Header Ads
Breaking News

ಪ್ರಭಾತ್ ಚಿತ್ರಮಂದಿರದಲ್ಲಿ ಲೂಸೀಫರ್ ಮಲಯಾಳಂ ಚಿತ್ರ ಹೌಸ್‌ಫುಲ್ ಪ್ರದರ್ಶನ

ಮಂಗಳೂರಿನ ಹೆಸರಾಂತ ಸುಚಿತ್ರ ಪ್ರಭಾತ್ ಚಿತ್ರಮಂದಿರದಲ್ಲಿ ಕಂಡು ಬಂತು ಅಕ್ಷರಶಃ ಜನಜಂಗುಳಿ, ಮೊಹಲ್ ಲಾಲ್ ಅಭಿನಯದ ಲೂಸೀಫರ್ ಮಲಯಾಳಂ ಚಿತ್ರ ದಿನವಿಡೀ ಕಾಣುತ್ತಿದೆ ಹೌಸ್ ಫುಲ್ ಪ್ರದರ್ಶನ. ಇಲ್ಲಿದೆ ಈ ಬಗ್ಗೆ ಕಂಪ್ಲೀಟ್ ಸ್ಟೋರಿ……

ಹೌದು ಮಂಗಳೂರಿನಲ್ಲಿ ಹೈಟೆಕ್ ಸೆಡ್ಡು ಹೊಡೆದು ಆರಂಭಗೊಂಡ ಸುಚಿತ್ರ ಪ್ರಭಾತ್ ಚಿತ್ರಮಂದಿರ ಹೈಟೆಕ್ ಟಚ್ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ೪ಕೆ ಹೆಚ್.ಡಿ ಡೋಲ್ಬಿ ಎಟ್ಮೋಸ್ ನೊಂದಿಗೆ ಹವ ನಿಯಂತ್ರಣ ಹೊಂದಿರುವ ಉತ್ತಮ ಚಿತ್ರಮಂದಿರ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. ನಿನ್ನೆಯಿಂದ ಮೋಹಲ್ ಲಾಲ್ ಅಭಿನಯದ ಬಹು ನಿರೀಕ್ಷಿತ ಮಲಯಾಳಂ ಚಿತ್ರ ಲೂಸಿಫರ್ ೨ ಸ್ಕ್ರೀನ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಆದರೆ ತಮ್ಮ ನೆಚ್ಚಿನ ನಟನ ಚಿತ್ರವನ್ನು ವೀಕ್ಷಿಸಲು ಸಿನಿಪ್ರೀಯರು ಮುಗಿಬೀಳುತ್ತಿದ್ದಾರೆ. ಉತ್ತಮ ಪ್ರತಿಕ್ರಿಯೆ ದೊರಕಿದ ಕಾರಣ ಜನರ ಒತ್ತಾಯದ ಮೇರೆಗೆ ಇಂದಿನಿಂದ ದಿನದವಿಡೀ ಪ್ರದರ್ಶನವಾಗಲಿದೆ.
ಈ ಸಂದರ್ಭ ಸುಚಿತ್ರ ಪ್ರಭಾತ್ ಚಿತ್ರಮಂದಿರದ ಮ್ಯಾನೆಜರ್ ಸುಬ್ರಾಯ ಪೈ ಮಾತನಾಡಿ ಮೋಹಲ್ ಲಾಲ್ ಅಭಿನಯದ ಬಹು ನಿರೀಕ್ಷಿತ ಮಲಯಾಳಂ ಚಿತ್ರ ಲೂಸಿಫರ್ ಪ್ರದರ್ಶನ ಕಾಣುತ್ತದೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತದೆ ದಿನವಿಡೀ ಹೌಸ್ ಫುಲ್ ಪ್ರದರ್ಶನ ಕಾಣುತ್ತದೆ. ಜನರು ಅನುಕೋಲಕ್ಕೊಸ್ಕರ ದಿನವಿಡಿ ಪ್ರದರ್ಶಿಸುತ್ತಿದ್ದೇವೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಒಟ್ಟಿನಲ್ಲಿ ಸುಚಿತ್ರ ಪ್ರಭಾತ್ ಚಿತ್ರಮಂದಿರ ಉತ್ತಮ ಚಿತ್ರಮಂದಿರವಾಗಿದ್ದು. ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ…..

Related posts

Leave a Reply

Your email address will not be published. Required fields are marked *