Home Posts tagged #v4news karnataka (Page 6)

ಚರ್ಚ್‍ಗಳಲ್ಲಿ ಶ್ರದ್ಧಾ ಭಕ್ತಿಯ ಶುಭ ಶುಕ್ರವಾರ ಆಚರಣೆ

ಪ್ರಭು ಯೇಸುಕ್ರಿಸ್ತರನ್ನು ಶಿಲುಬೆಗೇರಿಸುವ ದಿನವಾದ ಗುಡ್ ಫ್ರೈಡೇ(ಶುಭ ಶುಕ್ರವಾರ) ದಿನವನ್ನು ವಿಶ್ವದಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದು, ಪುತ್ತೂರು ತಾಲೂಕಿನ ಚರ್ಚ್‍ಗಳಲ್ಲಿಯೂ ಗುಡ್ ಫ್ರೈಡೇ ದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಪುತ್ತೂರಿನ ಮಾಯಿದೆ ದೇವುಸ್ ಚರ್ಚ್, ಮರೀಲಿನ ಸೆಕ್ರೇಡ್ ಹಾರ್ಟ್ ಚರ್ಚ್,

ಅಂಗಾರ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿ

ಸತತ ಆರು ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ ನಿಷ್ಕಳಂಕ ರಾಜಕಾರಣಿ ಮಾದರಿ ವ್ಯಕ್ತಿತ್ವ ಹೊಂದಿರುವ ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಸುಳ್ಯ ಮಂಡಲ ಬಿಜೆಪಿ ಸಮಿತಿಯ ಸದಸ್ಯ ನೆಲ್ಯಾಡಿಯ ಮಹಾಬಲ ಪಡುಬೆಟ್ಟು ಪಕ್ಷದ ಹಾಗೂ ಬಿಜೆಪಿ ಮುಖಂಡರಿಗೆ ಮನವಿ ಮಾಡಿದ್ದಾರೆ. ಅವರು ಕಡಬದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಾವು ಮಾಡುವ ಮನವಿ ತಪ್ಪ

ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯ ಕಾರ್ಯಾಗಾರ

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಚುನಾವಣಾ ನಿರ್ವಾಹಣಾ ಸಮಿತಿ ಕಾರ್ಯಾಗಾರವು ನಗರದ ಸುಧೀಂದ್ರ ಸಭಾ ಭವನದ ಹಾಲ್‍ನಲ್ಲಿ ನಡೆಯಿತು.ಚುನಾವಣಾ ನಿರ್ವಹಣಾ ಸಮಿತಿಯ ಕಾರ್ಯಾಗಾರಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಚಾಲನೆಯನ್ನು ನೀಡಿದರು. ಬಳಿಕ ಮಾತನಾಡಿ ಅವರು, ಜನಸಾಮಾನ್ಯರ ಮಧ್ಯ ಬಿಜೆಪಿ ಪಕ್ಷ ಬಹಳ ಪ್ರಬಲವಾಗಿ ಬೆಳೆದು ಮುಂದಿನ ಅಧಿಕಾರದ ಸೂತ್ರವನ್ನು ಹಿಡಿಯುವ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ. ಮುಂದಿನ ಚುನಾವಣೆಯಲ್ಲಿ ನಿಶ್ಚಲ

ಮೀಸಲಾತಿ ಪಟ್ಟಿಯಲ್ಲಿ ಅನ್ಯಾಯ : ಮೊಗೇರ ಸಂಘದಿಂದ ಪ್ರತಿಭಟನೆಯ ಎಚ್ಚರಿಕೆ

ಕರ್ನಾಟಕ ರಾಜ್ಯ ಸರಕಾರವು ಇತ್ತೀಚೆಗೆ ಹೊರಡಿಸಿರುವ ಪರಿಶಿಷ್ಟ ಜಾತಿಗಳ ಮೀಸಲಾತಿ ಪಟ್ಟಯಲ್ಲಿ ಕರ್ನಾಟಕ ರಾಜ್ಯದ 8 ಜಿಲ್ಲೆಗಳಲ್ಲಿ ವಾಸಿಸುವ ಮೊಗೇರ ಜಾತಿ ಸೇರಿದಂತೆ 89 ಉಪಜಾತಿಗಳಿಗೆ ಕೇವಲ 1 ಶೇಕಡಾ ಮೀಸಲಾತಿಯನ್ನು ಪ್ರಕಟಿಸಿ ವಂಚನೆ ಮಾಡಿರುವ ಸರಕಾರದ ಧೋರಣೆಯನ್ನು ಖಂಡಿಸಿ, ಮೊಗೇರ, ಸಮಾಜವು ರಾಜ್ಯದಾದ್ಯಂತ ತೀವ್ರ ಹೋರಾಟವನ್ನು ನಡೆಸಲಿದೆ ಎಂದು ಕರ್ನಾಟಕ ರಾಜ್ಯ ಮೊಗೇರ ಸಂಘದ ಸ್ಥಾಪಕಾಧ್ಯಕ್ಷರು ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಸುಂದರ ಮೇರ ತಿಳಿಸಿದ್ದಾರೆ.

ಹೊಟೇಲ್ ಹಿರಾ ಇಂಟರ್ ನ್ಯಾಷನಲ್ ಮಂಗಳೂರಿನ ಪಂಪ್‍ವೆಲ್ ಬಳಿ ಹೊಟೇಲ್ ಶುಭಾರಂಭ

ಮಂಜೇಶ್ವರ: ದೇಶಿ, ವಿದೇಶಿ ಗ್ರಾಹಕರ ಅಪೇಕ್ಷೆಯನ್ನು ಪೂರೈಸುವ ವಿಭಿನ್ನತೆಯೊಂದಿಗೆ, ಅಂತರಾಷ್ಟ್ರೀಯ ಗುಣಮಟ್ಟದ ಸೌಲಭ್ಯವುಳ್ಳ ಹೊಟೇಲ್ ಹಿರಾ ಇಂಟರ್ ನ್ಯಾಷನಲ್, ಇದೀಗ ಮಂಗಳೂರಿನಲ್ಲಿ ಶುಭಾರಂಭಗೊಂಡಿದೆ. ಮಂಗಳೂರಿನ ಪಂಪ್ವೆಲ್ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ತಲೆ ಎತ್ತಿ ನಿಂತಿರುವ ಮಂಜೇಶ್ವರ ಉದ್ಯಾವರ ನಿವಾಸಿ ಆಲಿ ಕುಟ್ಟಿ ಹಾಜಿಯವರ ಮಾಲಕತ್ವದಲ್ಲಿರುವ ನೂತನ ಕಟ್ಟಡದಲ್ಲಿ ಶುಭಾರಂಭಗೊಂಡಿತು. ಅಂತರಾಷ್ಟ್ರೀಯ ಗುಣಮಟ್ಟದ, ಕೇವಲ ಫೈವ್ ಸ್ಟಾರ್

ಹರೀಶ್ ಪೂಂಜ ನವ ಬೆಳ್ತಂಗಡಿಯ ಹರಿಕಾರ ಆಲ್ಬಾಂ ಸಾಂಗ್ ಬಿಡುಗಡೆ

ಶಾಸಕ ಹರೀಶ್ ಪೂಂಜ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಪ್ರಚುರಪಡಿಸುವ ” ಹರೀಶ್ ಪೂಂಜ ನವ ಬೆಳ್ತಂಗಡಿಯ ಹರಿಕಾರ” ಆಲ್ಬಂ ಸಾಂಗ್ ನ್ನು ಶಾಸಕ ಹರೀಶ್ ಪೂಂಜ ಬಿಡುಗಡೆಗೊಳಿಸಿದರು. ಎಪಿಕೆ ಕ್ರಿಯೆಶನ್ಸ್ ಬ್ಯಾನರ್ ಅಡಿಯಲ್ಲಿ ಅಜಿತ್ ಪೂಜಾರಿ ಕನ್ಯಾಡಿ ರಾಗಸಂಯೋಜನೆ ಮಾಡಿ ಈ ಹಾಡನ್ನು ಹಾಡಿದ್ದಾರೆ. ನಿಧೀಶ್ ಶೆಟ್ಟಿ ಕನ್ಯಾಡಿ, ನವೀನ್ ಸುವರ್ಣ ಕನ್ಯಾಡಿ, ಅವಿನಾಶ ಶೆಟ್ಟಿ ಕನ್ಯಾಡಿ,ಸಹನ್ ಉಜಿರೆ, ರಾಘವೇಂದ್ರ ಗೌಡ ಕೊಂಕ್ರೋಟ್ಟು, ಅಶೋಕ್ ಬಂಗೇರ

ಚುನಾವಣಾ ಮುಂಜಾಗ್ರತಾ ಕ್ರಮವಾಗಿ ಕುತ್ತಾರಿನಿಂದ ದೇರಳಕಟ್ಟೆವರೆಗೆ ಪೊಲೀಸ್ ಪಥಸಂಚಲನ

ಉಳ್ಳಾಲ: ಕರ್ನಾಟಕ ವಿಧಾನಸಭಾ ಚುನಾವಣಾ ಮುಂಜಾಗ್ರತಾ ಕ್ರಮವಾಗಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಿಂದ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆವರೆಗೆ ಸಿಆರ್ ಪಿಎಫ್ , ಉಳ್ಳಾಲ ಪೊಲೀಸ್ ಠಾಣೆ, ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಹಾಗೂ ಕೆಎಸ್ ಆರ್ ಪಿ ಅಸೈಗೋಳಿ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್ , ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್, ಮಂಗಳೂರು ದಕ್ಷಿಣ

ಪುತ್ತೂರಿನಲ್ಲಿ ಪವಿತ್ರ ಗುರುವಾರ ಆಚರಣೆ

ಪ್ರಪಂಚದಾದ್ಯಂತದ ಕ್ರಿಶ್ಚಿಯನ್ನರು ಈ ವಾರವನ್ನು ಪವಿತ್ರ ವಾರವನ್ನಾಗಿ ಆಚರಿಸುತ್ತಿದ್ದಾರೆ, ಏಪ್ರಿಲ್ 2 ರಂದು ಈಸ್ಟರ್ ಮೊದಲು ಗರಿಗಳ ಭಾನುವಾರದಿಂದ ಪ್ರಾರಂಭವಾಗುತ್ತದೆ. ಏಪ್ರಿಲ್ 6 ರಂದು ಅವರು ಶುಭ ಶುಕ್ರವಾರ ಮತ್ತು ಈಸ್ಟರ್ ಮೊದಲು ಬರುವ ಪವಿತ್ರ ಗುರುವಾರವನ್ನು ಆಚರಿಸುತ್ತಾರೆ.ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಕೊನೆಯ ಭೋಜನವನ್ನು ಮಾಡಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ .ಪುತ್ತೂರಿನ ಹೃದಯ ಭಾಗದಲ್ಲಿ ಇರುವ ಮಾಯಿ ದೆ ದೇವುಸ್

ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-4ರ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ: ಜಿಲ್ಲೆಯ ಪ್ರತಿಷ್ಠಿತ ಸುದ್ದಿವಾಹಿನಿ ವಿ4 ನ್ಯೂಸ್ ಹಾಗೂ ತುಳುಕೂಟ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಎ.16ರಂದು ಭಾನುವಾರ ಬಿ.ಸಿ.ರೋಡಿನ ಜೋಡುಮಾರ್ಗ ಉದ್ಯಾನದ ಬಳಿಯ ಸ್ಪರ್ಶಾ ಕಲಾ ಮಂದಿರರದಲ್ಲಿ ನಡೆಯಲಿರುವ ನಾಲ್ಕನೆ ಸೀಸನ್‍ನ ಕಾಮಿಡಿ ಪ್ರೀಮಿಯರ್ ಲೀಗ್‍ನ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಗುರುವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು. ಬಂಟ್ವಾಳ ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಆಮಂತ್ರಣ ಪತ್ರಿಕೆ

ಬೈಂದೂರು ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಾಸ್ಥಾನ: ವಾರ್ಷಿಕ ಶ್ರೀ ಮನ್ಮಹಾ ರಥೋತ್ಸವ

ಬೆಳಿಗ್ಗೆ ಗಂಟೆ 7-00ಕ್ಕೆ, ಪ್ರಾತಃಕಾಲ ಪೂಜೆ, ನಿತ್ಯಬಲಿ, ರಥಶುದ್ಧಿ ಹೋಮ, ಶತರುದ್ರಾಭಿಷೇಕ ಶತರುದ್ರಾಭಿಷೇಕದ ಸೇವಾಕರ್ತರು : ಶ್ರೀಮತಿ ಶೀಲಾ & ಶ್ರೀ ಜಯಶೀಲ ಶೆಟ್ಟಿ ಮತ್ತು ಮಕ್ಕಳು, ಘಟಪ್ರಭಾ, ಹಾಗೂ ರಥಬಲಿ, ಕ್ಷೇತ್ರಪಾಲ ಬಲಿ ,ರಥಾರೋಹಣ, ಶ್ರೀ ಮನ್ಮಹಾರಥೋತ್ಸವಮಹಾಅನ್ನಸಂತರ್ಪಣೆ ಸೇವಾಕರ್ತರು ಶ್ರೀಮತಿ ಶಾಂತ ಮತ್ತು ಶ್ರೀ ಕೃಷ್ಣ ಗಾಣಿಗ ಮತ್ತು ಮಕ್ಕಳು ಅಡಿಗಳಹಿತ್ತು, ಹೇರಂಜಾಲು. ಮಧ್ಯಾಹ್ನ 3ಗಂಟೆಗೆ ವಾದ್ಯಗೋಷ್ಠಿ, ಚಂಡೆವಾದನ ಸಂಜೆ 5-30ಕ್ಕೆ