Header Ads
Header Ads
Header Ads
Breaking News

ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ

ಮಂಜೇಶ್ವರ : ಆಡಳಿತ ವೈಫಲ್ಯವನ್ನು ಮರೆಮಾಚಲು ಕೇರಳದ ಪಿಣರಾಯಿ ವಿಜಯನ್ ಸರಕಾರವು ವಿರೋಧಿಗಳ ಮೇಲೆ ದಮನ ನೀತಿ ಅನುಸರಿಸುತ್ತಿದ್ದು, ಈ ದುರಹಂಕಾರ ಮತ್ತು ದುರಾಡಳಿತಕ್ಕೆ ಸಿಪಿಎಂ ಗರಿಷ್ಠ ಬೆಲೆ ತೆರಬೇಕಾದೀತು ಎಂದು ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರಾದ ಹರ್ಷಾದ್ ವರ್ಕಾಡಿ ಎಚ್ಚರಿಸಿದ್ದಾರೆ.

ಪಾಲಕ್ಕಾಡ್ ಜಿಲ್ಲೆಯ ವಾಳಯಾರ್ ನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಬಾಲಕಿಯರ ಕೊಲೆ, ಅತ್ಯಾಚಾರ ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಪಾತ್ರರಿಗೆ ಅಂಕ ದಾನ ಮಾಡಿದ ಕ್ರಿಮಿನಲ್ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕೆ ಎಸ್ ಯು ಕಾರ್ಯಕರ್ತರು ನಡೆಸಿದ ಶಾಂತಿಯುತ ಸೆಕ್ರಟರಿಯೇಟ್ ಮಾರ್ಚ್ ಮೇಲೆ ಪೊಲೀಸರು ನಡೆಸಿದ ಪೈಶಾಚಿಕ ಲಾಠಿ ಚಾರ್ಜ್ ಮತ್ತು ಶಾಸಕ ಶಾಫಿ ಪರಂಬಿಲ್ ಹಾಗೂ ಕೆ.ಎಸ್ ಯು ರಾಜ್ಯಾಧ್ಯಕ್ಷ ಕೆಎಂ ಅಭಿಜಿತ್ ಮೇಲಿನ ಕ್ರೂರ ಹಲ್ಲೆಪ್ರತಿಭಟಿಸಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹೊಸಂಗಡಿಯಲ್ಲಿ ನಡೆಸಲಾದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಬೋರ್ಕಳ, ಮಂಡಲ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಶಾಪಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಇಬ್ರಾಹಿಂ ಐಆರ್ ಡಿಪಿ, ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್, ಸಂಕಬೈಲು ಸತೀಶ ಅಡಪ, ನಾಗೇಶ್ ಮಂಜೇಶ್ವರ ಮುಂತಾದವರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *