Home Posts tagged #puttur

ಪುತ್ತೂರು: ಅಪಾಯಕಾರಿ ತಿರುವು ತೆರವಿಗೆ ಶಾಸಕರ ಸೂಚನೆ

ಮಾಣಿ – ಮೈಸೂರು ರಾ.ಹೆದ್ದಾರಿ 275 ರ ಆರ್ಯಾಪು ಗ್ರಾಪಂ ವ್ಯಾಪ್ತಿಯ ಕಲ್ಲರ್ಪೆಯಲ್ಲಿ ಅಪಾಯಕಾರಿ ತಿರುವು ಇದ್ದು ಅದನ್ನು ಶಾಸಕರಾದ ಅಶೋಕ್ ರೈ ವೀಕ್ಷಣೆ ಮಾಡಿದರು. ಈ ತಿರುವಿನಲ್ಲಿ ಅನೇಕ ವಾಹನ ಅಫಘಾತಗಳು ನಡೆದಿದ್ದು ಮೂವರು ಮೃತಪಟ್ಟ ಘಟನೆಯೂ ನಡೆದಿತ್ತು. ಇಲ್ಲಿರುವ ಅಪಾಯಕಾರಿ ಧರೆಯನ್ನು ತೆರವು ಮಾಡಿ ವಾಹನ ಸಂಚಾರ ಗೋಚರಿಸುವಂತೆ ಮಾಡಬೇಕು ಎಂಬ ಆಗ್ರಹ

ಪುತ್ತೂರು:ಪದ್ಮರಾಜ್ ಪರಿವಾರ ವಾಟ್ಸ್‌ಆಪ್ ಗ್ರೂಪ್ ವಿವಾದ: ನಾರಾಯಣ್ ಪ್ರಲಾಪಕ್ಕೆ ಅಮಳ ರಾಮಚಂದ್ರ ಕಿಡಿ

ಪುತ್ತೂರು: ಕೋತಿ ಬೆಣ್ಣೆ ತಿಂದು ಬೆಕ್ಕಿನ ಮುಖಕ್ಕೆ ಒರೆಸಿದ ಹಾಗೆ ತಮ್ಮ ಮುಖ ಉಳಿಸಿಕೊಳ್ಳಲು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಬಿಜೆಪಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಆರ್.ಸಿ ನಾರಾಯಣ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದ್ದಾರೆ. “ಪದ್ಮರಾಜ್ ಪರಿವಾರ” ವಾಟ್ಸ್‌ಆಪ್ ಗ್ರೂಪ್ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮಲ ರಾಮಚಂದ್ರ ಮಾತನಾಡಿ ನಾನು

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಜಾತ್ರೋತ್ಸವದ ಪ್ರಯುಕ್ತ ಧ್ವಜಾರೋಹಣ

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವಕ್ಕೆ ಇಂದು ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು. ವೃಷಭ ಲಗ್ನ ಮುಹೂರ್ತದಲ್ಲಿ ಭಕ್ತಾಧಿಗಳ ಜಯಘೋಷದೊಂದಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ವಿಎಸ್ ಭಟ್ ಹಾಗೂ ವಸಂತ ಕೆದಿಲಾಯ ಧ್ವಜಾರೋಹಣ ನೆರವೇರಿಸಿದ್ರು. ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ, ವ್ಯವಸ್ಥಾಪನ ಸಮಿತಿಯ ಅಧಯಕ್ಷರು ಸದಸ್ಯರು ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

ಕೆದಂಬಾಡಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕೆದಂಬಾಡಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಶಾಸಕರಾದ ಅಶೋಕ್ ರೈ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಮುಖಂಡರಾದ ಮುರಳೀಧರ್ ರೈ, ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ್ ರೈ ಮೊದಲಾದವರು ಇದ್ದರು.

8 ತಿಂಗಳಲ್ಲಿ ಪ್ರತೀ ಕುಟುಂಬಕ್ಕೆ 30 ಸಾವಿರ ಬಂದಿದೆ: ಹೇಮನಾಥ ಶೆಟ್ಟಿ

ಪುತ್ತೂರು: ರಾಜ್ಯದಲ್ಲಿ‌ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪ್ರತೀ ಕುಟುಂಬಕ್ಕೆ ತಲಾ 30 ಸಾವಿರ ಹಣ ವಿವಿಧ ರೂಪದಲ್ಲಿ ದೊರಕಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು. ಅವರು ಕೆಯ್ಯೂರು ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಕಾಂಗ್ರೆಸ್ ಎಂದಿಗೂ ಜನತೆಗೆ ದ್ರೋಹ ಮಾಡಿಲ್ಲ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್ ಎಂದಿಗೂ ಬಡವರ ಹಾಗೂ ನೊಂದವರ ಪರವಾಗಿಯೇ ಕೆಲಸ ಮಾಡಲಿದೆ. ಗ್ಯಾರಂಟಿ ಯೋಜನೆಯನ್ನು

ಕೆದಂಬಾಡಿ: ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು; ನಾವು ಸುಳ್ಳು ಹೇಳಲಿಲ್ಲ, ಪೊಳ್ಳು ಭರವಸೆ ಕೊಟ್ಟಿಲ್ಲ ಚುನಾವಣೆಯ ಸಂದರ್ಭದಲ್ಲಿ ಏನು ಗ್ಯಾರಂಟಿ ಕೊಟ್ಟಿದ್ದೇವೆಯೋ ಅದನ್ನು ಪಾಲನೆ ಮಾಡಿದ್ದೇವೆ ,ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ‌ನಮ್ಮನ್ನು ಬೆಂಬಲಿಸಿ‌ ಎಂದು ಶಾಸಕರಾದ ಅಶೋಕ್ ರೈ ಮನವಿ ಮಾಡಿದರು. ಕೆದಂಬಾಡಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಸಮಾಜವನ್ನು ಒಡೆದು ಅಧಿಜಾರಕ್ಕೇರುವ ಬಿಜೆಪಿ ವ್ಯಾಮೋಹ ದೇಶಕ್ಕೆ ಅತ್ಯಂತ

ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ – ಕಾಂಗ್ರೆಸ್ ಕಾರ್ಯಕರ್ತರ ಸಭೆ

ಪುತ್ತೂರು: ನಮ್ಮ‌ದೇಶದ ಭೂಮಿಯನ್ನು ಚೀನಾ ಅತಿಕ್ರಮಿಸುತ್ತಲೇ ಇದೆ, ಹಲವಾರು ಚ.ಅಡಿ ಜಾಗವನ್ನು ಸದ್ದಿಲ್ಲದೆ ಒಳಗೆ ಹಾಕಿದ್ದಾರೆ ಆದರೆ ನಾವು ಇಲ್ಲಿ ಧರ್ಮಗಳ ವಿಚಾರದಲ್ಲಿ ಕಚ್ಚಾಡುವ ಕೆಲಸವನ್ನು ಮಾಡುತ್ತಿದ್ದು ಇದೇ ರೀತಿ ಮುಂದುವರೆದಲ್ಲಿ ದೇಶದ ಭದ್ರತೆಗೆ ಅಪಾಯ ಉಂಟಾಗಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.ದೇಶದಲ್ಲಿ ನಾವು ಪರಸ್ಪರ ಒಗ್ಗಟ್ಟಿನಿಂದ ಇರಬೇಕಿದೆ. ಧರ್ಮದ ಹೆಸರಿನಲ್ಲಿ‌ಮಾಡುವ ಕಚ್ಚಾಟವನ್ನು ನಿಲ್ಲಿಸಬೇಕು, ಯುವ ಜನತೆಯ ಕೈಗೆ ಉದ್ಯೋಗ ಕೊಡುವ

ಪುತ್ತೂರು : ಶ್ರೀ ಮಂಜುನಾಥೇಶ್ವರ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ವತಿಯಿಂದ ಸುವರ್ಣಾವಕಾಶ

ಪುತ್ತೂರಿನ ಸುಬ್ರಮಣ್ಯ ರಸ್ತೆ ಯ ದರ್ಬೆ ಸರ್ಕಲ್‌ನಲ್ಲಿರುವ ಶ್ರೀ ಮಂಜುನಾಥೇಶ್ವರ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಸಾರ್ವಜನಿಗರಿಗೆ ಒಂದು ಸುವರ್ಣಾವಕಾಶ ಕಲ್ಪಿಸಿದ್ದು,  ಗಿಫ್ಟ್ ಸ್ಕೀಂನಲ್ಲಿ ಹೆಸರು ನೊಂದಾಯಿಸಿ ಲಕ್ಕಿ ಡ್ರಾ ಮೂಲಕ ಆಕರ್ಷಕ ಬಹುಮಾನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.  ಪುತ್ತೂರಿನ ದರ್ಬೆ ಸರ್ಕಲ್ ನ ಪ್ರಶಾಂತ್ ಮಹಲ್ ನಲ್ಲಿರುವ ಶ್ರೀ ಮಂಜುನಾಥೇಶ್ವರ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಎಲ್ಲಾ ಸಾರ್ವಜನಿಗರಿಗೆ ಒಂದು ಸುವರ್ಣಾವಕಾಶ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಹೊರೆಕಾಣಿಕೆ ಕಚೇರಿ ಉದ್ಘಾಟನೆ

ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆಯ ಕಚೇರಿ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಪ್ರಧಾನ ಅರ್ಚಕರಾದ ವಿ.ಎಸ್ ಭಟ್ ದೀಪ ಬೆಳಗಿಸುವ ಮೂಲಕ ಹೊರೆ ಕಾಣಿಕೆ ಕಚೇರಿಯನ್ನು ಉದ್ಘಾಟಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪಕರಾದ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಕಚೇರಿ ಪ್ರಾರಂಭಗೊಂಡಿತು.  ಈ ಸಂದರ್ಭದಲ್ಲಿ

ಪುತ್ತೂರು‌ : ಏ.9ರಂದು ಮಹಿಳಾ ಮೋರ್ಚಾದ ವತಿಯಿಂದ ನಡೆಯಲಿರು‌ವ ಮಹಿಳಾ ಸಮಾವೇಶದ ಪೂರ್ವಭಾವಿ ಸಭೆ

ಪುತ್ತೂರು‌ : ಏ.9ರಂದು ಪುತ್ತೂರು‌ ಮಹಿಳಾ ಮೋರ್ಚಾದ ವತಿಯಿಂದ ಮಹಿಳಾ ಸಮಾವೇಶ ನಡೆಯಲಿದ್ದು, ಇದರ ಪೂರ್ವಭಾವಿ ಸಭೆ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಪುತ್ತೂರು ವಿಧಾನಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿ ಸುಲೋಚನ ಬಿಕೆ ಭಟ್‌ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ದ.ಕ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಅವರನ್ನು ಗೆಲ್ಲಿಸಿಕೊಡುವ ಜೊತೆಗೆ ಮಹಿಳಾ ಸಮಾವೇಶ ಯಶಸ್ವಿಯಾಗಿ ನಡೆಸುವ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಮಾಜಿ ಶಾಸಕ‌ ಸಂಜೀವ ಮಠಂದೂರು ಸಹಿತ‌ ಮಹಿಳಾ