Home Archive by category Fresh News (Page 56)

ಉಳ್ಳಾಲ: ನೇತ್ರಾವತಿ ಸೇತುವೆ ಡಿವೈಡರ್ ಗೆ ಗುದ್ದಿದ ಬೈಕ್, ಸವಾರ ಸ್ಥಳದಲ್ಲೇ ಸಾವು

ಉಳ್ಳಾಲ: ಡಿವೈಡರ್ ಗೆ ಬೈಕ್ ಢಿಕ್ಕಿ ಹೊಡೆದು ಸವಾರ ಸಾವನ್ನಪ್ಪಿರುವ ಘಟನೆ ರಾ.ಹೆ. 66 ರ ನೇತ್ರಾವತಿ ಸೇತುವೆಯಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.ಬಾಗಲಕೋಟೆ ನಿವಾಸಿ ಸುರೇಶ್ (30) ಮೃತರು. ಕಲ್ಲಾಪು ಸಲಫಿ ಮಸೀದಿ ಸಮೀಪ ಕುಟುಂಬ ಸಮೇತರಾಗಿ ಹಲವು ವರ್ಷಗಳಿಂದ ಬಾಡಿಗೆಯಲ್ಲಿದ್ದರು. ಮಂಗಳೂರಿನ ಬುಲೆಟ್ ಷೋರೂಮಿನಲ್ಲಿ ಕೆಲಸಕ್ಕಿದ್ದ ಸುರೇಶ್, ಬಳಿಕ

ಮೂಡುಬಿದಿರೆ : ಜ.26ರಂದು ಮೂಡುಬಿದಿರೆಯಲ್ಲಿ ‘ಮಾನವ ಸರಪಳಿ’

ಎಸ್.ಕೆ.ಎಸ್.ಎಸ್.ಎಫ್ ದ.ಕ.ಜಿಲ್ಲಾ ವೆಸ್ಟ್ ಸಮಿತಿಯ ವತಿಯಿಂದ ಜ.26 ರಂದು ಮೂಡುಬಿದಿರೆಯಲ್ಲಿ ‘ಮಾನವ ಸರಪಳಿ’ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಿ.ಎ.ಉಸ್ಮಾನ್ ಹಾಜಿ ಏರ್ ಇಂಡಿಯಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಪ್ರತಿ ವರ್ಷ ಜ.26 ಗಣರಾಜ್ಯೋತ್ಸವದಂದು ಜಿಲ್ಲಾ ವ್ಯಾಪ್ತಿಯಲ್ಲಿ ‘ಮಾನವ ಸರಪಳಿ’ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು ಈ ವರ್ಷ ಕೂಡಾ

ಗುಜರಾತ್ ಪೋಲೀಸರಿಗೆ ಜೈಲೇ ಗತಿ

ಜನರನ್ನು ಕಂಬಕ್ಕೆ ಕಟ್ಟಿ ಹೊಡೆಯಲು ನಿಮಗೆ ಅಧಿಕಾರ ಇದೆಯೇ? ಹೋಗಿ ಜೈಲು ಸಿಕ್ಷೆ ಅನುಭವಿಸಿ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗವಾಯಿಯವರು ಕೋಪದಿಂದ ಹೇಳಿದರು. ಅಲ್ಲದೆ ಸರ್ವೋಚ್ಚ ನ್ಯಾಯಾಲಯವು ಶಿಕ್ಷಿತ ಪೋಲೀಸರಿಗೆ ಛೀಮಾರಿ ಹಾಕಿತು. ಇನ್ಸ್‍ಪೆಕ್ಟರ್ ಎ. ವಿ. ಪರ್ಮಾರ್, ಸಬ್ ಇನ್ಸ್‍ಪೆಕ್ಟರ್ ಡಿ. ಬಿ. ಕುಮಾವತ್ ಮತ್ತು ಇಬ್ಬರು ಕಾನ್‍ಸ್ಟೇಬಲ್‍ಗಳು ಶಿಕ್ಷಿತ ಪೋಲೀಸರು. ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ, ಸಂದೀಪ್

ಬೆಳ್ತಂಗಡಿ: ಎಳನೀರು ಪ್ರದೇಶದಲ್ಲಿ ರಸ್ತೆ ವೀಕ್ಷಿಸಿದ ಶಾಸಕಿ ನಯನ ಮೋಟಮ್ಮ

ಬೆಳ್ತಂಗಡಿಯ ದಿಡುಪೆಯಿಂದ ಸಂಸೆ ರಸ್ತೆಯನ್ನು ಮಾಡಲು ಶೀಘ್ರದಲ್ಲಿ ಅಧಿಕಾರಿಗಳನ್ನು ಕರೆದು ಮಾತನಾಡುತ್ತೇನೆ ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹೇಳಿದರು. ಅವರು, ಬೆಳ್ತಂಗಡಿ ತಾಲೂಕಿನ ಎಳನೀರು ಪ್ರದೇಶದಲ್ಲಿ ರಸ್ತೆ ವೀಕ್ಷಿಸಿ ಅವರು ಮಾತನಾಡಿದರು. ಕಲಸ ಹೊರನಾಡು ಈ ಪ್ರದೇಶದ ಜನರಿಗೆ ಹಾಸ್ಪಿಟಲ್, ವಿದ್ಯಾಭ್ಯಾಸ ಹಾಗೂ ವಿವಿಧ ಕ್ಷೇತ್ರಕ್ಕೆ ಸುಬ್ರಹ್ಮಣ್ಯ ಧರ್ಮಸ್ಥಳಕ್ಕೆ ಹೋಗಲು ಇದು ಬಹಳ ಹತ್ತಿರ ಇರುವುದರಿಂದ ಈ ರಸ್ತೆಯನ್ನು ಸರಿಪಡಿಸಲು ಸಂಬಂಧಪಟ್ಟ ಅರಣ್ಯ

ಹೆಬ್ಬೆರಳು ಚೀಪುವುದು ಯಾಕೆ?

ಸಣ್ಣ ಮಕ್ಕಳು ಬಾಯಲ್ಲಿ ಕೈಬೆರಳು ಹಾಕಿ ಚೀಪುವುದು ಸಾಮಾನ್ಯ ಲಕ್ಷಣ. ಇದೇನೂ ಬಹಳ ದೊಡ್ಡ ಸಮಸ್ಯೆ ಏನಲ್ಲ. ಸಾಮಾನ್ಯವಾಗಿ ಚಿಕ್ಕ ಮಕ್ಕಳು ಸುಸ್ತಾದಾಗ, ಬೇಸರವಾದಾಗ, ನಿದ್ದೆ ಬರುವ ಹೊತ್ತಲ್ಲಿ, ಸಾಂತ್ವನದ ಅವಶ್ಯಕತೆ ಇದ್ದಾಗ ಹೆಬ್ಬೆರಳನ್ನು ಚೀಪುವುದು ಕಂಡು ಬರುತ್ತದೆ. ಈ ಬೆರಳು ಚೀಪುವ ಅಭ್ಯಾಸ ಗರ್ಭಾವಸ್ಥೆಯ (15ನೇ ವಾರದಲ್ಲಿ) ಆರಂಭವಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಗರ್ಭಾಶಯದ ಒಳಗೆ ಮಗು ದಿನಕ್ಕೆ ನೂರಾರು ಬಾರಿ ಆಕಳಿಸುತ್ತದೆ ಎಂದೂ

ಸುಳ್ಯ: ಜನರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಬದ್ಧ: ಸಚಿವ ದಿನೇಶ್ ಗುಂಡೂರಾವ್

ಸರಕಾರದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ಹಾಗೂ ಜನರ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಬದ್ಧವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಹೇಳಿದ್ದಾರೆ. ಅವರು ಸುಳ್ಯ ಕೆವಿಜಿ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಲು ಜನತಾ ದರ್ಶನ

ಉಡುಪಿ: ರಾಮನ ಹೆಸರಿನಲ್ಲಿ ಬಿಜೆಪಿ ರಾಜಕಾರಣ: ಸಚಿವ ಶಿವರಾಜ್ ತಂಗಡಗಿ

ಅಯೋಧ್ಯೆ ವಿಚಾರದಲ್ಲಿ ನಾವು ಅಂತರ ಕಾಯ್ದುಕೊಂಡಿಲ್ಲ, ನಾವು ಕೂಡ ರಾಮ ಮತ್ತು ಆಂಜನೇಯನ ಭಕ್ತರೇ.. ಬಿಜೆಪಿ ರಾಮನನ್ನು ರಾಜಕೀಯಕರಣ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಉಡುಪಿಯಲ್ಲಿ ಬಿಜೆಪಿ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ ಸಚಿವರು.ಧರ್ಮ ಇದ್ದರೆ ಮಾತ್ರ ಬಿಜೆಪಿಗೆ ರಾಜಕಾರಣ ಮಾಡಲು ಸಾಧ್ಯ, ಬಿಜೆಪಿಗೆ ಅಭಿವೃದ್ಧಿ ಮತ್ತು ಬಡವರ ಚಿಂತನೆ ಬೇಕಾಗಿಲ್ಲ. ಎಷ್ಟು ಜನರಿಗೆ ನೀರಾವರಿ ವ್ಯವಸ್ಥೆ ಮಾಡಿದ್ದೀರಿ ಉದ್ಯೋಗ

ಬೆಳ್ತಂಗಡಿ: ಬಾಲರಾಮ ಪ್ರತಿಷ್ಠಾಪನೆ ಐತಿಹಾಸಿಕ ದಿನ-ಕನ್ಯಾಡಿ ಶ್ರೀ

ಜನವರಿ 22ರಂದು ನಮಗೆ ಐತಿಹಾಸಿಕ ದಿನ ಎಂದು ಕನ್ಯಾಡಿ ಶ್ರೀಗಳು ಹೇಳಿದರು. ಅವರು ಬೆಳ್ತಂಗಡಿ ತಾಲೂಕಿನ ಕನ್ಯಾಡಿ ನಿತ್ಯಾನಂದ ನಗರದ ಶ್ರೀರಾಮ ದೇವಸ್ಥಾನದಲ್ಲಿ ಮಾತನಾಡಿ, ಸುಮಾರು 500 ವರ್ಷಗಳ ಹೋರಾಟದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನೆ ನಡೆಯುತ್ತಿದೆ. ಇವತ್ತು ನಮ್ಮ ಕನಸು ನನಸಾಗಿದೆ. ಹಲವಾರು ಮಂದಿ ಕರಸೇವಕರ ಬಲಿದಾನದಿಂದ ಇವತ್ತು ಭವ್ಯರಾಮ ಮಂದಿರ ನಿರ್ಮಾಣವಾಗಿದೆ. ಇದಕ್ಕೆ ಹೋರಾಟ ಮಾಡಿದ ಎಲ್ಲರಿಗೂ ಶ್ರೀರಾಮ ದೇವರ ಆಶೀರ್ವಾದ ಇರಲಿ

ಬೆಳ್ತಂಗಡಿ : ಅಯೋಧ್ಯೆಯಲ್ಲಿ ಕರ ಸೇವಕರಾಗಿ ಪಟ್ರಮೆಯ ದೇವಪಾಲ ಅಜ್ರಿ

ಅಯೋಧ್ಯೆಯಲ್ಲಿ ಕರ ಸೇವಕರಾಗಿ ಕೆಲಸ ಮಾಡಿದ ಬೆಳ್ತಂಗಡಿ ತಾಲೂಕಿನ ಹಲವಾರು ಮಂದಿ ಇದ್ದಾರೆ. ಅದರಲ್ಲಿ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ದೇವಪಾಲ ಅಜ್ರಿ ಎಂಬವರು ಕೂಡ ಒಬ್ಬರು. ಅವರು 1991-92ರಲ್ಲಿ ಅಯೋಧ್ಯೆಗೆ ಹೋಗಿದ್ದರು. ಅಲ್ಲಿ ಕಷ್ಟಪಟ್ಟು ದಿನಗಳನ್ನು ವಿವರಿಸಿದ ಅವರು, ನಮ್ಮ ಹೋರಾಟದ ಫಲ ಇವತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಿದೆ ಇದು ಇಡೀ ಜಗತ್ತಿಗೇ ಸಂತೋಷದ ವಿಚಾರ ಎಂದು ಹೇಳಿದರು.

ಮಿಜೋರಾಂನ ಲೆಂಗ್‍ಪುಯಿಯಲ್ಲಿ ಬಿದ್ದ ವಿಮಾನ

ಮ್ಯಾನ್ಮಾರ್ ಮಿಲಿಟರಿ ವಿಮಾನವೊಂದು ಭಾರತದ ಮಿಜೋರಾಂನ ಲೆಂಗ್‍ಪುಯಿಯಲ್ಲಿ ನೆಲಕ್ಕೆ ವೇಗವಾಗಿ ಒರೆಸಿದ್ದು ಅದರಲ್ಲಿದ್ದ ಗಾಯಗೊಂಡ 14 ಜನರನ್ನು ಲೆಂಗ್‍ಪುಯಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸ್ಥಳೀಯ ಡಿಜಿಪಿ ಹೇಳಿದ್ದಾರೆ. ಮಂಗಳವಾರ ಮ್ಯಾನ್ಮಾರ್ ವಿಮಾನವು ಲೆಂಗ್‍ಪುಯಿ ವಿಮಾನ ನಿಲ್ದಾಣಕ್ಕೆ ಬಡಿದು ಕೆಳಗಿಳಿದಿದೆ. ಪೈಲಟ್ ಸಹಿತ ಅದರಲ್ಲಿದ್ದ 14 ಮಂದಿ ಗಾಯಗೊಂಡಿದ್ದಾರೆ. ಕೂಡಲೆ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.