Home Posts tagged #v4stream (Page 24)

ಗ್ರೈಂಡರ್‍ ಗೆ ಶಾಲು ಸಿಲುಕಿ ಯುವತಿ ದಾರುಣ ಸಾವು

ಮಂಜೇಶ್ವರ: ಹುಟ್ಟು ಹಬ್ಬದಂದೇ ಗ್ರೈಂಡರ್ ಗೆ ಶಾಲು ಸಿಲುಕಿ ಯುವತಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ್ದಾಳೆ. ತೂಮಿನಾಡು ಲಕ್ಷಂ ವೀಡು ಕಾಲನಿ ನಿವಾಸಿ ರಂಜನ್ ಕುಟ್ಟ ಎಂಬವರ ಪತ್ನಿ ಜಯಶೀಲ ಚುಮ್ಮಿ (20) ಸಾವನ್ನಪ್ಪಿದ ದುರ್ದೈವಿ. ಈಕೆ ತೂಮಿನಾಡಿನಲ್ಲಿರುವ ಬೇಕರಿಯೊಂದರ ನೌಕರಿಯಾಗಿದ್ದು ಎಂದಿನಂತೆ ಬೇಕರಿಗೆ ತೆರಳಿ ಗ್ರೈಂಡರ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ

PWD ಜೂನಿಯರ್ ಇಂಜಿನಿಯರ್ ಮೇಲೆ ಅಕ್ರಮ ಆಸ್ತಿ ಆರೋಪ : ಆರೋಪಿ ಖುಲಾಸೆ

ತನ್ನ ಸೇವಾ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆದಾಯ ಗಳಿಸಿದ್ದಾರೆ ಎಂದು ಆರೋಪಿಸಿ PWD ಇಂಜಿನಿಯರ್ ಅರುಣ್ ಪ್ರಕಾಶ್ ವಿರುದ್ದ ಪೊಲೀಸ್ ಉಪಾಧಿಕ್ಷಕರು ಕರ್ನಾಟಕ ಲೋಕಾಯುಕ್ತ ಇವರು ಮಾನ್ಯ ಮಂಗಳೂರು ಲೋಕಾಯುಕ್ತ ನ್ಯಾಯಾಲಯ ಇಲ್ಲಿ ದೋಷರೋಪಣಾ ಪತ್ರ ಸಲ್ಲಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯವು ದೋಷಮುಕ್ತ ಗೊಳಿಸಿದೆ. ಬಂಟ್ವಾಳದಲ್ಲಿ ಸಹಾಯಕ ಜೂನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ್ ಪ್ರಕಾಶ್ ಡಿಸೋಜ ಇವರು ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದಾರೆ ಎಂಬ

ಧರ್ಮಸ್ಥಳ : ಅಮಿತ್ ಶಾ ಗೆ ಧರ್ಮಸ್ಥಳ ಪ್ರಸಾದ

ಬೆಳ್ತಂಗಡಿ : ಮಾಜಿ ಸಚಿವ ಈಶ್ವರಪ್ಪ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಫೆ.11 ರಂದು ಭೇಟಿ ಮಾಡಿ ಮಂಜುನಾಥ ದರ್ಶನ ಪಡೆದರು. ನಂತರ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ ಗೆ ನೀಡಲಿರೋ ಪ್ರಸಾದ್‍ವನ್ನ ಮಾಜಿ ಸಚಿವ ಈಶ್ವರಪ್ಪಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೀಡಿದರು. ಇಂದು ಸಂಜೆ ಮಂಗಳೂರಿನಲ್ಲಿ ಬಿಜೆಪಿ ಸಭೆ ವೇಳೆ ಅಮಿತ್ ಷಾ ಭಾಗಿಯಾಗಲಿರುವಾಗ ಧರ್ಮಸ್ಥಳದ ಮಂಜುನಾಥನ ಪ್ರಸಾದ

ಕೇಂದ್ರ ಗೃಹಸಚಿವ ಅಮಿತ್ ಶಾ ಪುತ್ತೂರಿಗೆ ಆಗಮನಕ್ಕೆ ಕ್ಷಣಗಣನೆ ಆರಂಭ : ಪೊಲೀಸ್ ಸರ್ಪಗಾವಲು

ಕೇಂದ್ರ ಗೃಹಸಚಿವ ಹಾಗು ಸಹಕಾರಿ ಸಚಿವ ಅಮಿತ್ ಶಾ ಪುತ್ತೂರಿಗೆ ಇಂದು ಭೇಟಿ ನೀಡುತ್ತಿದ್ದು, ಭೇಟಿಯ ಹಿನ್ನಲೆಯಲ್ಲಿ ಪುತ್ತೂರು ನಗರದಾದ್ಯಂತ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿದೆ. ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆಯಾಗಿರುವ ಕ್ಯಾಂಫ್ಕೋ ದ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಅಮಿತ್ ಶಾ ಗೆ ಸ್ವಾಗತ ಕೋರುವ ಬ್ಯಾನರ್, ಬಂಟಿಕ್ಸ್‍ಗಳು ನಗರ ತುಂಬಾ ರಾರಾಜಿಸುತ್ತಿದೆ. ಗೃಹ ಸಚಿವ ಹಾಗು ದೇಶದ ಮೊದಲ ಕೇಂದ್ರ ಸಹಕಾರಿ ಸಚಿವರೂ

ಮೂಡುಬಿದಿರೆ : ಮಗುವಿನ ಮೇಲೆ ಬೀದಿನಾಯಿ ದಾಳಿ

ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದ ಬಳಿ ಇಂಜೆಕ್ಷನ್ ತೆಗೆದುಕೊಳ್ಳಲು ಕುರ್ಚಿಯಲ್ಲಿ ಕುಳಿತಿದ್ದ ಕೋಟೆಬಾಗಿಲಿನ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.ಮಗುವಿನ ಕೆನ್ನೆ ಹಾಗೂ ಮುಖದ ಇತರ ಕಡೆ ನಾಯಿ ಕಚ್ಚಿ ಗಾಯಗೊಳಿಸಿದೆ. ಇಂಜೆಕ್ಷನ್ ಗಾಗಿ ಮಗುವನ್ನು ಕುರ್ಚಿಯಲ್ಲಿ ಕುಳ್ಳಿ ರಿಸಿ ಪಕ್ಕದಲ್ಲಿ ಮಗುವಿನ ತಂದೆ ಮಹಮ್ಮದ್ ಅಕ್ಬರ್ ಹಾಗೂ ತಾಯಿ ಇದ್ದರು. ಆಸ್ಪತ್ರೆಯ ಬಳಿ ಓಡಾಡುತ್ತಿದ್ದ

ಮಂಜನಾಡಿ : ಸ್ಕೂಟರ್ ಮತ್ತು ಕಾರು ನಡುವೆ ಅಪಘಾತ, ಸ್ಕೂಟರ್ ಸವಾರ ಮೃತ್ಯು

ಉಳ್ಳಾಲ: ಬೈಕ್ ಗೆ ಕಾರು ಢಿಕ್ಕಿ ಹೊಡೆದು ಸ್ಕೂಟರ್ ಸವಾg,À ಹೊಟೇಲ್ ಉದ್ಯೋಗಿ ಹಾಗೂ ಝೊಮ್ಯಾಟೋ ಡೆಲಿವರಿ ಬಾಯ್ ಸಾವನ್ನಪ್ಪಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಮಂಜನಾಡಿ ಕಲ್ಕಟ್ಟ ಎಂಬಲ್ಲಿ ಸಂಭವಿಸಿದೆ. ಮೂಲತ: ಕ್ಯಾಲಿಕಟ್ ನಿವಾಸಿ, ಕುತ್ತಾರು ಸಂತೋಷನಗರದ ಬಾಡಿಗೆ ಮನೆಯಲ್ಲಿ ಇದ್ದ ಅನಿಲ್ ಕುಮಾರ್ (41) ಮೃತರು. ಝೊಮ್ಯಾಟೋ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಹಾಗೂ ಸಂಜೆ ನಂತರ ದೇರಳಕಟ್ಟೆಯ ಜ್ಯೂಸ್ ಮ್ಯಾಜಿಕ್ ಹೊಟೇಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಪುತ್ತೂರಿನಲ್ಲಿ 5ನೇ ಬೃಹತ್ ಕೃಷಿಯಂತ್ರ ಮೇಳ-2023

ಪುತ್ತೂರು : ಕ್ಯಾಂಪ್ಕೋ ಲಿಮಿಟೆಡ್, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ 5ನೇ ಬೃಹತ್ ಕೃಷಿ ಯಂತ್ರಮೇಳ ಮತ್ತು ಕನಸಿನ ಮನೆ ಉದ್ಘಾಟನಾ ಸಮಾರಂಭಕ್ಕೆ ನೆಹರೂನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಚಾಲನೆ ನೀಡಲಾಯಿತು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಕೃಷಿಯಂತ್ರ ಮೇಳವನ್ನು ದೀಪ

ಕೋಸ್ಟಲ್‍ವುಡ್ ಪ್ರೀಮಿಯರ್ ಲೀಗ್‍ನ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಿತು

ಕೋಸ್ಟಲ್‍ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ(ರಿ) ಇದರ 7ನೇ ವರ್ಷದ ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ ನ ಆಟಗಾರರ ಆಯ್ಕೆ ಪ್ರಕ್ರಿಯೆ ನಗರದ ನಂತೂರಿನ ಸಿಓಡಿಪಿ ಸಭಾಂಗಣದಲ್ಲಿ ನಡೆಯಿತು. ಚಾಲೆಂಚಿಂಗ್ ಸ್ಟಾರ್, ಬ್ಲಾಕ್ ಪ್ಯಾಂತರ್ಸ್, ವಿಜಯಲಕ್ಷ್ಮಿ ವಿರಾಸ್, ಅಸ್ತ್ರ ಬಿಗ್ರೇಡ್, ಕೋಸ್ಟಲ್ ವುಡ್ ಥಂಡರ್, ಶೆಟರ್ ಬಾಕ್ಸ್ ಬುಲ್ಸ್, ಅಮ್ಮ ವಾರಿಯರ್ಸ್, ಉಡುಪಿ ಯುನೈಡೆಟ್ ತಂಡಗಳು ಪಂದ್ಯಾಟದಲ್ಲಿ ಸೆಣೆಸಾಡಲಿದೆ. ಆಯ್ಕೆ ಪ್ರಕ್ರಿಯೆಯನ್ನು ಗಣೇಶ್ ಅವರು

ಕೂಳೂರು ಮೇಲ್ಸೇತುವೆ ತಳಭಾಗ, ಪಾರ್ಕಿಂಗ್ ಉದ್ಘಾಟನೆ ಕಾರ್ಯಕ್ರಮ

ಮಂಗಳೂರಿನ ಕೂಳೂರು ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಕುಳೂರಿನ ಮೇಲ್ಸೇತುವೆ ತಳಭಾಗದಲ್ಲಿ ನೂತನವಾಗಿ ನಿರ್ಮಿಸಿದ ಇಂಟರ್ಲಾಕ್ ಸುಸಜ್ಜಿತ ಪಾರ್ಕಿಂಗ್ ಜಾಗದ ಮೊದಲನೆಯ ಹಂತದ ಲೋಕಾರ್ಪಣೆ ಕಾರ್ಯಕ್ರಮವು ನಡೆಯಿತು.ಮಂಗಳೂರು ರಾಮಕೃಷ್ಣ ಮಠದ ಏಕಗಮ್ಯಾನಂದ ಮಹಾರಾಜ್ ಸ್ವಾಮೀಜಿ , ಕುಳೂರು ಚರ್ಚ್‍ನ ಧರ್ಮಗುರುಗಳಾದ ರೆವರೆಂಡ್ ಫಾದರ್ ವಿನ್ಸೆಂಟ್ ಡಿಸೋಜಾ ಮತ್ತು ಕುಳೂರು ಮೊೈದೀನ್ ಜುಮ್ಮ ಮಸೀದಿಯ ಧರ್ಮಗುರುಗಳಾದ ಅಕ್ರಮುಲ್ಲ ಸಖಾಫಿ ಅವರು ಕಾರ್ಯಕ್ರಮವನ್ನಾ

ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪಕ್ಕೆ ದಾಖಲೆ ಒದಗಿಸಿದ್ರೆ ಕ್ರಮ : ಎಡಿಜಿಪಿ ಆಲೋಕ್ ಕುಮಾರ್

ಪೊಲೀಸರ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಿ ಭ್ರಷ್ಟಾಚಾರ ಆರೋಪ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಮತ್ತು ನಿಖರ, ಪ್ರಾಮಾಣಿಕ ಮಾಹಿತಿಯೊಂದಿಗೆ ದೂರು ನೀಡಿದಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಲೋಕ್ ಕುಮಾರ್ ಹೇಳಿದ್ದಾರೆ.ಮಂಗಳೂರು ಪೊಲೀಸ್ ಆಯುಕ್ತರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿರುವ ಬಗ್ಗೆ ಮಾಧ್ಯಮದಿಂದ ಗಮನ ಸೆಳೆದಾಗ, ಯಾವುದೇ ಆರೋಪಗಳಿದ್ದರೂ ನಿಖರ