂರು ಸ್ಥಳೀಯಾಡಳಿತ ವ್ಯಾಪ್ತಿಯ ಕೆಲವು ಕಡೆ ಈ ಬಾರಿ ನೀರಿನ ಸಮಸ್ಯೆ ತಲೆದೋರಿದ್ದು, ಅಲ್ಲಿಗೆ ನೀರು ಪೂರೈಕೆಗೆ ಅಗತ್ಯ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾದ ಜಿಲ್ಲೆಯ ಕುಡಿಯುವ ನೀರಿನ

ನ್ಯಾಚುರಲ್ ಐಸ್‍ಕ್ರೀಂ ಸಂಸ್ಥೆಯ ಸ್ಥಾಪಕ ರಘುನಂದನ್ ಕಾಮತ್ ನಿಧನ

ನ್ಯಾಚುರಲ್ ಐಸ್‍ಕ್ರೀಂ ಸಂಸ್ಥೆಯ ಸ್ಥಾಪಕ, ಉದ್ಯಮಿ ರಘುನಂದನ್ ಕಾಮತ್ (70) ಅವರು ಅಲ್ಪಕಾಲದ ಅನಾರೋಗ್ಯದಿಂದ ಮುಂಬೈನಲ್ಲಿ ಶುಕ್ರವಾರ ರಾತ್ರಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ರಘುನಂದನ್ ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿಯಲ್ಲಿ ಜನಿಸಿದ್ದರು. ಅವರ ತಂದೆ ಹಣ್ಣಿನ ವ್ಯಾಪಾರಿಯಾಗಿದ್ದರು. ರಘುನಂದನ್ ಚಿಕ್ಕವಯಸ್ಸಿನಲ್ಲಿಯೇ ಮುಂಬೈಗೆ ತೆರಳಿ, ಅಲ್ಲಿ ತಮ್ಮ ಅಣ್ಣನ ರೆಸ್ಟೋರೆಂಟ್‍ನಲ್ಲಿ ಕೆಲಸ ಆರಂಭಿಸಿದರು. 1984ರಲ್ಲಿ ನಾಲ್ವರ

ಉಳ್ಳಾಲ ತಾಲ್ಲೂಕು ಪೆರ್ಮನ್ನೂರು ಕಲ್ಲಾಪು ನಿವಾಸಿ ಪದ್ಮನಾಭ ಮೊನೆಪು (70) ನಿಧನ

ಉಳ್ಳಾಲ ತಾಲ್ಲೂಕು ಪೆರ್ಮನ್ನೂರು ಕಲ್ಲಾಪು ನಿವಾಸಿ ಪದ್ಮನಾಭ ಮೊನೆಪು (70). ದಿನಾಂಕ 17ರಂದು ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. ಅತ್ಯಂತ ಸೌಮ್ಯ ಸ್ವಭಾವದ ಪದ್ಮನಾಭ ಮೊನೆಪು ಸಾಮಾಜಿಕ ಕಾರ್ಯಕರ್ತರು ಮತ್ತು ಸಿ. ಪಿ. ಎಂ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು ಪಕ್ಷದ ವಿವಿಧ ಚಟುವಟಿಕೆಯಲ್ಲಿ ಬಾಗವಹಿಸುತ್ತಿದ್ದರು. ಸ್ಥಳೀಯ ವಿಜಯ ಮಿತ್ರ ಮಂಡಳಿ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಇವರು ಕೂಡ

ಬಂಟ್ವಾಳ: ಬಾವಿಗೆ ಬಿದ್ದ ಮಗುವನ್ನು ರಕ್ಷಿಸಿದ ಉಮೇಶ್ ಮಠದಬೆಟ್ಟು

ಬಂಟ್ವಾಳ: ಸರಪಾಡಿಯ ಹಂಚಿಕಟ್ಟೆಯಲ್ಲಿ ಬಾವಿಗೆ ಬಿದ್ದ ಮಗುವೊಂದನ್ನು ತನ್ನ ಪ್ರಾಣದ ಹಂಗನ್ನು ತೊರೆದು ತುಂಡಾಗುವ ಸ್ಥಿತಿಯಲ್ಲಿದ್ದ ಹಳೆಯ ಹಗ್ಗವನ್ನು ಬಳಸಿ ಮೇಲಕ್ಕೆತ್ತಿದ ಯುವಕನ ಕುರಿತು ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.ಹಂಚಿಕಟ್ಟೆಯ ನೋಣಯ್ಯ ನಾಯ್ಕ ಅವರ ಮನೆಯ ಅಂಗಳದಲ್ಲಿ ಬಾವಿಯೊಂದಿದ್ದು, ಅದಕ್ಕೆ ಕಸ ಬೀಳದಂತೆ ಹಸಿರು ಬಣ್ಣದ ನರ್ಸರಿ ಕಟ್ಟಿದ್ದರು. ಮೇ 14ರಂದು ಸಂಜೆ 6ರ ಸುಮಾರಿಗೆ ಅವರ ಪುತ್ರ ಅಭಿಷೇಕ್ (3) ಮನೆಯ ಅಂಗಳದಲ್ಲಿ ಆಟ ಆಡುತ್ತಿದ್ದನು. ತಾಯಿ

ಮೀನುಗಳಿಗಿಂತ ಮುಂಚೆ ಮರುವಾಯಿ ತಿನಿಸು

ಮೀನು ಪುರಾತನ ಕಾಲದಿಂದಲೂ ಮಾನವನ ಆಹಾರವಾಗಿದೆ. ತುಳು ಕರಾವಳಿಯ ಮುಖ್ಯವಾಗಿ ಮಂಗಳೂರು ಮತ್ತು ಮಲ್ಪೆ ಮೀನುಗಾರಿಕಾ ಬಂದರುಗಳಲ್ಲಿ ಒಟ್ಟಾರೆ ಮೀನು ಸಿಗುವುದು ತೃಪ್ತಿಕರವಾಗಿಲ್ಲ ಎಂದು ವರದಿಯಾಗಿದೆ. ವಹಿವಾಟು ಕೂಡ ಬಿಸಿ ಕಳೆದುಕೊಂಡಿದ್ದು ಮೀನುಗಾರರು ಚಿಂತೆಗೆ ಬಿದ್ದಿದ್ದಾರೆ. ಮಲ್ಪೆ, ಮಂಗಳೂರುಗಳ ಇನ್ನೊಂದು ಸಮಸ್ಯೆಯೆಂದರೆ ಮೀನಿನ ಬೋಟುಗಳು ಇಲ್ಲಿಯವರದೇ ಆದರೂ ಅದರಲ್ಲಿ ಈಗೆಲ್ಲ ದುಡಿಯುವವರು ವಲಸೆ ಕಾರ್ಮಿಕರೇ ಆಗಿದ್ದಾರೆ. ಅವರನ್ನು ನಿಬಾಯಿಸುವ ಸಮಸ್ಯೆಯನ್ನು

ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ. ನರೇಶ್ಚಂದ್ ಹೆಗ್ಡೆ ನಾಮಪತ್ರ ಸಲ್ಲಿಕೆ

ಕರ್ನಾಟಕ ವಿಧಾನ ಪರಿಷತ್ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಜೂನ್ 3ರಂದು ಚುನಾವಣೆ ನಡೆಯಲಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು ನಾಮಪತ್ರ ಸಲ್ಲಿಸಿದರು. ಕರ್ನಾಟಕ ವಿಧಾನ ಪರಿಷತ್‌ನ ನೈಋತ್ಯ ಶಿಕ್ಷಕ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಶಿಕ್ಷಕರೂ, ಖ್ಯಾತ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞರೂ, ಸೇವಾ ಮನೋಭಾವನೆಯ ವೈದ್ಯರು, ಮಾನವೀಯ ಮುಖವುಳ್ಳ ತರುಣರೂ ಆದ ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು

ಮುಂಬೈ: NDA ಸರ್ಕಾರ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲ – ರಮಾನಾಥ ರೈ

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಮುಂಬಯಿ-ಕರ್ನಾಟಕದ ಜನತೆಯ ಜನ್ಮಭೂಮಿ-ಕರ್ಮಭೂಮಿಯ ರೈಲು, ವಿಮಾನ, ಬಸ್ ಪ್ರಯಾಣದ ತೊಂದರೆ ನಿಭಾಯಿಸಲಿದೆ. ಕರ್ನಾಟಕದಂತೆ ಕೇಂದ್ರ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಂಡಿಯಾ ಕೂಟಕ್ಕೆ ವರದಾನವಾಗಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು. ಅವರು ಮುಂಬೈಯ ಅಂಧೇರಿ ಪೂರ್ವದ ಚಕಲಾ ಹೊಟೇಲ್ ಸಾಯಿ ಪ್ಯಾಲೇಸ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಕಳೆದ ಹತ್ತು ವರ್ಷಗಳಲ್ಲಿ ಎನ್‌ಡಿಎ ಸರ್ಕಾರವು