ಚಿನ್ನದ ಗಂಟಿನ ದೇಶಗಳು

ಭಾರತದಲ್ಲಿ 15 ದಿನಗಳಲ್ಲಿ ಚಿನ್ನದ ಬೆಲೆ 1,650 ರೂಪಾಯಿ ಕಡಿಮೆ ಆಗಿದೆ ಎಂಬುದು ಸುದ್ದಿ. ಹಿಂದೆ ಸಾವಿರಗಟ್ಟಲೆ ಏರಿದ್ದು ಹಳಸಿದ ಸುದ್ದಿ. ಇದರ ನಡುವೆ ಫೋರ್ಬ್ಸ್ 2023ರ ಆಧಾರದ ಮೇಲೆ 2024ರಲ್ಲಿ ಲೋಕದ ಸ್ವರ್ಣ ಸಾಮ್ರಾಜ್ಯಗಳ ಪಟ್ಟಿ ಬಿಡುಗಡೆ ಮಾಡಿದೆ.

ಅನ್ನದಾತುರಕಿಂತ ಚಿನ್ನದಾತುರ ಮೇಲೆ, ಅದನ್ನೂ ಮೀರಿಸಿದ್ದು ಹೆಣ್ಣು ಗಂಡೊಲವು, ಅದನ್ನು ಮೀರಿಸುವುದು ಮನ್ನಣೆ ಸನ್ಮಾನದ ತುಡಿತ ಎನ್ನಲಾಗಿದೆ. ಚಿನ್ನದಾತುರವನ್ನು ಪ್ಲಾಟಿನಂ ಕೆಲವೆಡೆ ಮುರಿದಿದೆ. ಹೆಣ್ಣು ಗಂಡೊಲವು ಅನಾಹುತಗಳ ನಡುವೆಯೂ ಕೂಡಿ ಬಾಳೋಣ, ಬೇಡ್ದಿದ್ರೆ ಓಡಿ ಹೋಗೋಣ ಎಂಬ ಲಿವಿಂಗ್ ಟುಗೆದರ್ ಮುಟ್ಟಿದೆ. ಭಾರತದ ಇಂದಿನ ದೊಡ್ಡ ರೋಗ ಮನ್ನಣೆ, ಸನ್ಮಾನ, ಹೆಸರು ಮಾಡಲು ಏನು ಬೇಕಾದರೂ ಮಾಡುವ ಮಟ್ಟದ ಮನೋಭಾವ ಹೆಚ್ಚಾಗಿರುವುದು. ದೇವರ ಹೆಸರಿನ ದುರುಪಯೋಗದಿಂದ ರೋಡ್ ಶೋವರೆಗೆ ಹೆಸರಿಗಾಗಿ ಹಪಹಪಿಸುವವರ ಮೆರವಣಿಗೆ ನಡೆದಿದೆ.

ಒಂದು ಮೂಲಧಾತು ಆಗಿರುವ ಚಿನ್ನವು ಲೋಹಗಳಲ್ಲಿ ತುಂಬ ಮೃದು ಲೋಹವಾಗಿದೆ. ಹಾಗಾಗಿ ಮೆದು ಮನದ ಮಧುರ ಭಾಷಿಣಿಯರ ಮನ ಗೆದ್ದಿದೆ. ಭಾರತದಲ್ಲಿ ಸರಕಾರದ ಬಳಿ ಇರುವ ಚಿನ್ನಕ್ಕಿಂತ ನೂರಾರು ಪಟ್ಟು ಹೆಚ್ಚು ಕನಕ ಜನರ ದೇಹದ ಮೇಲೆ ನೇತಾಡುತ್ತಿರುತ್ತವೆ. ಕೆಲವರಂತೂ ಪೊಳ್ಳು ಟೊಳ್ಳು ತಂತ್ರಜ್ಞಾನದ ದನದ ಹಗ್ಗದ ಮಾದರಿಯ ಚಿನ್ನದ ಸರ ಹಾಕಿಕೊಂಡು ಅದನ್ನು ಪ್ರದರ್ಶಿಸುತ್ತ ನಡೆಯುವುದಿದೆ. ಚಿನ್ನ ಕದಿಯುವುದು ಪುರಾತನ ಕಸುಬು. ಆಮೇಲೆ ಅರಸರು ಬಲಾತ್ಕಾರದಿಂದ ಮತ್ತು ಗೆದ್ದ ರಾಜ್ಯದಿಂದ ಚಿನ್ನ ಸುಲಿಗೆ ಮಾಡತೊಡಗಿದರು. ಘಜನಿ ಮೊಹಮ್ಮದ್ ಸೋಮನಾಥನ ಚಿನ್ನ ದೋಚಿದರೆ, ಪೇಶ್ವೆಗಳು ಶೃಂಗೇರಿಯ ಚಿನ್ನ ಎಗರಿಸಿದರು. ವಿಜಯನಗರದ ಸೈನಿಕರು ಗೆದ್ದ ಕಡೆಯಿಂದ ದೋಚಿದ ಚಿನ್ನ ರಾಶಿ ಬಿದ್ದು ಮೌಲ್ಯ ಕಳೆದುಕೊಂಡಿತು. ಕೊನೆಗೆ ಅದನ್ನು ಬೀದಿಯಲ್ಲಿ ಕಡ್ಲೆ ಪುರಿಯಂತೆ ಮಾರಿದರು. ಆಧುನಿಕ ಕಾಲದ ಹೊಸ ಕಸುಬು ಸರಗಳ್ಳತನ. ಹೆಚ್ಚಾಗಿ ಬೈಕ್ ದುರುಳರ ಕೈಚಳಕಕ್ಕೆ ಮಹಿಳೆಯರ ಕುತ್ತಿಗೆ, ಕಿವಿ ಬಲಿಯಾಗುತ್ತಿದೆ. ತಾಳಿಗೂ ಉಳಿಗಾಲವಿಲ್ಲ.

ಲಂಚಕೋರರ ಮನೆಗೆ ದಾಳಿ ಮಾಡಿದಾಗಲೆಲ್ಲ ಇಲಿ, ಜಿರಲೆಗಳಂತೆ ಅಡಗಿರುವ ಟನ್ ಗಂಟು ಚಿನ್ನಗಳು ಸಿಕ್ಕಿವೆ. ಕೆಲವು ದೇವಾಲಯಗಳಿಗೆ ದರೋಡೆಕೋರರ ಚಿನ್ನ ಸೇರುತ್ತದೆ. ವಿಜಯ ಮಲ್ಯ ಸುಬ್ರಹ್ಮಣ್ಯಕ್ಕೆ ಚಿನ್ನದ ಬಾಗಿಲು ಕೊಟ್ಟ ಪುಣ್ಯದಿಂದ ಲಂಡನ್ ವಾಸಿಯಾಗಿದ್ದಾರೆ. ಗಣಿಗಳ್ಳತನದ ಹಣದಿಂದ ತಿರುಪತಿ ತಿಮ್ಮಪ್ಪನಿಗೆ ಕಿರೀಟ ಕೊಟ್ಟ ಜನಾರ್ದನ ರೆಡ್ಡಿ ಜೈಲು ಸೇರಿದರೂ ಆ ಪುಣ್ಯದಿಂದ ಮತ್ತೆ ಶಾಸಕರಾಗಿದ್ದಾರೆ. ತಿರುಪತಿ ತಿಮ್ಮಪ್ಪನಿಗೆ ಕೃಷ್ಣದೇವರಾಯ ಕೊಟ್ಟಿದ್ದ ಕಿರೀಟ ಇತ್ಯಾದಿ ಏನಾಯಿತು ಎಂದು ಇತ್ತೀಚೆಗೆ ಯಾರೋ ಪ್ರಶ್ನೆ ಕೇಳಿದ್ದರು. ಅರ್ಧ ಶತಮಾನದ ಹಿಂದೆ ದೇವಸ್ಥಾನಗಳಿಗೆ ಅರ್ಪಿಸಿದವುಗಳ ಲೆಕ್ಕ ಕೇಳಿದರೆ ಸಿಗುವುದು ಕಷ್ಟ. ಇನ್ನು ಕೃಷ್ಣನ ಲೆಕ್ಕ ಎಲ್ಲಿ ಸಿಗುತ್ತದೆ? ಚಿನ್ನ ಮೃದು ಆಗಿರುವುದರಿಂದ ಆಭರಣ ಮಾಡಲು ಅದಕ್ಕೆ ಬೆಳ್ಳಿ ಇಲ್ಲವೇ ತಾಮ್ರ ಸೇರಿಸುತ್ತಾರೆ. 5ರಿಂದ 10 ಶೇಕಡಾ ಬೆರಕೆಯದು ನಮ್ಮ ಚಿನ್ನ. ಇಲ್ಲದಿದ್ದರೆ ಅದನ್ನು ತುಸು ಪಾರದರ್ಶಕ ಎನಿಸುವಂತೆ ಹಾಳೆ ಮಾಡುವು ದೂ ಸಾಧ್ಯ. ಆರಮ್ ಎಂದರೆ ಹೊಳೆಯುವುದು. ಆದ್ದರಿಂದ ಚಿನ್ನಕ್ಕೆ ಎಯು ಚಿಹ್ನೆ ಸಿಕ್ಕಿದೆ.

ಪುರಾತನ ಕಾಲದಿಂದಲೂ ಚಿನ್ನ ಹಣವಾಗಿ ಮತ್ತು ಆಭರಣವಾಗಿ ಬಳಕೆಯಾಗಿದೆ. ಈಜಿಪ್ತ್ ಮತ್ತು ನುಬಿಯಾ ಅರಸರು ಬಹು ಹಿಂದೆಯೇ ತುಂಬ ಚಿನ್ನ ಹೊಂದಿದ್ದರು. ಮುಂದೆ ಎಲ್ಲ ಸಾಮ್ರಾಜ್ಯಗಳ, ಅರಸರುಗಳ ಕಯಾಲಿ ಆಯಿತು ಬಂಗಾರ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯು ಆರ್ಥಿಕ ಪ್ರಮಾಣವಾಗಿ ಚಿನ್ನವನ್ನು ಪರಿಗಣಿಸಿರುವುದರಿಂದ ಪ್ರತಿಯೊಂದು ದೇಶವೂ ಚಿನ್ನ ಮೀಸಲಿನ ಮೂಲಕ ತನ್ನ ಸಂಪತ್ತನ್ನು ಪ್ರದರ್ಶನ ಮಾಡುತ್ತವೆ. É್ಸೀತರ ಸರಕಾರ ಬಂದಾಗ ದೇಶದ ಚಿನ್ನ ಅಡವಿಟ್ಟ, ಅದನ್ನು ಕಾಂಗ್ರೆಸ್ ಸರಕಾರ ಬಂದು ಬಿಡಿಸಿದ್ದೂ ಆಗಿ ಹೋಗಿದೆ. ಈಗಿನ ಬಿಜೆಪಿ ಸರಕಾರ ಚಿನ್ನ ಅಡವಿಡುವ ಬದಲು ಹಿಂದಿನ ಸರಕಾರ ಮಾಡಿಟ್ಟ ಚರ ಸ್ಥಿರ ಆಸ್ತಿ ಮಾರುತ್ತ ನಡೆದಿದೆ. ಬೆಂಗಳೂರಿನಲ್ಲಿ ನೆಹರು ಸರಕಾರ ಇದ್ದಾಗ ಸ್ಥಾಪನೆ ಆದ ಕಾರ್ಖಾನೆಗಳಲ್ಲಿ ವಿಮಾನ ಕಾರ್ಖಾನೆ ಮುಖ್ಯವಾದುದು. ಈಗ ಬೋಯಿಂಗ್ ಇಂಡಿಯಾ ಬಂದಿದೆ. ಈಗಿನ ಪ್ರಧಾನಿ ಮೋದಿಯವರು ಅದನ್ನು ಉದ್ಘಾಟಿಸಿದರು.

ದೇಶೀಯ ಚಿನ್ನ ಮೀಸಲಿನ ಹೊಸ ಪಟ್ಟಿಯಂತೆ ಕ್ರಮವಾಗಿ ಮೊದಲ ಹತ್ತು ಸ್ಥಾನಗಳಲ್ಲಿ ಯುಎಸ್‍ಎ 8,133.46 ಟನ್, ಜರ್ಮನಿ 3,352.65 ಟನ್, ಇಟೆಲಿ 2,451.84 ಟನ್, ಫ್ರಾನ್ಸ್ 2,436.88 ಟನ್, ರಶಿಯಾ 2,332.74 ಟನ್, ಚೀನಾ 2,191.53 ಟನ್, ಸ್ವಿಜರ್ಲ್ಯಾಂಡ್ 1,040 ಟನ್, ಜಪಾನ್ 800.78 ಟನ್, ಭಾರತ 845.97 ಟನ್, ನೆದರ್ಲ್ಯಾಂಡ್ಸ್ 612.45 ಟನ್ ಮೀಸಲು ಬಂಗಾರ ಇಟ್ಟಿವೆ. ಈಗಿನ ಚಿನ್ನದಲ್ಲಿ 75% 1910ರ ಬಳಿಕವೇ ಗಣಿಗಾರಿಕೆ ಮಾಡಿದವು. ದಕ್ಷಿಣ ಆಫ್ರಿಕಾ ಚಿನ್ನದ ಬಹುತೇಕ ಗಣಿಗಳನ್ನು ಹೊಂದಿದೆ. ಯುಎಸ್‍ಎ, ರಶಿಯಾ, ಚೀನಾ, ಪೆರು, ಆಸ್ಟ್ರೇಲಿಯಾಗಳಲ್ಲಿ ಈಗಲೂ ಚಿನ್ನದ ಗಣಿಗಾರಿಕೆ ಜೋರಾಗಿದೆ. ಚಿನ್ನದ ಹರಳು, ತುಣುಕು ಅದಿರಾಗಿರದೆ ನೇರ ಸಿಗುವುದರಿಂದ ಇತರ ಲೋಹಗಳಿಗಿಂತ ತುಂಬ ಹಿಂದೆಯೇ ಬಳಕೆಗೆ ಬಂತು. ಕಡಲ ನೀರಿನಲ್ಲಿ ಚಿನ್ನ ಇದ್ದರೂ ತೆಗೆಯುವುದು ಲಾಭದಾಯಕವಲ್ಲ. ಲಕ್ಷ್ಮಿ ಕಡಲಿನಿಂದ ಎದ್ದು ಬಂದಳು ಎಂಬ ಕತೆಯಷ್ಟೆ ನಮಗೆ ಲಾಭ.

ಚಿನ್ನವು ಕ್ಲೋರಿನ್, ಪೆÇ್ಲೀರಿನ್, ಸಯನೈಡ್ಗಳಲ್ಲಿ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತದೆ. ಚಿನ್ನ ಕರಗಿಸಲು ಸಯನೈಡ್ ಬಳಸುತ್ತಾರೆ. ಹಾಗಾಗಿ ಸಯನೈಡ್ ಮೋಹನ್ ಮೊದಲಾದ ಸರಣಿ ಹಂತಕರು ಕೂಡ ನಮ್ಮಲ್ಲಿ ಹುಟ್ಟಿದ್ದಾರೆ. ಚಿನ್ನ ಪಾದರಸದಲ್ಲಿ ಕರಗಿ ಮಿಶ್ರ ಲೋಹವಾದರೂ ರಾಸಾಯನಿಕ ಕ್ರಿಯೆಗೆ ಒಳಗಾಗುವುದಿಲ್ಲ. ಸ್ವರ್ಣಕ್ಕೆ ರಾಸಾಯನಿಕ ಕ್ರಿಯೆ ನಿರೋಧಕ ಗುಣ ಇರುವುದರಿಂದ 79 ಪರಮಾಣು ಸಂಖ್ಯೆಯ ಚಿನ್ನವನ್ನು ಹಲ್ಲು ಶಾಸ್ತ್ರ, ವಿದ್ಯುನ್ಮಾನಗಳಲ್ಲಿ ಬಳಸುತ್ತಾರೆ. ನಿಮ್ಮ ಕಂಪ್ಯೂಟರಿನ ತಾಂತ್ರಿಕತೆಯಲ್ಲಿ ಚಿಪ್ಗಳಲ್ಲಿ ಚಿನ್ನ ಇದೆ. ಮುರುಕು ಕಂಪ್ಯೂಟರ್ ಸಾಫ್ಟ್ವೇರ್ಗಳಿಂದ ಚಿನ್ನ ತೆಗೆಯುವುದು ಈಗ ಏರುಮುಖದಲ್ಲಿರುವ ಉದ್ಯಮವಾಗಿದೆ. ಹಿಂದೆ ಕೆಲವರು ಚಿನ್ನದಂಗಡಿ ಎದುರಿನ ಕಸ ಗುಡಿಸಿ ಚಿನ್ನ ಸೋಸುತ್ತಿದ್ದರು.

Related Posts

Leave a Reply

Your email address will not be published.