Header Ads
Breaking News

ಅತಿಕಾರಿಬೆಟ್ಟು ಗ್ರಾಮ ಪಂಚಾಯತ್‍ ಹಗರಣ : ದಲಿತ ಸಂಘರ್ಷ ಸಮಿತಿಯಿಂದ ಸುದ್ದಿಗೋಷ್ಠಿ

ಅತಿಕಾರಿಬೆಟ್ಟು ಗ್ರಾಮ ಪಂಚಾಯತ್‍ಯಲ್ಲಿ ನಡೆದಿದರುವ ಹಗರಣಗಳನ್ನು ಮುಚ್ಚಿಹಾಕಲು ಅಮಾಯಕ ವ್ಯಕ್ತಿಯ ಮೇಲೆ ದಾಖಲಿಸಿದ ಸುಳ್ಳು ಪೋಕ್ಸೋ ಪ್ರಕರಣದ ಸಂಬಂಧವಾಗಿ ಕುಟುಂಬಸ್ಥರು ಮತ್ತು ದಲಿತ ಸಂಘಟನೆಗಳು ಪ್ರಕರಣದ ಬಗ್ಗೆ ಸತ್ಯ ಪ್ರಮಾಣಕ್ಕೆ ಆಹ್ವಾನ ನೀಡಿದ್ದಾರೆ.ಈ ಬಗ್ಗೆ ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ದಲಿತ ಸಂಘಟನೆಯ ಮುಖಂಡರಾದ ಅಶೋಕ್ ಕೊಂಚಾಡಿ, ಅತಿಕಾರಿಬೆಟ್ಟು ಗ್ರಾಮ ಪಂಚಾಯತ್‍ನಲ್ಲಿ ಕಳೆದ 4 ವರ್ಷಗಳಿಂದ ಕರವಸೂಲಿ ಕರ್ತವ್ಯವನ್ನು ಗಣೇಶ್ ಎಂಬವರು ಮಾಡುತ್ತಿದ್ದರು. ಕೆಲವೊಂದು ನಿರ್ದಿಷ್ಟ ಅವ್ಯವಹಾರಗಳ ಬಗ್ಗೆ ಸ್ವರವನ್ನು ಎತ್ತಿದ್ದರು. ಆದರೆ ಸ್ಥಾಪಿತ ಹಿತಾಶಕ್ತಿಗಳು ಅಕ್ರಮ ಕೂಟವನ್ನು ಕಟ್ಟಿಕೊಂಡು ಪಂಚಾಯತ್‍ನ ಅಕ್ರಮ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಗಣೇಶ್ ಎಂಬವರು ಅಮಾಯಕರಾಗಿದ್ದು, ನ್ಯಾಯಕ್ಕಾಗಿ ಇವರ ಕುಟುಂಬ ಮತ್ತು ದಲಿತ ಸಂಘಟನೆಗಳು ಸತ್ಯ ಪರೀಕ್ಷೆಗೆ ಮುಂದಾಗಿದ್ದೇವೆ ಎಂದು ಹೇಳಿದರು.ಈ ಸಂದರ್ಭ ದಲಿತ ಮುಖಂಡರಾದ ರಮೇಶ್ ಕೋಟ್ಯಾನ್, ಪ್ರಶಾಂತ್ ಬೋಳೂರು ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *