Home ಕರಾವಳಿ Archive by category ಪುತ್ತೂರು

ಪುತ್ತೂರು : ವೈದ್ಯರ ಎಡವಟ್ಟಿನಿಂದ ವ್ಯಕ್ತಿ ಸಾವು

ಪುತ್ತೂರು : ವೈದ್ಯರ ಎಡವಟ್ಟಿಗೆ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ರಾತ್ರೋರಾತ್ರಿ ರೋಗಿಯ ಸಂಬಂಧಿಕರು ಮತ್ತು ಸಾರ್ವಜನಿಕರು ಆಸ್ಪತ್ರೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಕಕ್ಕೆಪದವಿನ ಪಿಲಿಬೈಲ್ ನಿವಾಸಿ ಕೃಷ್ಣಪ್ಪ ಗೌಡ ಎಂಬವರು ಜ್ವರದ ಕಾರಣ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ

ಪುತ್ತೂರು ನಗರ ವ್ಯಾಪ್ತಿಯಲ್ಲಿ ಗಾಳಿಮಳೆ- ಮರ ಬಿದ್ದು ಮನೆಗೆ ಹಾನಿ

ಪುತ್ತೂರು: ಭಾನುವಾರ ಸಂಜೆ ಪುತ್ತೂರು ನಗರ ವ್ಯಾಪ್ತಿಯಲ್ಲಿ ಭಾರೀ ಗಾಳಿಮಳೆ ಬಂದಿದ್ದು ಬಪ್ಪಳಿಗೆಯ ಸಿಂಗಾಣಿ ಎಂಬಲ್ಲಿ ಮನೆಯ ಮೇಲೆ ಮರ ಬಿದ್ದು ಬಾಗಶ: ಜಖಂಗೊಂಡಿದ್ದು, ಮನೆ ಮಂದಿ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಬಪ್ಪಳಿಗೆಯ ಸಿಂಗಾಣಿಯ ಕಮಲ ಎಂಬaವರ ಮನೆಯ ಮಾಡಿನ ಶೀಟು ಗಾಳಿಗೆ ಹಾರಿ ಹೋಗಿದ್ದು, ಉರ್ಲಾಂಡಿಯಲ್ಲಿ ಶೋಭಾ ಹೆಗ್ಡೆ ಎಂಬವರ ಮನೆಯ ಮೇಲೆ ಮರ ಬಿದ್ದು ಬಾಗಶ: ಜಖಂಗೊಂಡಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಸುದ್ದಿ ತಿಳಿದು ತಕ್ಷಣ

ಧಾರವಾಡ: ವಾಹನ ಅಪಘಾತದಲ್ಲಿ ಶಿವಕುಮಾರ್ ಕೌಡಿಚ್ಚಾರ್ ಮೃತ್ಯು

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಮಾಜಿ ಅಧ್ಯಕ್ಷ ಶಿವಕುಮಾರ್ ಕೌಡಿಚ್ಚಾರ್ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಉದ್ಯೋಗ ನಿಮಿತ್ತ ಧಾರವಾಡದಲ್ಲಿ ವಾಸ್ತವ್ಯ ಹೊಂದಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಮೃತ ಶರೀರ ದಾರವಾಡ ಸರಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಕುಟುಂಬಸ್ಥರು ಈಗಾಗಲೇ ಧಾರವಾಡ ಕಡೆ ಪ್ರಯಾಣ ಬೆಳೆಸಿದ್ದಾರೆ.

2023-24ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟ – ಉಡುಪಿ ಪ್ರಥಮ, ದ.ಕ. ದ್ವಿತೀಯ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ. 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಹಾಗೂ ನಿರ್ದೇಶಕ ಗೋಪಾಲಕೃಷ್ಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ಮಾಹಿತಿ ನೀಡಿದರು. ಈ ಬಾರಿಯ ಫಲಿತಾಂಶ

ಮೇ 9ರಂದು ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟ

2023-24ನೇ ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಮೇ 9ರಂದು ಪ್ರಕಟಗೊಳ್ಳಲಿದೆ. ಮಾರ್ಚ್ 25 ರಿಂದ ಎಪ್ರಿಲ್ 06ರವರೆಗೆ ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈಗ ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ತಿಳಿಸಿದೆ.

ಪುತ್ತೂರು: ಮುಖ್ಯ ರಸ್ತೆಗೆ ಬಿದ್ದ ಮಾವಿನ ಮರ: ಸಾರ್ವಜನಿಕರು, ವಾಹನ ಚಾಲಕರು ಪಾರು

ಪುತ್ತೂರು: ಬೊಳುವಾರಿನಲ್ಲಿ ಮಾವಿನ ಮರವೊಂದು ರಸ್ತೆಗೆ ಬಿದ್ದು  ಸಾರ್ವಜನಿಕರು, ವಾಹನ ಚಾಲಕರು ಅಪಾಯದಿಂದ ಪಾರಾದ ಘಟನೆ ನಡೆದಿದೆ. ಘಟನಾ ಸ್ಥಳಕ್ಮೆ ಶಾಸಕರುಭೇಟಿ ನೀಡಿ ಪರಿಶೀಲನೆ ನಡೆಸಿದು, ಮರ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಮಧ್ಯಮ ಗಾತ್ರದ ಮಾವಿನ ಮರ ರಸ್ತೆಗೆ ಮುರಿದು ಬಿದ್ದಿತ್ತು. ಸಾರ್ವಜನಿಕರು, ವಾಹನಗಳು ರಸ್ತೆಯಲ್ಲಿ ಸಂಚರಿಸುತಿದ್ದರೂ ಯಾವುದೇ ಅಪಾಯ ಉಂಟಾಗಿಲ್ಲ. ಮಾವಿನ ಮರ ಬಿದ್ದ ಸುದ್ದಿ ತಿಳಿದು ಸ್ಥಳಕ್ಕೆ ಬಂದ

ಚುನಾವಣಾ ಆಯೋಗದ ನಿಯಮ ಮೀರಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ : ಜುಬಿನ್

ಪುತ್ತೂರು: ಏಪ್ರಿಲ್ 26ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನ ಸಂದರ್ಭದಲ್ಲಿ ಪ್ರತೀ ಮತಗಟ್ಟೆಯ ಹೊರಗೆ ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ತಮ್ಮದೇ ಆದ ಬೂತ್ ತೆರೆಯಲು ಅವಕಾಶವಿದ್ದರೂ ಇದಕ್ಕೆ ಕಟ್ಟುನಿಟ್ಟಿನ ನಿಯಮಗಳು ಅನ್ವಯವಾಗುತ್ತವೆ ಎಂದು ಪುತ್ತೂರು ಸಹಾಯಕ ಆಯುಕ್ತರೂ, ಸಹಾಯಕ ಚುನಾವಣಾ ಅಧಿಕಾರಿಗಳೂ ಆಗಿರುವ ಜುಬಿನ್ ಮೊಹಾಪಾತ್ರ ಹೇಳಿದರು. ಈ ಬಗ್ಗೆ ಮಾಹಿತಿ ನೀಡಿದ ಅವರು, ಮತಗಟ್ಟೆಯ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ

ದ.ಕ ದಲ್ಲಿ ಮತದಾನಕ್ಕೆ ಎಲ್ಲಾ ಸಿದ್ಧತೆ ಪೂರ್ಣ : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಎ.26ರಂದು ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎ.೨೪.ರಂದು ಸಂಜೆ 6ಗಂಟೆಗೆ ಎಲ್ಲಾ ರೀತಿಯ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.ಎ.26ರಂದು ದಕ್ಷಿಣ ಕನ್ನಡ ಜಿಲ್ಲೆಯ 1876ಮತಗಟ್ಟೆಗಳಲ್ಲಿ ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಮತದಾನ ನಡೆಸಲು ಎಲ್ಲಾ ಸಿದ್ದತೆ ಪೂರ್ಣ ಗೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಹಾಗೂ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ

ಪುತ್ತೂರು: ದಿ. ಬೆಳ್ಯಪ್ಪ ಗೌಡ ಪೆರ್ಲಂಪಾಡಿ ಅವರಿಗೆ ನುಡಿನಮನ

ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಬೆಳ್ಯಪ್ಪ ಗೌಡ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ಪೆರ್ಲಂಪಾಡಿಯ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಬೆಳ್ಯಪ್ಪ ಗೌಡರು ಕಳೆದ 50 ವರ್ಷಗಳಿಂದ ಹೊಟೇಲ್ ಉದ್ಯಮದಲ್ಲಿ ತೊಡಗಿಕೊಂಡಿದ್ದು, ಹಸಿವಿನಿಂದ ಬಂದವರಿಗೆ ಅನ್ನದಾತರಾಗಿದ್ದರು. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಎಪ್ರಿಲ್ 7ರಂದು ನಿಧನರಾಗಿದ್ದರು.

ಪುತ್ತೂರು: ಅಪಾಯಕಾರಿ ತಿರುವು ತೆರವಿಗೆ ಶಾಸಕರ ಸೂಚನೆ

ಮಾಣಿ – ಮೈಸೂರು ರಾ.ಹೆದ್ದಾರಿ 275 ರ ಆರ್ಯಾಪು ಗ್ರಾಪಂ ವ್ಯಾಪ್ತಿಯ ಕಲ್ಲರ್ಪೆಯಲ್ಲಿ ಅಪಾಯಕಾರಿ ತಿರುವು ಇದ್ದು ಅದನ್ನು ಶಾಸಕರಾದ ಅಶೋಕ್ ರೈ ವೀಕ್ಷಣೆ ಮಾಡಿದರು. ಈ ತಿರುವಿನಲ್ಲಿ ಅನೇಕ ವಾಹನ ಅಫಘಾತಗಳು ನಡೆದಿದ್ದು ಮೂವರು ಮೃತಪಟ್ಟ ಘಟನೆಯೂ ನಡೆದಿತ್ತು. ಇಲ್ಲಿರುವ ಅಪಾಯಕಾರಿ ಧರೆಯನ್ನು ತೆರವು ಮಾಡಿ ವಾಹನ ಸಂಚಾರ ಗೋಚರಿಸುವಂತೆ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಶಾಸಕರಿಗೆ ಅನೇಕ ಮಂದಿ ಮನವಿಯನ್ನು ಮಾಡಿದ್ದರು. ಈ