Home Posts tagged #v4news karnataka (Page 4)

ಏ.13: ಮೂರು ಕೃತಿಗಳ ಬಿಡುಗಡೆ; ಬಿಸು ಪರ್ಬದ ಮಾತುಕತೆ

ಮಂಗಳೂರು : ತುಳು ಪರಿಷತ್ ಮತ್ತು ಮ್ಯಾಪ್ಸ್ ಕಾಲೇಜ್ ಮಂಗಳೂರು ಜಂಟಿ ಆಶ್ರಯದಲ್ಲಿ ಪುಸ್ತಕ ಬಿಡುಗಡೆ ಹಾಗೂ ಬಿಸು ಪರ್ಬದ ಮಾತುಕತೆ ಕಾರ್ಯಕ್ರಮ ಏ.13 ರಂದು ಅಪರಾಹ್ನ 3 ಗಂಟೆಗೆ ಮಂಗಳೂರು ಮ್ಯಾಪ್ಸ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.‌ ಮುಂಬಯಿಯ ಲೇಖಕಿ ಶಾರದಾ ಎ. ಅಂಚನ್ ಅವರ “ನಂಬಿ ಸತ್ಯೋಲು” ಅನುವಾದಿತ ಕೃತಿ ಮತ್ತು “ರಕ್ತ ಶುದ್ಧಿ-

ಧರ್ಮಸ್ಥಳ : ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ

ಧರ್ಮಸ್ಥಳ ಬಿಜೆಪಿ ಪಕ್ಷದ ದುರಾಡಳಿತಕ್ಕೆ ಬೇಸತ್ತು. ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ.ದಿವಾಕರ ಕಲ್ಮಂಜ ಯೋಗೀಶ್ ಕಲ್ಮಂಜ ಗಂಗಾಧರ ಕಲ್ಮಂಜ.ಕರಿಯ ಗೌಡ ಧರ್ಮಸ್ಥಳ ಕಾಂಗ್ರೆಸ್ ಪಕ್ಷಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರದ ಕೇಶವ್ ಪಿ ಬೆಳಾಲು. ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯರದ ಹರೀಶ್ ಸುವರ್ಣ. ಭಾರತಿ. ಧರ್ಮಸ್ಥಳ

ಮಂಜೇಶ್ವರ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಮಹೋತ್ಸವ

ಮಂಜೇಶ್ವರ : ಕಳೆದ ಸುಮಾರು 800 ವರ್ಷಗಳಿಂದ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿ ನಿಂತಿರುವ ಮಂಜೇಶ್ವರ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಮಹೋತ್ಸವದ ದಿನಾಂಕ ನಿಗದಿ ಸಮಾರಂಭವು ನಡೆಯಿತು. “ಕುದಿಕಳ” ಎಂಬ ಹೆಸರಿನಲ್ಲಿ ಸಂಪ್ರದಾಯ ಪ್ರಕಾರ ನಡೆಯುವ ಸಮಾರಂಭದಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಿಯೊಬ್ಬನಿಂದ ದೈವಪಾತ್ರಿಗಳೇ ವೀಳ್ಯದೆಲೆ ಹಾಗೂ ಅಡಿಕೆ ಖರೀದಿಸುವುದು ಸಮಾರಂಭದ ವಿಶೇಷತೆಯಾಗಿದೆ.ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ

ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಶಾಂತಿ ಸ್ಥಾಪನೆಯಾಗಿದೆ

ನಂದಿನಿಯನ್ನು ಅಮುಲ್ ಜೊತೆ ವಿಲೀನ ಮಾಡಲುವು ಬಿಡುವುದಿಲ್ಲ. ನಂದಿನಿ ನಮ್ಮ ಸ್ವಾಭಿಮಾನ ಮತ್ತು ಕರ್ನಾಟಕದ ಹೆಮ್ಮೆ. ಕರ್ನಾಟಕದ ನಂದಿನಿ ಹಿತ ಕಾಯಲಯ ಬಿಜೆಪಿ ಬದ್ಧವಿದೆ. ಕಾಂಗ್ರೆಸ್ ಸುಳ್ಳುಗಳಿಂದಲೇ ಜನರನ್ನು ತಪ್ಪು ದಾರಿಗೆಳೆಯುತ್ತಿದೆ. ನಂದಿನಿಗೆ ಧಕ್ಕೆಯಾಗಲು ಬಿಜೆಪಿ ಸರ್ಕಾರ ಬಿಡಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದರು. ಅವರು ಮಂಗಳೂರಿನ ಲಾಲ್ ಭಾಗ್‍ನಲ್ಲಿರುವ ರೋಹನ್ ಸಿಟಿ ಸ್ಕ್ವೇರ್‍ನಲ್ಲಿ ಮೂರು ಜಿಲ್ಲೆಗಳ

ತೊಕ್ಕೊಟ್ಟಿನ ಥ್ರೆಡ್ ಹೌಸ್ ಮಳಿಗೆ ಮಾಲಕ ಆತ್ಮಹತ್ಯೆ

ತೊಕ್ಕೊಟ್ಟು ಜಂಕ್ಷನ್‍ನಲ್ಲಿರುವ ಥ್ರೆಡ್ ಹೌಸ್ ಮಳಿಗೆಯ ಮಾಲಕ ಅಂಗಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೂಲತ ಸೇವಂತಿಗುಡ್ಡೆ ನಿವಾಸಿಯಾಗಿದ್ದ ಪ್ರಸ್ತುತ ಕನೀರುತೋಟದಲ್ಲಿ ವಾಸಿಸುತ್ತಿರುವ ಪ್ರವೀಣ್ ಆಳ್ವ (45) ಆತ್ಮಹತ್ಯೆಗೈದಿದ್ದು, ತೊಕ್ಕೊಟ್ಟು ಜಂಕ್ಷನ್ ಬಳಿ ಹೊಲಿಗೆ ನೂಲು ಸೇರಿದಂತೆ ಟೈಲರ್ ಅಂಗಡಿಗಳಿಗೆ ಹೊಲಿಗೆ ಸಂಬಂಧಿಸಿದ ಕಚ್ಚಾ ವಸ್ತುಗಳನ್ನು ಪೂರೈಸುವ ಥ್ರೆಡ್ ಹೌಸ್ ಅಂಗಡಿಯನ್ನು ಕಳೆದ ಏಳೆಂಟು ವರ್ಷಗಳಿಂದ

ಬದಿಯಡ್ಕ ಸಂಸ್ಕೃತಿ ಭವನದಲ್ಲಿ “ನುಡಿ ಪುರ್ಪ ” ಸಂಸ್ಮರಣಾ ಕಾರ್ಯಕ್ರಮ

ಇತ್ತೀಚೆಗೆ ನಿಧನರಾದ ತುಳು ಕನ್ನಡ ಮಲೆಯಾಳ ಭಾಷೆಯ ಉದಯೋನ್ಮುಖ ಲೇಖಕಿ ಶ್ವೇತ ಕಜೆ ಇವರಿಗೆ ಜೈ ತುಳುನಾಡು (ರಿ) ಸಂಘಟನೆ ಹಾಗೂ ತುಳುವೆರ ಆಯನ ಕೂಟದ ವತಿಯಿಂದ ಬದಿಯಡ್ಕ ಸಂಸ್ಕೃತಿ ಭವನದಲ್ಲಿ “ನುಡಿ ಪುರ್ಪ ” ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಇತ್ತೀಚೆಗೆ ನಿಧನರಾದ ಕುಂಬಳೆ ಬದಿಯಡ್ಕ ಬೇಳಿಂಜೆ ಗ್ರಾಮ ಕಜೆ ನಿವಾಸಿ, ಖ್ಯಾತ ತುಳು ,ಕನ್ನಡ, ಮಲೆಯಾಳಂ ಲೇಖಕಿ, ಜೈ ತುಳುನಾಡ್(ರಿ) ನ ಸದಸ್ಯೆ ಕು| ಶ್ವೇತಾ ಕಜೆ ಇವರಿಗೆ, ಜೈ ತುಳುನಾಡ್(ರಿ) ಸಂಘಟನೆ

ಕಿನ್ನಿಗೋಳಿಯಲ್ಲಿ ಯುವ ಸಂಕಲ್ಪ ಕಾರ್ಯಕ್ರಮ

ಕಿನ್ನಿಗೋಳಿ: ಮುಲ್ಕಿ ಬ್ಲಾಕ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯುವ ನಾಯಕ ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ನೇತ್ರತ್ವದಲ್ಲಿ ಯುವ ಸಂಕಲ್ಪ ಕಾರ್ಯಕ್ರಮ ಕಿನ್ನಿಗೋಳಿ ಸಮೀಪದ ಎಸ್.ಕೋಡಿ ಪದ್ಮಾವತಿ ಸಭಾಭವನದಲ್ಲಿ ನಡೆಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಭಯ್ ಚಂದ್ರ ಜೈನ್ ಮಾತನಾಡಿ ಈಗಿನ ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು ಬೆಲೆ ಏರಿಕೆಗೆ

ಮೋದಿ, ಅದಾನಿ, ಅಂಬಾನಿಗೆ ಬಂದ ಅಮೃತಕಾಲ ದಲಿತರಿಗೆ ಬರುವುದು ಯಾವಾಗ : ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಪ್ರಶ್ನೆ

ಬಂಟ್ವಾಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಸಚಿವರಿಗೆ, ದೊಡ್ಡ ಉದ್ಯಮಿಗಳಿಗೆ ಇಂದು ಅಮೃತಕಾಲ, ಪ್ರತಿದಿನವೂ ದಲಿತ ದೌರ್ಜನ್ಯ ನಡೆಯುತ್ತಿದ್ದು, ಅದೀಗ ಹೆಚ್ಚಾಗಿದೆ, ದಲಿತರಿಗೆ ಅಮೃತ ಕಾಲಬರುವುದು ಯಾವಾಗ ಎಂದು ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಪ್ರಶ್ನಿಸಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕಗಳ

ಪಣಪಿಲ ಜಯ -ವಿಜಯ ಜೋಡುಕರೆ ಕಂಬಳ ಸಂಪನ್ನ

ಮೂಡುಬಿದಿರೆ: “ಜಯ-ವಿಜಯ” ಜೋಡುಕರೆ ಕಂಬಳ ಸಮಿತಿ ಪಣಪಿಲ ಇದರ ವತಿಯಿಂದ ನಡೆಯದ ಹದಿಮೂರನೇ ವರುಷದ ಕಿರಿಯ ವಿಭಾಗದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಭಾನುವಾರ ಸಂಜೆ ಸಂಪನ್ನಗೊಂಡಿತು. ಫಲಿತಾಂಶ : ಹಗ್ಗ ಕಿರಿಯ ವಿಭಾಗದಲ್ಲಿ 20ಜತೆ ಕೋಣಗಳು ಭಾಗವಹಿಸಿದ್ದು ಕಲ್ಯಾ ಹಾಳೆಕಟ್ಟೆ ನಿತೀಶ್ ಭವಿಷ್ಯ ದೇವಾಡಿಗ ಅವರ ಕೋಣಗಳು ಪ್ರಥಮ ( ಓಡಿಸಿದವರು: ಕಾವೂರು ದೋಟ ಸುದರ್ಶನ್), ಕೆಲ್ಲಪುತ್ತಿಗೆ ಪ್ರವೀಣ್ ಕುಮಾರ್ ದ್ವಿತೀಯ ( ಕೋಣ ಓಡಿಸಿದವರು:

ಪಡುಬಿದ್ರಿಯಲ್ಲಿ 62 ಬಗೆ ವಿವಿಧ ತಳಿಯ ಮಾವು : ನಿರುದ್ಯೋಗ ನಿವಾರಣೆಗೆ ಯುವಕರು ಕಂಡುಕೊಂಡ ಮಾರ್ಗ

ನಿರುದ್ಯೋಗ ಎಂದಾಕ್ಷಣ ಯುವಕರು ವಾಲುವುದು ದುಶ್ಚಟಗಳಿಗೆ…ಈ ಅಪವಾದಗಳನ್ನು ಮೆಟ್ಟಿನಿಂತ ಪಡುಬಿದ್ರಿಯ ಯುವಕರ ತಂಡವೊಂದು ದಿನವೊಂದಕ್ಕೆ ಸಹಸ್ರಾರು ರೂಪಾಯಿ ಸಂಪಾದಿಸುವ ಕಾಯಕಕ್ಕೆ ಕೈ ಹಾಕುವ ಮೂಲಕ ಕಷ್ಟ ಪಟ್ಟರೆ ನಿರುದ್ಯೋಗ ನಿವಾರಣೆ ನಮ್ಮಿಂದಲೇ ಸಾಧ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ.ಮಾವು ಎಂದರೆ ಯಾರ ಬಾಯಲ್ಲಿ ನೀರೂರದೆ ಇರಲು ಸಾಧ್ಯಹೇಳಿ..? ಅದೂ ಕೂಡ ಬರೋಬ್ಬರಿ 62ಬಗೆಯ ಮಾವಿನ ಹಣ್ಣುಗಳನ್ನು ದೂರದ ಊರುಗಳಿಂದ ತಂದು ಪಡುಬಿದ್ರಿ ಯ ಬಾಡಿಗೆ ಕಟ್ಟಡದಲ್ಲಿ