Home Archive by category Fresh News (Page 46)

ಪುತ್ತೂರು: ಶ್ರೀ ರಾಮಶ್ವ ಯಾತ್ರೆಗೆ ಚಾಲನೆ

ಪುತ್ತೂರು: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಶ್ರೀ ರಾಮಲಲ್ಲ,ನ ಪ್ರತಿಷ್ಠಾಪನ ಪ್ರಯುಕ್ತ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಶ್ರೀ ರಾಮನ ದಿಗ್ವಿಜಯದ ಸಂಕೇತವಾಗಿ ಸೀಮೆಗೆ ಸಂಬಂಧಿಸಿ ಮೂರು ದಿವಸ ಪುತ್ತೂರು ತಾಲೂಕಿನ ದೇವಸ್ಥಾನಗಳಿಗೆ ಭೇಟಿ ನೀಡಲಿರುವ ಶ್ರೀ ರಾಮಶ್ವ ಯಾತ್ರೆಗೆ ದೇವಳದ ರಥ ಬೀದಿಯಲ್ಲಿ ಚಾಲನೆ ನೀಡಲಾಯಿತು. ಬೆಳಿಗ್ಗೆ

ಮಂಡೆಕೋಲು: ಗುಂಪಿನಿಂದ ಬೇರ್ಪಟ್ಟ ಮರಿ ಆನೆ

ಆನೆಗಳ ಗುಂಪಿನಲ್ಲಿದ್ದ ಮರಿಯಾನೆಯೊಂದು ಗುಂಪುನಿಂದ ಬೇರ್ಪಟ್ಟು ಒಂಟಿಯಾಗಿ ಜನವಸತಿ ಪ್ರದೇಶದಲ್ಲೇ ಬಾಕಿಯಾದ ಘಟನೆ ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ನಡೆದಿದೆ.ಇಂದು ಬೆಳಗ್ಗೆ ಗುಂಪಿನಿಂದ ಬೇರ್ಪಟ್ಟ ಮರಿಯಾನೆ ಮಂಡೆಕೋಲಿನ ಕನ್ಯಾನ ಎಂಬಲ್ಲಿ ಇರುವುದು ಕಂಡುಬಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಮಿಸಿದ್ದಾರೆ.ರಾತ್ರಿ ವೇಳೆ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆ ಗುಂಪಿನಿಂದ ಮರಿಯಾನೆ ತಪ್ಪಿಸಿಕೊಂಡು ಬೇರ್ಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮರಿಯಾನೆಯನ್ನು ಆನೆಗಳ

ಮೂಡುಬಿದಿರೆ: ಜ.21ರಂದು ಸ್ಫೂರ್ತಿ ಕಲಾ ಸಂಭ್ರಮ

ಮೂಡುಬಿದಿರೆ: ರಿಜ್ಯುವನೇಟ್ ಚೈಲ್ಡ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ತರಬೇತಿ ಕೇಂದ್ರದ ಆಶ್ರಯದಲ್ಲಿ ಸ್ಫೂರ್ತಿ ಕಲಾ ಸಂಭ್ರಮ 2024 ಕಾರ್ಯಕ್ರಮವು ಜ.21ರಂದು ಅರಮನೆಬಾಗಿಲು ಬಳಿಯಿರುವ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಶಾಲೆಯ ಸಂಸ್ಥಾಪಕ ಪ್ರಕಾಶ್ ಜೆ.ಶೆಟ್ಟಿಗಾರ್ ತಿಳಿಸಿದರು.ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.ಕಲಾಮೇಳದಲ್ಲಿ ಆಹಾರಮೇಳದ

ಮೂಡುಬಿದಿರೆ : ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ವಾಹನಗಳಿಗೆ ಲಾಕ್ ಹಾಕಿದ ಪೊಲೀಸರು

ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ವಾಹನಗಳಿಗೆ ಲಾಕ್ ಹಾಕಿದ ಪೊಲೀಸರು ಮೂಡುಬಿದಿರೆ : ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಆವರಣದ ನೋ-ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡಿರುವ ವಾಹನಗಳಿಗೆ ಮೂಡುಬಿದಿರೆ ಪೊಲೀಸರು ಗುರುವಾರ ಸಂಜೆ ಲಾಕ್ ಮಾಡಿ ಎಚ್ಚರಿಕೆ ನೀಡಿದ ಘಟನೆ ನಡೆಯಿತು.ಮೂಡುಬಿದಿರೆಯ ಬಸ್ ನಿಲ್ದಾಣದ ಆವರಣದಲ್ಲಿ ಖಾಸಗಿ ವ್ಯಕ್ತಿಗಳು ಕಾರು, ಆಟೋ, ಓಮ್ನಿ ಹಾಗೂ ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಎಲ್ಲೆಲ್ಲಿಗೋ ಹೋಗಿ ಎಷ್ಟೋ

ಕುಂದಾಪುರ: ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು

ಕುಂದಾಪುರ : ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಆನೆಗುಡ್ಡೆ ಶ್ರೀವಿನಾಯಕ ದೇವಳದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕುಂದಾಪುರ ಪೊಲೀಸ್ ರು ಭೇಧಿಸಿದ್ದಾರೆ. ಬೀಬಿಜಾನ್ ಶೇಖ್ (58) ಮತ್ತು ಪಾರವ್ವ ಸಿರಗಹಳ್ಳಿ (54) ಕಳ್ಳತನ ಪ್ರಕರಣದಲ್ಲಿ ಬಂಧಿತರು. ಲೋಕೇಶ್ ಮಂಜುನಾಥ ನಾಯ್ಕ ಅವರು ಸುಮಾರು 53.900 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಹಾಗೂ ಸುಮಾರು 4 ಗ್ರಾಂ ತೂಕದ ಚಿನ್ನದ ಉಂಗುರವನ್ನು ಖರೀದಿ ಮಾಡಿ ಪರ್ಸಿನಲ್ಲಿಟ್ಟು, ಪತ್ನಿಯ ವ್ಯಾನಿಟಿ

ಡಾಲರ್ ಮೇಲೆ ದಿನಾರ್ ವಿಜಯ

ಫೋರ್ಬ್ಸ್ 2023ರ ಲೆಕ್ಕಾಚಾರದ ಮೇಲೆ ಪ್ರಪಂಚದ ಅತಿ ಶಕ್ತಿಯುತ ಚಲಾವಣಾ ಹಣ ಯಾವುದು ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವ್ಯಾಪಕತೆಯ ಯುಎಸ್‍ಎ ಡಾಲರ್‍ನದು ಹತ್ತನೆಯ ಸ್ಥಾನ. ಅದರ ಚಲಾವಣಾ ಬಲ ಕುಸಿದಿದೆ ಎನ್ನಬಹುದು. ಹಣ ಕಂಡರೆ ಹೆಣ ಬಾಯಿ ಬಿಡುತ್ತದೆ ಎಂಬುದು ಗಾದೆ. ಇದು ಕಾಮಿಡಿ ಕಿಲಾಡಿಗಳ ಸರಕಿನಂತೆ ಕಂಡರೂ ಲೋಕದ ಕ್ಷುಲ್ಲಕ ಭೀಕರ ಸತ್ಯಗಳಲ್ಲಿ ಒಂದು. ತಿರುಕನ ಕನಸು ಧನಿಕನಾಗುವುದು. ಆದರೆ ಕಯ್ಯಲ್ಲಿ ನೋಟಿನ ಕಟ್ಟು ಇದ್ದರೂ ಅದಕ್ಕೆ ಏನೂ

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ : ಕರ್ನಾಟಕ ಸರಕಾರದ ಘೋಷಣೆ

ಕರ್ನಾಟಕ ಸರಕಾರವು ಶರಣ ಚಳವಳಿಯ ಹರಿಕಾರ ಬಸವಣ್ಣನವರನ್ನು ಕನ್ನಡ ನಾಡಿನ ಸಾಂಸ್ಕøತಿಕ ನಾಯಕ ಎಂದು ಘೋಷಿಸಿದ್ದಾರೆ. ಇದನ್ನು ರಾಜ್ಯದ ಜನತೆ ಅಮೋಘವಾಗಿ ಸ್ವಾಗತಿಸಿದೆ. ಕರ್ನಾಟಕ ಶರಣ ಪರಿಷತ್, ನಾನಾ ಮಠಾಧೀಶರುಗಳು ಇದನ್ನು ಸ್ವಾಗತಿಸಿ ಹೇಳಿದ್ದಾರೆ. ವೇದದ ಹೇರಿಕೆ, ಸಂಸ್ಕøತದ ಹೇರಿಕೆ, ವೈದಿಕ ಧರ್ಮದ ಹೇರಿಕೆ ಇವುಗಳನ್ನು ಅಲ್ಲಗಳೆದು ಕರುನಾಡಿನ ಕನ್ನಡ, ನೆಲ ಧರ್ಮವನ್ನು ನಾಟಿದ್ದು ಶರಣ ಪಥ. ಆ ದಾರಿಯ ಆಯ್ಕೆ ಸಹಜವಾದದ್ದಾಗಿದೆ. ಆದರೆ ಜಾರಿ ಅಷ್ಟು ಸುಲಭವಲ್ಲ

ವಿಟ್ಲ: ಶಾಲಾ ಬಸ್ ಮತ್ತು ಬೈಕ್

ವಿಟ್ಲ: ಶಾಲಾ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ವಿಟ್ಲದ ಚಂದಳಿಕೆ ಎಂಬಲ್ಲಿ ನಡೆದಿದೆ. ವಿಟ್ಲ ಕಡೆಯಿಂದ ಚಂದಳಿಕೆ ಕಡೆಗೆ ಶಾಲಾ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದ್ದ ಬಸ್ ಚಂದಳಿಕೆ ಮಾಡತ್ತಡ್ಕ ತಿರುವಿಗೆ ತಿರುಗುತ್ತಿದ್ದಂತೆ ಹಿಂದಿನಿಂದ ಬಂದ ಬೈಕ್ ಬಸ್ ಗೆ ಡಿಕ್ಕಿ ಹೊಡೆದಿದೆ. ಘಟನೆ ಯಿಂದ ಬೈಕ್ ನಲ್ಲಿದ್ದ ಐಟಿಐ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು

ಬಾಲ ಬಸುರಿಯರ ಲೋಕ

ಕರ್ನಾಟಕದಲ್ಲಿ 49,000 ಅಪ್ರಾಪ್ತ ಗರ್ಭಿಣಿಯರು ಇದ್ದಾರೆ. ಇದು ಬಿಗಡಾಯಿಸಿರುವ ಸಮಸ್ಯೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಹೇಳಿದ್ದಾರೆ. ಕಲ್ಯಾಣ ಕರ್ನಾಟಕವೆಂಬೊ ಮಾಜೀ ಹೈದರಾಬಾದ್ ಕರ್ನಾಟಕ ಮತ್ತು ಗೌಡರ ಮಂಡ್ಯ ಜಿಲ್ಲೆಯಲ್ಲಿ ಬಾಲ ಬಸುರಿಯರ ಸಂಖ್ಯೆ ಅಗಣಿತ ಎಂದೂ ಅವರು ಹೇಳಿದ್ದಾರೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಮರು ಸಮೀಕ್ಷೆ ನಡೆಸುವ ಕಜ್ಜದಲ್ಲಿ ಅವರು ಈಡುಗೊಂಡಿದ್ದಾರೆ. ಬಾಲ ಬಸುರಿಯರು

ನೆಲ್ಯಾಡಿ: ಶ್ರೀರಾಮ ವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯ ನಗರ ನೆಲ್ಯಾಡಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಕಾರ್ಯಕ್ರಮವು ನಡೆಯಿತು.ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ರಾಜೇಶ್ ಕೆ.ವಿ., ಅವರು ಆಗಮಿಸಿ ‘ನಾಗರಿಕ ಶಿಷ್ಟಾಚಾರ’ದ ಕುರಿತು ಮಾಹಿತಿಯನ್ನು ನೀಡಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಕಡಬ ತಾಲೂಕಿನ ವಕೀಲರಾದ ಶ್ರೀಮತಿ ರಶ್ಮಿ ಅಶೋಕ್ ಆಗಮಿಸಿ ‘ಕಾನೂನು ಅರಿವು’ ವಿಷಯಕ್ಕೆ ಸಂಬಂಧಪಟ್ಟಂತೆ