Home Archive by category Fresh News (Page 52)

ರಾಜ್ಯದ ಜವಾಬ್ದಾರಿ ಮರೆತು ಕೇಂದ್ರವನ್ನು ದೂರಬೇಡಿ : ಕೋಟ ಶ್ರೀನಿವಾಸ್ ಪೂಜಾರಿ

ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆ 10 ವರ್ಷಗಳ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಎನ್‌ಡಿಆರ್‌ಎಫ್ ಎಸ್‌ಡಿಆರ್‌ಎಫ್ ನಿಧಿ ಬಂದಿದೆ ಎಂದು ವಿಧಾನ ಪರಿಷತ್ತು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೋಟ

ಜಗದೀಶ್ ಶೆಟ್ಟರ್ ಬಿಜೆಪಿಗೆ ಮರು ಸೇರ್ಪಡೆ ಖುಷಿ ಕೊಟ್ಟಿದೆ : ಕೋಟ ಶ್ರೀನಿವಾಸ ಪೂಜಾರಿ

ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರಳುತ್ತಾರೆ ಎಂಬ ನಿರೀಕ್ಷೆ ಇತ್ತು. ನಮ್ಮ ಸಿದ್ದಾಂತದ ಜೊತೆ ಸುದೀರ್ಘಕಾಲ ಗುರುತಿಸಿಕೊಂಡಿದ್ದವರು. ಶೆಟ್ಟರ್ ಅವರಂತಹ ಸೈದ್ಧಾಂತಿಕ ಹಿನ್ನೆಲೆಯವರಿಗೆ ಬೇರೆ ಪಕ್ಷ ಒಗ್ಗಿಕೊಳ್ಳಲು ಕಷ್ಟ. ಪಕ್ಷದ ಶಕ್ತಿ ವೃದ್ಧಿಯಾಗುತ್ತದೆ ಎಂಬ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಉಡುಪಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಗದೀಶ್ ಶೆಟ್ಟರ್ ಮರು ಸೇರ್ಪಡೆಯಿಂದ

ಮಂಗಳೂರು: ಜ.26ರಂದು ಕರುನಾಡ ವೈಭವ-2024

ಅವಿನಾಶ್ ಪೋಕ್ ಡಾನ್ಸ್ ಮಂಗಳೂರು ಅರ್ಪಿಸುವ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಕರುನಾಡ ವೈಭವ 2024 ರಾಜ್ಯಮಟ್ಟದ ವಿವಿಧ ವಿನೋಧಾವಳಿ ಸ್ಪರ್ಧೆಯು ಜನವರಿ 26ರಂದು ಉರ್ವಸ್ಟೋರ್‌ನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಈ ಬಗ್ಗೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವಿನಾಶ್ ಅವರು, ಕಾರ್ಯಕ್ರಮಕ್ಕೆ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ಮೇಯರ್

ಕಾರ್ಕಳ : ರಕ್ಷಿತ್ ಪಡ್ರೆಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ

ಕಾರ್ಕಳ ಹಿರ್ಗಾನ ಶ್ರೀಕುಂದೇಶ್ವರ ಕ್ಷೇತ್ರ ವತಿಯಿಂದ ತೆಂಕು- ಬಡಗು ತಿಟ್ಟಿನ ಕಲಾ ಸವ್ಯಸಾಚಿ ರಕ್ಷಿತ್‌ ಪಡ್ರೆಗೆ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿಯನ್ನು ಜಾತ್ರೆಯ ಸಾಂಸ್ಕೃತಿಕ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.ಪ್ರಶಸ್ತಿ ಪ್ರದಾನ ಮಾಡಿದ ಕೇಮಾರು ಸಾಂದೀಪನಿ ಆಶ್ರಮದ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಬ್ರಹ್ಮದೇವ ಬ್ರಹ್ಮಲೋಕದವರು, ವಿಷ್ಣು ವೈಕುಂಠಲೋಕದಿಂದ ಭೂಲೋಕಕ್ಕೆ ಬರುವವರು ಆದರೆ ಈಶ್ವರ ಮಾತ್ರ ಭಾರತದೇಶದ ಹಿಮಾಲಯದ ಕೈಲಾಸದವರು. ಹೀಗಾಗಿ ಈಶ

ಮೂಡುಬಿದಿರೆ: ಯೆನೆಪೋಯದಲ್ಲಿ ರೋಬಸ್ಟ್ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್

ಮೂಡುಬಿದಿರೆ: ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೆಷಿನ್ ಲರ್ನಿಂಗ್ ವಿಭಾಗದ ಸಹಯೋಗದೊಂದಿಗೆ ಯೆನಾರ್ಟಿಫಿಷಿಯಾ ವಿದ್ಯಾರ್ಥಿ ಸಂಘದ ವತಿಯಿಂದ ಅನ್‌ಸ್ಕ್ರ್ಯಾಂಬಲ್ 2.0 ರಾಷ್ಟ್ರೀಯ ಹ್ಯಾಕಥಾನ್ ಸ್ಪರ್ಧೆ ನಡೆಯಿತು. ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಕ್ಯಾಂಪಸ್ ರಿಲೇಶನ್‌ಶಿಪ್ ಮ್ಯಾನೇಜರ್ ಲಕ್ಷ್ಮೀ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಿಮ್ಮಲ್ಲಿ ನೀವು ನಂಬಿಕೆ

ಬೆಂಗಳೂರು : ಒಡೆಯರ್, ಹಂಸಲೇಖರಿಗೆ ಸಿಟಿ ಇನ್‌ಸ್ಟಿಟ್ಯೂಟ್ ಗೌರವ

ಬೆಂಗಳೂರಿನ ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ಇದೇ ಪ್ರಜಾಪ್ರಭುತ್ವದ ದಿನ ಮಾದರಿ ಮೈಸೂರು ನಿರ್ಮಾಪಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮೂರ್ತಿ ತೆರದಿಡಲಾಗುತ್ತಿದೆ. ಸಿಟಿ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಕೆ. ಸುಕುಮಾರ್ ಈ ಮಾಹಿತಿ ನೀಡಿದರು. ಅವರು ಮುಂದುವರಿದು ಕೃಷ್ಣರಾಜ ಒಡೆಯರ್ ಮತ್ತು ಸಂಗೀತ ದಿಗ್ಗಜ ಹಂಸಲೇಖ ಅವರಿಗೆ ಸಿಟಿ ಇನ್‌ಸ್ಟಿಟ್ಯೂಟ್‌ನ ಗೌರವ ಸದಸ್ಯತ್ವವನ್ನು ಗಣರಾಜ್ಯೋತ್ಸವದ ದಿನ ನೀಡಲಾಗುವುದು ಎಂದೂ ಅವರು ಹೇಳಿದರು. ಗಾಂಧೀಜಿಯವರಿಂದ ರಾಜರ್ಷಿ ಎಂದು

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಮಹಿಳಾ ಶಕ್ತಿ ಪಯಣ ಹೆಚ್ಚಳ

ಮಂಗಳೂರು ಮತ್ತು ಪುತ್ತೂರು ವಿಭಾಗದ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಶಕ್ತಿ ಯೋಜನೆಯ ಅನುಕೂಲ ಪಡೆದು 7 ತಿಂಗಳಲ್ಲಿ ಪಯಣಿಸಿದ ಮಹಿಳೆಯರಿಗೆ 2.8 ಕೋಟಿ ಟಿಕೆಟ್ ನೀಡಿಕೆ ಆಗಿದೆ. ಈ ಟಿಕೆಟ್‌ಗಳ ಒಟ್ಟು ದರ 9.15 ಕೋಟಿ ರೂಪಾಯಿ. ಆರಂಭದ ಜೂನ್ ತಿಂಗಳಿನಲ್ಲಿ 20,87,658 ಇದ್ದ ಟಿಕೆಟ್ ನೀಡಿಕೆ ಹೆಚ್ಚುತ್ತ ಬಂದಿದ್ದು ಜನವರಿ ತಿಂಗಳಲ್ಲಿ ತಿಂಗಳು ಮುಗಿಯುವುದಕ್ಕೆ ಮೊದಲೆ 26,96,261ತಲುಪಿದೆ.

ಮಂಗಳೂರು: ಕುಳಾಯಿ ಕಿರುಜೆಟ್ಟಿ ಕಾಮಗಾರಿ ಪ್ರದೇಶಕ್ಕೆ ಸಂಸದ ನಳಿನ್ ಭೇಟಿ, ಪರಿಶೀಲನೆ

ಕುಳಾಯಿಯಲ್ಲಿ ನಿರ್ಮಾಣವಾಗುತ್ತಿರುವ ಕಿರು ಜೆಟ್ಟಿಯು ನಾಡದೋಣಿ ಮೀನುಗಾರರಿಗೆ ಅನುಕೂಲವಾಗುತ್ತಿಲ್ಲ. ಈಗಿನ ಬ್ರೇಕ್ ವಾಟರ್ ನಿರ್ಮಾಣ ಅವೈಜ್ನಾನಿಕವಾಗಿದ್ದು, ನಾಡದೋಣಿಕೆ ಪೂರಕವಾಗಿ ನಿರ್ಮಿಸಲಾಗುತ್ತಿಲ್ಲ. ಮೀನುಗಾರರು ಪ್ರಾಣ ಭೀತಿಯಲ್ಲಿದ್ದಾರೆ ಎಂದು ನಾಡದೋಣಿ ಮೀನುಗಾರರು ಹಾಗೂ ಸಾಂಪ್ರದಾಯಿಕ ಮೂಲ ಮೀನುಗಾರರ ಸಂಘಟನೆಗಳು ಸಂಸದ ನಳಿನ್ ಕುಮಾರ್ ಕಟೀಲ್ ಮುಂದೆ ಅಸಮಾಧಾನ ತೋಡಿಕೊಂಡರು. ಕುಳಾಯಿಯ ಕಿರು ಜೆಟ್ಟಿ ಕಾಮಗಾರಿ ಪ್ರದೇಶಕ್ಕೆ ಸಂಸದ ನಳಿನ್ ಕುಮಾರ್

ಯಶಸ್ವಿನಿ ಆರೋಗ್ಯ ವಿಮೆ ನವೀಕರಣಕ್ಕೆ ಫೆ.28 ಕೊನೆಯ ದಿನಾಂಕ

ಬೆಳ್ಳಾರೆ. ಯಶಸ್ವಿನಿ ಆರೋಗ್ಯ ವಿಮೆ ನವೀಕರಿಸಲು ಮತ್ತು ಹೊಸ ನೋಂದಣಿಗೆ 28 ಫೆಬ್ರವರಿ 2024 ಕೊನೆಯ ದಿನಾಂಕವಾಗಿರುತ್ತದೆ. *ಯಶಸ್ವಿನಿ ಆರೋಗ್ಯ ವಿಮೆ ನವೀಕರಿಸಲು ಬೇಕಾಗಿರುವ ದಾಖಲೆಗಳು:*ಎಲ್ಲಾ ನೋಂದಾಯಿತ ಸದಸ್ಯರ ಫೋಟೋ*ಹೊಸ ಸದಸ್ಯರ ಸೇರ್ಪಡೆ ಇದ್ದಲ್ಲಿ ಅವರ ಆಧಾರ್ ಪ್ರತಿ ಹಾಗೂ ರೇಷನ್ ಕಾರ್ಡು ಪ್ರತಿ*ಹೊಸ ನೋಂದಣಿಗೆ ಬೇಕಾಗುವ ದಾಖಲೆಗಳು*ರೇಷನ್ ಕಾರ್ಡು ಪ್ರತಿ*ಎಲ್ಲಾ ನೊಂದಾಯಿಸುವ ಸದಸ್ಯರ ಆಧಾರ್ ಕಾರ್ಡು ಪ್ರತಿ*ಎಲ್ಲಾ ನೊಂದಾಯಿಸುವ ಸದಸ್ಯರ

ಆಲಂಕಾರು: ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಡಾಟಾ ಸೈನ್ಸ್ ಕಾರ್ಯಾಗಾರ

ಆಲಂಕಾರು :ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ಪುತ್ತೂರು ಇದರ ಸಹಯೋಗದಲ್ಲಿ, ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿ ಮತ್ತೆ ಮತ್ತು ಡಾಟಾ ಸೈನ್ಸ್ ನ ಕುರಿತಾದ ಕಾರ್ಯಾಗಾರ ನಡೆಯಿತು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ನ ತೃತೀಯ ವರ್ಷದ ವಿದ್ಯಾರ್ಥಿಗಳಾದ ಜೀವಿತ್, ಆಕಾಶ್ ಪಿ, ಧನುಷ್ ಕುಮಾರ್, ಗಗನ್ ಕೆ, ಅಶ್ವಿಜ ಯು ಪೈ ಹಾಗೂ ಅನುಶ್ರೀ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಸುಮಾರು 64