ಕೋಸ್ಟಲ್‍ವುಡ್ ಪ್ರೀಮಿಯರ್ ಲೀಗ್‍ನ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಿತು

ಕೋಸ್ಟಲ್‍ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ(ರಿ) ಇದರ 7ನೇ ವರ್ಷದ ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ ನ ಆಟಗಾರರ ಆಯ್ಕೆ ಪ್ರಕ್ರಿಯೆ ನಗರದ ನಂತೂರಿನ ಸಿಓಡಿಪಿ ಸಭಾಂಗಣದಲ್ಲಿ ನಡೆಯಿತು. ಚಾಲೆಂಚಿಂಗ್ ಸ್ಟಾರ್, ಬ್ಲಾಕ್ ಪ್ಯಾಂತರ್ಸ್, ವಿಜಯಲಕ್ಷ್ಮಿ ವಿರಾಸ್, ಅಸ್ತ್ರ ಬಿಗ್ರೇಡ್, ಕೋಸ್ಟಲ್ ವುಡ್ ಥಂಡರ್, ಶೆಟರ್ ಬಾಕ್ಸ್ ಬುಲ್ಸ್, ಅಮ್ಮ ವಾರಿಯರ್ಸ್, ಉಡುಪಿ ಯುನೈಡೆಟ್ ತಂಡಗಳು ಪಂದ್ಯಾಟದಲ್ಲಿ ಸೆಣೆಸಾಡಲಿದೆ. ಆಯ್ಕೆ ಪ್ರಕ್ರಿಯೆಯನ್ನು ಗಣೇಶ್ ಅವರು ನಡೆಸಿಕೊಟ್ಟರು. ಕ್ಯಾಟ್ಕಾದ ನೂತನ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅವರ ನೇತೃತ್ವದಲ್ಲಿ ಫೆ.22ರಿಂದ 26ರ ತನಕ ಸಿಪಿಎಲ್ 2023 ಸೀಸನ್ 7, ಕ್ರಿಕೆಟ್ ಪಂದ್ಯಾಟ ನಗರದ ನೆಹರೂ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಕಾರ್ಯಕ್ರಮದ ಮುಖ್ಯ ಪ್ರಾಯೋಜಕತ್ವವನ್ನು ರಾಜನ್ ಗೋಲ್ಡ್ಸ್ & ಫೈನಾನ್ಸ್ , ಶ್ರೀ ವಿಟ್ಲ ಶೆಟ್ಟಿ ಫೌಂಡೇಶನ್ ವಹಿಸಿದ್ದು ಸಹ ಪ್ರಾಯೋಜಕರಾಗಿ ಸನ್ ಪ್ರೀಮಿಯಂ, ನಂದಿನಿ, ಕಾಂಚನಾ ಮೋರ್ಟಾಸ್, ಹಂಪನಕಟ್ಟೆಯ ಕೆ.ಎಸ್.ರಾವ್ ರೋಡ್ ನ ಎಸ್. ಎಲ್.ಶೇಟ್ ಜುವೆಲ್ಸರ್ ಆಂಡ್ ಡೈಮಂಡ್ಸ್, ಎಸ್.ಸಿ.ಡಿ.ಸಿಸಿ ಬ್ಯಾಂಕ್, ಸ್ಯಾಡೀಸ್ ಕಂಪನಿ, ಸಿನಿ ಗ್ಯಾಲಕ್ಸಿ, ಕೋಸ್ಟಲ್ ಕ್ಯಾಮೆರಾ ರೆಟೇಲ್ಸ್, ರಾಯಲ್ ರೇಜಂರ್ಸ್ ಮುಖಾಂತರ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಇನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಮುಖ್ಯ ಅತಿಥಿಯಾಗಿ ಸ್ಥಾಪಕಾಧ್ಯಕ್ಷರಾದ ಅಶ್ವಿನಿ ಕೋಟ್ಯಾನ್, ಗೌರವಾಧ್ಯಕ್ಷರಾದ ಕಿಶೋರ್ ಡಿ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಮೋಹನ್ ಕೊಪ್ಪಳ, ಪಮ್ಮಿ ಕೊಡಿಯಾಲ್ ಬೈಲ್, ಸಂಘಟನಾ ಕಾರ್ಯದರ್ಶಿ ಅಸ್ಗರ್ ಮುಡಿಪು ಭಾಗವಹಿಸಿದ್ದರು. ಇನ್ನು ಫೆ.20ರಂದು ಸಿನಿ ಆಟಗಾರರ ರ್ಯಾಲಿಯು ಮಂಗಳೂರು ನಗರದಾದ್ಯಂತ ನಡೆಯಲಿದೆ. ಸಿಪಿಎಲ್ ಕ್ರಿಕೆಟ್ ಪಂದ್ಯಾಟದ 5 ದಿನಗಳ ನೇರ ಪ್ರಸಾರವೂ ವಿ4 ನ್ಯೂಸ್ ನ ಯ್ಯೂಟಬ್ ನಲ್ಲಿ ಮೂಡಿಬರಲಿದೆ.

Related Posts

Leave a Reply

Your email address will not be published.