Header Ads
Header Ads
Header Ads
Breaking News

ವಿಟ್ಲದ 7 ಗ್ರಾಮಗಳ ಜನರ ಬಹು ವರ್ಷಗಳ ಬೇಡಿಕೆಗೆ ಸರ್ಕಾರ ಸ್ಪಂದನೆ ಕುದ್ದುಪದವುವಿನಲ್ಲಿ ನಿರ್ಮಾಣಗೊಳ್ಳಲಿದೆ ವಿದ್ಯುತ್ ಉಪ ವಿಭಾಗ ಸರ್ವೇ ಕಾರ್ಯ ಕೈಗೆತ್ತಿಕೊಂಡ ಕೆಪಿಸಿಟಿಸಿಎಲ್

 

ವಿಟ್ಲದ ಎಳು ಗ್ರಾಮಗಳ ಜನರ ಬಹುವರ್ಷಗಳ ಬೇಡಿಕೆಗೆ ಸರ್ಕಾರ ಮುಂದಾಗಿದ್ದು, ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಕೇಪು ವಿದ್ಯುತ್ ಉಪ ವಿಭಾಗ ಕೇಂದ್ರದ ಸರ್ವೇ ಕಾರ್ಯ ನಡೆಯಿತು.

ಪೆರುವಾಯಿ, ಪುಣಚ, ಅಳಿಕೆ, ಕೇಪು, ಮಾಣಿಲ, ಕನ್ಯಾನ, ಕರೋಪಾಡಿ ಗ್ರಾಮಗಳಿಗೆ ವಿಟ್ಲ ಉಪವಿಭಾಗದಿಂದ ವಿದ್ಯುತ್ ಸರಬರಾಜು ಆಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಕೇಪು ಗ್ರಾಮದಲ್ಲಿ ವಿದ್ಯುತ್ ಉಪವಿಭಾಗ ನಿರ್ಮಾಣ ಮಾಡಬೇಕೆಂದು ಮನವಿ ಸಲ್ಲಿಸಿದ್ದರು. ಅದಲ್ಲದೇ ಕೇಪು ಗ್ರಾಮ ಪಂಚಾಯಿತಿನ ಸಾಮಾನ್ಯ ಸಭೆಯಲ್ಲಿ ಕುದ್ದುಪದವು ಎಂಬಲ್ಲಿ 4 ಎಕರೆ ಜಾಗವನ್ನು ಕಾಯ್ದಿರಿಸಲಾಗಿತ್ತು. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹಾಗೂ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರ ವಿಶೇಷ ಮುತುವರ್ಜಿಯಲ್ಲಿ ವಿದ್ಯುತ್ ಉಪಕೇಂದ್ರಕ್ಕೆ ಅನುಮೋದನೆ ಸಿಕ್ಕಿದೆ. ಕೆಪಿಟಿಸಿಎಲ್ ಹಾಗೂ ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳು ಸ್ಥಳ ಪರಿಶೀಲನೆ ಹಾಗೂ ಸರ್ವೇ ಕಾರ್ಯ ಕೈಗೆತ್ತಿಕೊಂಡಿದ್ದಾರೆ.ಕೆಪಿಟಿಸಿಎಲ್ ಎಂಜಿನಿಯರ್ ಸತೀಶ್, ಬಸವರಾಜ್, ಗೇರು ಅಭಿವೃದ್ಧಿ ನಿಗಮದ ಸುರೇಶ್, ಸತೀಶ್, ರವಿಪ್ರಸಾದ್, ಸರ್ವೇ ಅಧಿಕಾರಿ ಮಂಜಗೌಡ, ಉಕ್ಕುಡ ಮೆಸ್ಕಾಂ ಶಾಖಾಧಿಕಾರಿ ಆನಂದ ಎಂ, ಗ್ರಾಮ ಕರಣಿಕಿ ಚಂದ್ರಕಲಾ ಮೊದಲಾದವರು ಸರ್ವೇ ಕಾರ್ಯ ನಡೆಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಎಂ.ಎಸ್ ಮಹಮ್ಮದ್, ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ, ಸದಸ್ಯ ಅಬ್ದುಲ್ ಕರೀಂ ಕುದ್ದುಪದವು, ದಯಾನಂದ, ಪುರುಷೋತ್ತಮ ಕಲ್ಲಂಗಳ, ಅಳಿಕೆ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್ ಶೆಟ್ಟಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ್ ರೈ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಯಕ್ ಮಾಣಿಲ, ಸ್ಥಳೀಯರಾದ ಭಾಸ್ಕರ್ ನಾಯಕ್ ಉಪಸ್ಥಿತರಿದ್ದರು. ಮೆಸ್ಕಾಂ ಸಿಬ್ಬಂದಿಗಳಾದ ಸಂಜೀವ ಹಾಗೂ ಲಿಂಗಪ್ಪ ಸಹಕರಿಸಿದರು. 

Related posts

Leave a Reply