Breaking News

ಅದಾನಿ ಫ಼ೌಂಡೇಶನ್, ವನಮಹೋತ್ಸವ ಕಾರ್ಯಕ್ರಮಗಳ‌ಆಚರಣೆ

ಎಲ್ಲೂರುಗ್ರಾಮದಲ್ಲಿ ಸ್ಥಾಪಿತವಾದ‌ಅದಾನಿ ಸಮೂಹದ ಯುಪಿಸಿ‌ಎಲ್ ಸಂಸ್ಥೆಯು‌ಇಂದುತನ್ನ ಸಿ‌ಎಸ್‌ಆರ್ ಯೋಜನೆಯನ್ನು ನಿರ್ವಹಿಸುವ ಅಂಗ ಸಂಸ್ಥೆಯಾದ‌ಅದಾನಿ ಫ಼ೌಂಡೇಶನ್ ವತಿಯಿಂದ‌ಅದಾನಿ ಸಮೂಹದ ಸ್ಥಾಪಕ ಅಧ್ಯಕ್ಷರಾದಗೌತಮ್‌ಅದಾನಿ ಅವರಜನ್ಮ ದಿನದ ಪ್ರಯುಕ್ತ ಸ್ವಚ್ಚ ಭಾರತ‌ಅಭಿಯಾನ್, ರಕ್ತದಾನ ಶಿಬಿರ ಹಾಗೂ ವನಮಹೋತ್ಸವಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಿತು.ಸ್ವಚ್ಚ ಭಾರತ‌ಅಭಿಯಾನಕಾರ್ಯಕ್ರಮವನ್ನು“ಪ್ರಯಾಸ್- ಗೋ ಕ್ಲೀನ್” ಎಂಬ ಹೆಸರಿನಡಿಸ್ಥಾವರದ ಸುತ್ತಮುತ್ತಲಿನ ಗ್ರಾಮಗಳಾದ ಎಲ್ಲೂರು, ಮುದರಂಗಡಿ, ನಂದಿಕೂರು ಮತ್ತು ಪಡುಬಿದ್ರಿ ಗ್ರಾಮಗಳಲ್ಲಿ ಆಚರಿಸಿತು.ಈ ಕಾರ್ಯಕ್ರಮಕ್ಕೆಕಂಪನಿಯಜಂಟಿ‌ಅಧ್ಯಕ್ಷರಾದಕಿಶೋರ್ ಆಳ್ವ ಅವರು ಸ್ಥಾವರದ ವಠಾರದಲ್ಲಿ ಪ್ರಮಾಣ ವಚನ ತೆಗೆದುಕೊಳ್ಳುವ ಮೂಲಕ ಚಾಲನೆ ನೀಡಿದರು.ಚಾಲನೆಯನ್ನು ನೀಡಿ ಮಾತನಾಡಿದಕಿಶೋರ್‌ಅವರು ಸ್ವಚ್ಚ ಭಾರತ್‌ಅಭಿಯಾನಗಾಂಧೀಜಿಯವರಕನಸಾಗಿದ್ದು‌ಅದನ್ನು ನನಸಾಗಿಸಲು ಎಲ್ಲರ ಪ್ರಯತ್ನ‌ಅತ್ಯವಶ್ಯಕ‌ಎಂದು ತಿಳಿಸುತ್ತಾ, ಪ್ರಯಾಸ್‌ಅಭಿಯಾನವು ನಾವು ವಾಸಿಸುವ ಸ್ಥಳದಿಂದ ಪ್ರಾರಂಭವಾಗಬೇಕು.ನಾವು ಕೆಲಸ ಮಾಡುವ ಸ್ಥಳ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ‌ಇರಬೇಕೆಂದು ಫ಼ಣತೊಟ್ಟು‌ಅದಕ್ಕೆ ಶ್ರಮಿಸಿದರೆ ಇಡೀಗ್ರಾಮ, ರಾಜ್ಯ ಹಾಗೂ ದೇಶ ಸ್ವಚ್ಚವಾಗಿರುತ್ತ‌ಎಂದು ಆಳ್ವತಿಳಿಸಿದರು.ದೇಶದ ಏಳಿಗೆಗೆ ಸ್ವಚ್ಚ ಭಾರತ್‌ಅಭಿಯಾನ್‌ಒಂದು ಪರಿಣಾಮಕಾರಿಯೋಜನೆಯಾಗಿದ್ದು, ಅದನ್ನು ನಾವೆಲ್ಲರೂ ಅಳವಡಿಸಕೊಳ್ಳಬೇಕೆಂದು ತಿಳಿಸಿದರು.

ಅದಾನಿ ಯುಪಿಸಿ‌ಎಲ್‌ನ ಪ್ರಯಾಸ್‌ಕಾರ್ಯಕ್ರಮಕ್ಕೆ‌ಎಲ್ಲೂರು, ಮುದರಂಗಡಿ, ಪಲಿಮಾರು ಮತ್ತು ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರು ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.
ನಂತರ ಯುಪಿಸಿ‌ಎಲ್ ಸ್ಥಾವರ ಹಾಗೂ ನವ ಮಂಗಳೂರು ಬಂದರುಟ್ರಸ್ಟ್ (ಎನ್‌ಎಂಪಿಟಿ)ಯ ವಠಾರದಲ್ಲಿಮತ್ತು‌ಉಡುಪಿ ಜಿಲ್ಲಾ‌ಆಸ್ಪತ್ರೆಯಲ್ಲಿಬೃಹತ್‌ರಕ್ತದಾನ ಶಿಬಿರವನ್ನು “ಗೋ-ರೆಡ್” ಎಂಬ ಹೆಸರಿನಡಿ ಹಮ್ಮಿಕೊಳ್ಳಲಾಯಿತು.

ಸ್ವಚ್ಚ ಭಾರತ್‌ಅಭಿಯಾನ್ ಮತ್ತುರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ನಂತರ ವನಮಹೋತ್ಸವವನ್ನು’ಗೋ-ಗ್ರೀನ್’ ಎಂಬ ಕಾರ್ಯಕ್ರಮದಡಿ ಯುಪಿಸಿ‌ಎಲ್ ಸಂಸ್ಥೆ ಆಚರಿಸಿತು. ಸ್ಥಾವರದ ವಠಾರದಲ್ಲಿ ಮತ್ತು ಯುಪಿಸಿ‌ಎಲ್‌ನ ಪುನರ್ವಸತಿಕೇಂದ್ರದಲ್ಲಿ ವನಮಹೋತ್ಸವಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವರದಿ-ಸುರೇಶ್ ಎರ್ಮಾಳ್

Related posts

Leave a Reply