Home ಕರಾವಳಿ Archive by category ಉಳ್ಳಾಳ

ಉಳ್ಳಾಲ ತಾಲ್ಲೂಕು ಪೆರ್ಮನ್ನೂರು ಕಲ್ಲಾಪು ನಿವಾಸಿ ಪದ್ಮನಾಭ ಮೊನೆಪು (70) ನಿಧನ

ಉಳ್ಳಾಲ ತಾಲ್ಲೂಕು ಪೆರ್ಮನ್ನೂರು ಕಲ್ಲಾಪು ನಿವಾಸಿ ಪದ್ಮನಾಭ ಮೊನೆಪು (70). ದಿನಾಂಕ 17ರಂದು ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. ಅತ್ಯಂತ ಸೌಮ್ಯ ಸ್ವಭಾವದ ಪದ್ಮನಾಭ ಮೊನೆಪು ಸಾಮಾಜಿಕ ಕಾರ್ಯಕರ್ತರು ಮತ್ತು ಸಿ. ಪಿ. ಎಂ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು ಪಕ್ಷದ ವಿವಿಧ ಚಟುವಟಿಕೆಯಲ್ಲಿ

ಉಳ್ಳಾಲ: ಚಿಣ್ಣರ ಚಿಗುರು ಮಕ್ಕಳ ಸಂತಸ ಕಲಿಕಾ ಶಿಬಿರ

ಇಂದು ಸೌಹಾರ್ದ ಕಲಾವಿದರು ಕುತ್ತಾರು ಇದರ ಆಶ್ರಯದಲ್ಲಿ ಚಿಣ್ಣರ ಚಿಗುರು ಮಕ್ಕಳ ಸಂತಸ ಕಲಿಕಾ ಶಿಬಿರವು ಉಳ್ಳಾಲದ ಕುತ್ತಾರಿನಲ್ಲಿರುವ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕುತ್ತಾರು ಇಲ್ಲಿ ನಡೆಯಿತು.  ಈ ಶಿಬಿರವನ್ನು ಉದ್ಘಾಟಿಸಿ ಹಿರಿಯ ರಂಗಭೂಮಿ ಕಲಾವಿದರಾದ ಪ್ರಭಾಕರ್ ಕಾಫಿ ಕಾಡಿವರು ಮಾತನಾಡುತ್ತಾ,  ೮೦ರ ದಶಕವನ್ನು ನಾವು ಗಮನಿಸಿದರೆ ಈಗಿನ ಸಮಾಜವು ಬಹಳಷ್ಟು ಬದಲಾಗಿದೆ. ಪ್ರಸ್ತುತ ಸಮಾಜದಲ್ಲಿ ಸೌಹಾರ್ದತೆಯನ್ನು ಕಾಣುವುದು ಮರುಭೂಮಿಯಲ್ಲಿ

ಕಣಚೂರು ನರ್ಸಿಂಗ್ ಸೈನ್ಸ್ ಆಶ್ರಯದಲ್ಲಿ  ಅಂತರರಾಷ್ಟ್ರೀಯ ದಾದಿಯರ ದಿನಾಚರಣೆ ಕಾರ್ಯಕ್ರಮ

ದೇರಳಕಟ್ಟೆ:  ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಕಣಚೂರು ನರ್ಸಿಂಗ್ ಸೈನ್ಸ್ ಇದರ ಆಶ್ರಯದಲ್ಲಿ  ಜರಗಿದ ಅಂತರಾಷ್ಟ್ರೀಯ ದಾದಿಯರ ದಿನಾಚರಣೆ ಕಾರ್ಯಕ್ರಮ ಕಾಲೇಜಿನ ಆಡಿಟೋರಿಯಂನಲ್ಲಿ ನಡೆಯಿತು.  ಕಾಸರಗೋಡು ಮಾಲಿಕ್ ದಿನಾರ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಪ್ರೊ. ಆಲೀಸ್ ಡೇನಿಯಲ್ ಅಂತರಾಷ್ಟ್ರೀಯ ದಾದಿಯರ ದಿನಾಚರಣೆ ಕಾರ್ಯಕ್ರಮ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದಾದಿಯರ ಸೇವೆಯಲ್ಲಿ ಪ್ರಮುಖ ಪಾತ್ರ  ವಹಿಸಿದ ಫ್ಲೋರೇನ್ಸ್ 

2023-24ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟ – ಉಡುಪಿ ಪ್ರಥಮ, ದ.ಕ. ದ್ವಿತೀಯ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ. 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಹಾಗೂ ನಿರ್ದೇಶಕ ಗೋಪಾಲಕೃಷ್ಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ಮಾಹಿತಿ ನೀಡಿದರು. ಈ ಬಾರಿಯ ಫಲಿತಾಂಶ

ಮೇ 9ರಂದು ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟ

2023-24ನೇ ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಮೇ 9ರಂದು ಪ್ರಕಟಗೊಳ್ಳಲಿದೆ. ಮಾರ್ಚ್ 25 ರಿಂದ ಎಪ್ರಿಲ್ 06ರವರೆಗೆ ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈಗ ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ತಿಳಿಸಿದೆ.

ಮಾಲ್ ಗೆ ತೆರಳಿದ ಎರಡು ಮಕ್ಕಳ ತಾಯಿ ನಾಪತ್ತೆ

ಉಳ್ಳಾಲ : ನಗರದ ಸಿಟಿ ಸೆಂಟರ್ ಮಾಲ್ ಗೆಂದು ತೆರಳಿದ್ದ ಚೆಂಬುಗುಡ್ಡೆ ನಿವಾಸಿ ಇಬ್ಬರು ಮಕ್ಕಳ ತಾಯಿ ನಾಪತ್ತೆಯಾಗಿರುವ ಕುರಿತು ಮಂಗಳೂರು ಉತ್ತರ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ.ಚೆಂಬುಗುಡ್ಡೆ ಕೆರೆಬೈಲ್ ಗುಡ್ಡೆ ನಿವಾಸಿ ಸಫಾನ (27) ನಾಪತ್ತೆ ಯಾದವರು.ಎ.28 ರಂದು ತಾಯಿ ಜೊತೆಗೆ ಸಿಟಿಸೆಂಟರ್ ಗೆಂದು ತೆರಳಿರುವ ಸಫಾನ, ಬಳಿಕ ಮನೆಯತ್ತ ಬಾರದೇ ನಾಪತ್ತೆಯಾಗಿದ್ದಾಳೆ. ವಿವಾಹಿತೆಯಾಗಿರುವ ಸಫಾನ ಇಬ್ಬರು ಮಕ್ಕಳ ತಾಯಿಯಾಗಿದ್ದಾಳೆ. ಈಕೆಯನ್ನು

ಕೋಟೆಕಾರು : ಕಾರು ಢಿಕ್ಕಿ – ಪಾದಚಾರಿ ಸಾವು

ಉಳ್ಳಾಲ: ಕಾರು ಢಿಕ್ಕಿ ಹೊಡೆದು ಪಾದಚಾರಿ ಬಿಜೆಪಿ ಕಾರ್ಯಕರ್ತ ಮೃತಪಟ್ಟ ಘಟನೆ ರಾ.ಹೆ.66 ರ ಕೋಟೆಕಾರು ಬಳಿಯ ಅಡ್ಕ ಎಂಬಲ್ಲಿ ನಡೆದಿದೆ. ಕೋಟೆಕಾರು ನೆಲ್ಲಿ ಸ್ಥಳ ಕಾಳಿಕಾಂಬ ದೇವಸ್ಥಾನದ ಬಳಿಯ ನಿವಾಸಿ ಶ್ರೀಕಾಂತ್ (46)ಮೃತರು.ಶ್ರೀಕಾಂತ್ ಆಟೋ ಇಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದರು.ಇಂದು ಮದ್ಯಾಹ್ನ ಅಡ್ಕದಲ್ಲಿ ಹೆದ್ದಾರಿ ದಾಟುತ್ತಿದ್ದ ವೇಳೆ ಕೇರಳದಿಂದ ಧಾವಿಸುತ್ತಿದ್ದ ಕಾರು ಶ್ರೀಕಾಂತ್ಗೆ ಢಿಕ್ಕಿ ಹೊಡೆದಿದೆ.ಗಂಭೀರ ಗಾಯಗೊಂಡ ಶ್ರೀಕಾಂತ್ ರನ್ನು ಅಪಘಾತ

ದ.ಕ ದಲ್ಲಿ ಮತದಾನಕ್ಕೆ ಎಲ್ಲಾ ಸಿದ್ಧತೆ ಪೂರ್ಣ : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಎ.26ರಂದು ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎ.೨೪.ರಂದು ಸಂಜೆ 6ಗಂಟೆಗೆ ಎಲ್ಲಾ ರೀತಿಯ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.ಎ.26ರಂದು ದಕ್ಷಿಣ ಕನ್ನಡ ಜಿಲ್ಲೆಯ 1876ಮತಗಟ್ಟೆಗಳಲ್ಲಿ ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಮತದಾನ ನಡೆಸಲು ಎಲ್ಲಾ ಸಿದ್ದತೆ ಪೂರ್ಣ ಗೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಹಾಗೂ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ

ಉಳ್ಳಾಲ: ಮಲಗಿದ್ದಲ್ಲೇ ಹೃದಯಾಘಾತ : 28ರ ವಿವಾಹಿತ ಸಾವು

ಉಳ್ಳಾಲ: ಕೊಲ್ಯ ಕನೀರುತೋಟ ನಿವಾಸಿ 28 ರ ಹರೆಯದ ವಿವಾಹಿತರೊಬ್ಬರು ಮಲಗಿದ್ದಲ್ಲೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ಇಂದು ಸಂಭವಿಸಿದೆ.ಕನೀರುತೋಟ ನಿವಾಸಿ ಜಿತೇಶ್ (28) ಸಾವನ್ನಪ್ಪಿದವರು ಜಿತೇಶ್ ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದವರು ಬೆಳಿಗ್ಗೆ ಏಳದ ಸಂದರ್ಭ, ಮನೆಮಂದಿ ವಿಚಾರಿಸಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ಕೆಟಿಎಂ ಷೋರೂಮಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿತೇಶ್, ಕೊರೊನಾ ಸಂದರ್ಭ ಪಂಡಿತ್ ಹೌಸ್ ನಿವಾಸಿ

ಉಳ್ಳಾಲ : ರಾಜು ಕೋಟ್ಯಾನ್ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೊಗವೀರ ಪಟ್ಟಣ ನಿವಾಸಿ ರಾಜೇಶ್ ಕೋಟ್ಯಾನ್ ಯಾನೆ ರಾಜು ಕೋಟ್ಯಾನ್ ಎಂಬುವವರ ಕೊಲೆ ನಡೆಸಿದ್ದ ನಾಲ್ಕು ಮಂದಿ ಆರೋಪಿಗಳಿಗೆ  ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಠಾಣಾ ವ್ಯಾಪ್ತಿಯಲ್ಲಿ ಉಳ್ಳಾಲ ಮೊಗವೀರಪಟ್ಟಣ ನಿವಾಸಿ ರಾಜೇಶ್ ಕೋಟ್ಯಾನ್ ಯಾನೆ ರಾಜು ಕೋಟ್ಯಾನ್ ಎಂಬವರನ್ನು 2016ಎಪ್ರಿಲ್ 12 ರಂದು ಆರೋಪಿಗಳು ಬೆಳಗ್ಗಿನ ಜಾವ  ಉಳ್ಳಾಲ ಕೋಟೆಪುರ ಬರಕಾ ಓವರ್ ಸೀಸ್ ಫ್ಯಾಕ್ಟರಿಯ ಬಳಿ ಮರದ ಕಟ್ಟಿಗೆಗಳಿಂದ