Home Posts tagged #bengalore

ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್ ಅವರು ಹೃದಯಾಘಾತದಿಂದ ಇಂದು ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಅವರು 1942 ಆಗಸ್ಟ್ 19ರಂದು ಮೈಸೂರು

🛑ಉರುಳಿದ 80 ವರುಷಗಳ ಬಿಬಿಎಂಪಿ ಶಾಲೆ

ಬೆಂಗಳೂರು ಶಿವಾಜಿನಗರದ ಕುಕ್ಸ್ ರಸ್ತೆಯ ಬಿ ಅಡ್ಡ ರಸ್ತೆಯ ಬಿಬಿಎಂಪಿ ನರ್ಸರಿ ಶಾಲೆ ಮಧ್ಯ ರಾತ್ರಿ ಬಿದ್ದು ಹೋಗಿದೆ. ಮಕ್ಕಳಾಗಲಿ, ಜನರಿಗಾಗಲಿ ಅಪಾಯವಾಗಿಲ್ಲ ಎಂಬುದು ಸಮಾಧಾನಕರ. 80 ವರ್ಷಗಳಷ್ಟು ಹಳೆಯ ಈ ಶಾಲೆಯಲ್ಲಿ ವ 80ರಷ್ಟು ಮಕ್ಕಳು ಇದ್ದರು. ಶಾಲೆಯ ಎಲ್ಲ, ಪರಿಕರ, ಮಕ್ಕಳ ಆಟದ ಸಾಮಾನುಗಳು ಮಾತ್ರವಲ್ಲ ಅಕ್ಕಪಕ್ಕಗಳಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು ಹಾನಿಗೊಂಡಿವೆ. ಸದ್ಯ ಬಿಬಿಎಂಪಿಯವರು ಮಣ್ಣು ಸರಿಸುವ ಕೆಲಸದಲ್ಲಿ ಈಡುಗೊಂಡಿದ್ದಾರೆ

ಭಗವಾನ್ ಮಹಾವೀರರ ಜಯಂತಿ : ಅಹಿಂಸಾ ಜಾಥ

ಬೆಂಗಳೂರು; ಭಗವಾನ್ ಮಹಾವೀರರ 2622ನೇ ಜನ್ಮ ಕಲ್ಯಾಣ ಮಹೋತ್ಸವದ ಅಂಗವಾಗಿ ಜೈನ್ ಯುವ ಸಂಘಟನೆಯಿಂದ ಅಹಿಂಸೆ ಮತ್ತು ವಿಶ್ವಶಾಂತಿ ಉದ್ದೇಶದಿಂದ ನಗರದ ಪುರಭವನದಿಂದ ಫ್ರೀಡಂ ಪಾರ್ಕ್ ವರೆಗೆ ಅಹಿಂಸಾ ಜಾಥ ನಡೆಯಿತು. ಜೈನ ಸಮುದಾಯದವರು ಮಹಾವೀರರ ಶಾಂತಿ ಸಂದೇಶ ಸಾರುವ ಸ್ತಬ್ದ ಚಿತ್ರಗಳೊಂದಿಗೆ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ಫ್ರೀಡಂ ಪಾರ್ಕ್ ನಲ್ಲಿ ಜೈನ್ ಯುವ ಸಂಘಟನೆಯಿಂದ ಭಗವಾನ್ ಮಹಾವೀರರಿಗೆ ಮಹಾಭಿಷೇಕ ನೆರವೇರಿಸಲಾಯಿತು. ಅವರ ಸಂದೇಶಗಳನ್ನು ಸಾರುವ

“ಯುವ ಮತ” ಅಭಿಯಾನಕ್ಕೆ ಏಐಸಿಸಿ ಕಾರ್ಯದರ್ಶಿ ಅಭಿಶೇಖ್ ದತ್ತ್ ಚಾಲನೆ

ಬೆಂಗಳೂರು, ಮಾ, 30; ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 18 ರಿಂದ 23 ವರ್ಷ ವಯಸ್ಸಿನ, ಅದರಲ್ಲೂ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಮತದಾರರನ್ನು ಸೆಳೆಯಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ “ಯುವ ಮತ” – ನಿಮ್ಮ ಮೊದಲ ಮತವನ್ನು ಸಂಭ್ರಮಿಸಿ ಅಭಿಯಾನ ಆರಂಭಿಸಲಾಗಿದೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಏಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಶೇಖ್ ದತ್ತ್ ಹಾಗೂ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರನ್ನು

ರಾಜ್ಯದಲ್ಲಿ ನಾಳೆಯಿಂದ ಸರ್ಕಾರಿ ಸೇವೆ ಬಂದ್

ಬೆಂಗಳೂರು : 7ನೇ ವೇತನ ಆಯೋಗ ಜಾರಿಗೆ ನಾಳೆಯಿಂದ ಹಮ್ಮಿಕೊಂಡಿರುವ ಮುಷ್ಕರ ಹಿನ್ನೆಲೆ ರಾಜ್ಯದಲ್ಲಿ ಎಲ್ಲ ಸರ್ಕಾರಿ ಸೇವೆ ಬಂದ್‌ ಆಗಲಿವೆ ಎಂದು ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿ ನಾಳೆ ಯಾವ ಇಲಾಖೆ ನೌಕರರೂ ಕೆಲಸಕ್ಕೆ ಹಾಜರಾಗುವುದಿಲ್ಲ. ಯಾವುದೇ ಸಂಧಾನಕ್ಕೆ ಮಣಿಯುವುದಿಲ್ಲ; ಏನೇ ಕ್ರಮ ಕೈಗೊಂಡರೂ ಎದುರಿಸಲು ಸಿದ್ಧ. ಆಯೋಗ ವರದಿ ಜಾರಿಯಾದರೆ ಮಾತ್ರ ಮುಷ್ಕರ ಹಿಂದಕ್ಕೆ ಪಡೆಯಲಾಗುವುದು. ಒಂದುವೇಳೆ ಎಸ್ಮಾ

ಎಂ.ಎಸ್. ರಕ್ಷಾ ರಾಮಯ್ಯಗೆ ಏಐಸಿಸಿ ಸದಸ್ಯತ್ವ

ಬೆಂಗಳೂರು, : ಯುವ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಅವರನ್ನು ಏಐಸಿಸಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ನೇಮಕ ಮಾಡಿದ್ದಾರೆ. ಈ ಕುರಿತು ಏಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಯುವ ಕಾಂಗ್ರೆಸ್ ವಿಭಾಗದಿಂದ ರಕ್ಷಾ ರಾಮಯ್ಯ ಅವರಿಗೆ ಏಐಸಿಸಿಯಲ್ಲಿ ಪ್ರಾತಿನಿಧ್ಯ ಕಲ್ಪಿಸಲಾಗಿದ್ದು, ಯುವ ಸಮೂಹಕ್ಕೆ ಆದ್ಯತೆ ನೀಡಲಾಗಿದೆ

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಮಾನವ ಹಕ್ಕುಗಳ ಸೇವಾ ಟ್ರಸ್ಟ್ ಉದ್ಘಾಟನೆ

ಬೆಂಗಳೂರು, : ಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಹಾದಿ ತಪ್ಪುವುದನ್ನು ತಡೆಯಲು ಶಾಲೆಗಳು ಮತ್ತು ಪಾಲಕರು ನೈತಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಹೇಳಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ “ಕರ್ನಾಟಕ ಮಹಿಳಾ ಮತ್ತು ಮಕ್ಕಳ ಮಾನವ ಹಕ್ಕುಗಳ ಸೇವಾ ಟ್ರಸ್ಟ್ “ ಉದ್ಘಾಟನೆ, ಲಾಂಚನ ಬಿಡುಗಡೆ ಹಾಗೂ ಅಂಧರಿಗೆ ಕೈಗಡಿಯಾರ ಮತ್ತು ವಾಕಿಂಗ್ ಸ್ಟಿಕ್ ವಿತರಿಸಿದರು. ಪೋಷಕ ಕಲಾವಿದರಿಗೆ

ಕುಂಬಾರ ಸಂಘದ ಅಕ್ರಮಗಳ ವಿರುದ್ಧ ಹೋರಾಡುತ್ತಿರುವರ ಮೇಲೆ ಆಡಳಿತ ಮಂಡಳಿಯ ಭ್ರಷ್ಟ ಪಟ್ಟ ಭದ್ರರರಿಂದ ಹಲ್ಲೆ: ತಪ್ಪಿತಸ್ಥರನ್ನು ಬಂಧಿಸದಿದ್ದರೆ ಕಲಾಸಿ ಪಾಳ್ಯ ಪೊಲೀಸ್ ಠಾಣೆ ಎದುರು ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಬೆಂಗಳೂರು: ಕುಂಬಾರ ಸಂಘದ ಆಡಳಿತ ಮಂಡಳಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಹೋರಾಟ ಮಾಡುತ್ತಿರುವ ಬಿ.ಎಸ್. ಬದ್ರಿ ಪ್ರಸಾದ್ ಎಂಬುವರ ಮೇಲೆ ಕುಂಬಾರ ಸಂಘದ ಕೆಲವು ಆಡಳಿತ ಮಂಡಳಿಯ ಪಟ್ಟಭದ್ರರು ಎರಡು ಬಾರಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಜರುಗಿಸಬೇಕು. 48 ಗಂಟೆಗಳಲ್ಲಿ ಹಲ್ಲೆಕೋರರನ್ನು ಬಂಧನವಾಗದಿದ್ದರೆ ಕಲಾಸಿ ಪಾಳ್ಯ ಪೊಲೀಸ್ ಠಾಣೆ ಎದುರು ಉಗ್ರ ಪ್ರತಿಭನೆ ನಡೆಸುವುದಾಗಿ ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಸಾಲಿಡಾರಿಟಿಯಿಂದ ಡಿ.18ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪ್ರಪ್ರಥಮ ಯುವ ಸಮಾವೇಶ

ಬೆಂಗಳೂರು: ‘ಭರವಸೆ – ಮರುನಿರ್ಮಾಣ – ಘನತೆ’ ಎಂಬ ಧ್ಯೇಯವಾಕ್ಯದಡಿಯಲ್ಲಿ ರಾಜ್ಯಮಟ್ಟದ ಪ್ರಥಮ ‘ಯುವ ಸಮಾವೇಶ’ವನ್ನು ಡಿ.18ರ ಭಾನುವಾರದಂದು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ವತಿಯಿಂದ ಬೆಂಗಳೂರಿನಲ್ಲಿ ನಡೆಯಲಿದೆ” ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಲಬೀದ್ ಶಾಫಿ ತಿಳಿಸಿದರು. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಮಾಜದ ನಿರ್ಮಾಣಾತ್ಮಕ ಕೆಲಸಗಳಲ್ಲಿ ಯುವ ಸಮೂಹವನ್ನು

“ಡ್ರೈಫ್ ಡ್ರೈಫ್ ಆಟೋ“ ಸೇವೆ: ಅನ್ಯ ಕ್ಯಾಬ್ ಗಳಂತೆ ಚಾಲಕರಿಂದ ಕಮೀಷನ್ ಪಡೆಯುವುದಿಲ್ಲ, – ಸಂಸ್ಥೆ ಸ್ಪಷ್ಟನೆ

ಬೆಂಗಳೂರು, ಡಿ, 8; ಕ್ಯಾಬ್ ಸಾಗಾಣೆ ವ್ಯವಸ್ಥೆಯಲ್ಲಿ ಕ್ರಾಂತಿಕಾರ ಹೆಜ್ಜೆ ಇಟ್ಟಿರುವ “ಡ್ರೈಫ್ ಡ್ರೈಫ್ ಆಟೋ “ ಸೇವೆ ಚಾಲಕರಿಗೆ ವರದಾನವಾಗಿ ಪರಿಣಮಿಸಿದ್ದು, ಅವರಿಂದ ಯಾವುದೇ ರೀತಿಯ ಕಮಿಷನ್ ಪಡೆಯುವುದಿಲ್ಲ ಎಂದು ಪ್ರಕಟಿಸಿದೆ. ಬೇರೆ ಕ್ಯಾಬ್ ಸೇವೆಗಳಿಂದ ಬಸವಳಿದಿರುವ ಚಾಲಕರು ಈ ತೀರ್ಮಾನದಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಬ್ಲಾಕ್ ಚೈನ್ ತಂತ್ರಜ್ಞಾನ ಆಧಾರಿತ ಆಫ್ ಅನ್ನು ಇದು ಒಳಗೊಂಡಿದ್ದು, ಚಾಲಕರಿಂದ ಚಂದಾ ಹಣವನ್ನು ಮಾತ್ರ ಪಡೆಯುತ್ತೇವೆ.