Header Ads
Header Ads
Breaking News

ಅಧಿಕಾರಿಗಳ ತಪ್ಪು ಮಾಹಿತಿಯಿಂದ ತನ್ನ ಮೇಲೆ ತಪ್ಪಾಭಿಪ್ರಾಯ:ಬಿ. ರಮಾನಾಥ ರೈ ಹೇಳಿಕೆ

ಬಂಟ್ವಾಳ: ನವಂಬರ್ ಮೊದಲ ವಾರದಲ್ಲಿ ಕಂದಾಯ ಸಚಿವರು ಜಿಲ್ಲೆಗೆ ಭೇಟಿ ನೀಡುವ ಸಂದರ್ಭ ಬಾಕಿ ಉಳಿದಿರುವ ಎಲ್ಲಾ ಹಕ್ಕುಪತ್ರಗಳ ವಿತರಣೆಗೆ ವ್ಯವಸ್ಥೆ ಗೊಳಿಸುವಂತೆ ಅಧಿಕಾರಿಗಳಿಗೆ ಕರೆಮಾಡಿ ಸೂಚಿಸಿದ್ದು ಹೌದು, ಆದರೆ ನಿಗದಿಯಾಗಿದ್ದ ಕಾರ್ಯಕ್ರಮ ತಡೆಯಲು ತಾನು ಹೇಳಿಲ್ಲ, ಅಧಿಕಾರಿಗಳ ತಪ್ಪು ಮಾಹಿತಿಯಿಂದ ತನ್ನ ಮೇಲೆ ತಪ್ಪಾಭಿಪ್ರಾಯ ಬಂದಿದೆ.ಬಿ ಜೆಪಿ ಇದನ್ನೇ ತನ್ನ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಎಂದು ಮಾಜಿ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮ ಗೋಷ್ಟಿ ನಡೆಸಿದ ಅವರು ಕಂದಾಯ ಇಲಾಖೆಯ ಸಚಿವರನ್ನು ಕರೆಸಿ ರಾಜ್ಯದಲ್ಲೇ ಅತ್ಯಧಿಕ ಹಕ್ಕುಪತ್ರವನ್ನು ನಾನು ಕೊಡಿಸಿದ್ದೇನೆ. ಈ ಬಾರಿಯೂ ತಾಲೂಕಿನ ಎಲ್ಲಾ ಫಲಾನುಭವಿಗಳಿಗೂ ಶೀಘ್ರ ಹಾಗೂ ಏಕಕಾಲದಲ್ಲೇ ಹಕ್ಕುಪತ್ರ ಕೊಡಿಸಬೇಕು ಎನ್ನುವ ಉದ್ದೇಶದಿಂದ ತಹಶೀಲ್ದಾರರಿಗೆ ಈ ಸೂಚನೆ ನೀಡಿದ್ದೆ ಎಂದು ಸ್ಪಷ್ಟಪಡಿಸಿದರು. ಶಾಸಕರ ಕೈಯಲ್ಲಿಯೇ 94 ಸಿ ಹಕ್ಕುಪತ್ರ ಕೊಡಬೇಕು ಎನ್ನುವ ಕಾನೂನು ಎಲ್ಲಿಯೂ ಇಲ್ಲ. ಈಗ ಭಾಷಣ ಮಾಡುವ ಬಿಜೆಪಿ ನಾಯಕರಿಗೆ 94 ಸಿ ಕಾನೂನು ಜಾರಿ ಮಾಡಲು ಸಾಧ್ಯವಾಗಿಲ್ಲ, ಬಡವರಿಗೆ 5 ಸೆಂಟ್ಸ್ ಜಾಗ ಕೊಟ್ಟ ಚರಿತ್ರೆ ಅವರಲ್ಲಿಲ್ಲ. ಕಳೆದ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಅತೀ ಹೆಚ್ಚು 94 ಸಿ ಹಕ್ಕುಪತ್ರ ಮಾತ್ರವಲ್ಲದೆ ಗೋಮಾಳ, ಕುಮ್ಕಿ ಜಮೀನಿನಲ್ಲಿಯೂ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ನೀಡಲಾಗಿದೆ ಸಾಮಾಜಿಕ ನ್ಯಾಯ ವಂಚಿತರಾದವರಿಗೂ ಜಮೀನು ಕೊಡುವ ಕೆಲಸವನ್ನು ಮಾಡಲಾಗಿದೆ ಎಂದು ತಿಳಿಸಿದರು.
ತಾನು ಸಚಿವನಾಗಿದ್ದಾಗ , ಕ್ಷೇತ್ರದ ಮತದಾರರು ಆಗಿರದ ರಾಜೇಶ್ ನಾಯ್ಕ್ ಜನಪ್ರತಿನಿಧಿಯಲ್ಲದ ಪದ್ಮನಾಭ ಕೊಟ್ಟಾರಿ ಕೇಂದ್ರ ಸರಕಾರದ ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್, ಸ್ಟೌವ್ ವಿತರಣೆ ಮಾಡಿದ್ದು ಆ ಸಂದರ್ಭವೇ ತಡೆವೊಡ್ಡಲು ಅವಕಾಶವಿತ್ತು ,ಆದರೆ ತಾನು ಇಂತಹ ಚಿಲ್ಲರೆ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಅಪಪ್ರಚಾರ ಮಾಡುವುದೇ ಬಿಜೆಪಿಯ ಉದ್ಯೋಗ ಎಂದು ಟೀಕಿಸಿದರು.
ಗಣಿ ಇಲಾಖೆಯ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಅವರು ಈ ಇಲಾಖೆಯಿಂದ ಹೋಗದೆ ಮರಳು ಸಮಸ್ಯೆ ಬಗೆಹರಿಯಲು ಸಾಧ್ಯವಿಲ, ಹಲವು ಬಾರಿ ಜಿಲ್ಲೆಯ ಮರಳು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗಿತ್ತಾದರೂ ಯಾವುದೇ ಸ್ಪಂದನ ನೀಡಲಿಲ್ಲ,ಇವರು ಇಲ್ಲಿಂದ ಹೋಗದ ಹೊರತು ಮರಳು ಸಮಸ್ಯೆ ಮುಗಿಯುವುದಿಲ್ಲ ಎಂದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಮರಳು ಸಮಸ್ಯೆ ಸೃಷ್ಟಿಯಾಗಿದ್ದು, ಈಗ ಅವರೇ ಪ್ರತಿಭಟನೆಗೆ ಮುಂದಾಗಿರುವುದು ದುರದೃಷ್ಟಕರ ಎಂದ ಅವರು ಮರಳು ನೀತಿ ಜಾರಿಗೆ ತನ್ನಷ್ಟು ಪ್ರಯತ್ನ ಯಾರು ಮಾಡಿಲ್ಲ ಎಂದರು. ನಾನು ಯಾವುದೇ ರೀತಿಯ ವ್ಯಾಪಾರದಲ್ಲಿ ತೊಡಗಿಸಿಕೊಂಡಿಲ್ಲ. ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ಸಹಾಯ ಮಾಡುವುದೇ ನನ್ನ ಉದ್ದೇಶ ಎಂದು ತಿಳಿಸಿದರು.
ಸಂಗಬೆಟ್ಟು ತಾಲೂಕು ಪಂಚಾಯತ್ ಉಪಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ಈಗ ಗೆದ್ದ ಅಭ್ಯರ್ಥಿ ಈ ಹಿಂದೆ ನನ್ನ ಜೊತೆ ಇದ್ದಾಗ ಅಲ್ಲಿ ಅಭಿವೃದ್ದಿ ಕಾರ್ಯಗಳು ನಡೆದಿದೆ. ವಿಧಾನಸಭಾ ಚುನಾವಣೆ ನಡೆದು 5 ತಿಂಗಳು ಮಾತ್ರ ನಡೆದಿದೆ. ಅವರ ಮೌಲ್ಯಮಾಪನ ಆದಾಗ ಹಣೆಬರೆಹವು ಗೊತ್ತಗಲಿದೆ ಎಂದರು. ಪುರಸಭಾ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ನಾವೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ವರ್ಗದ ಜನರಿಗೆ ಅಧಿಕಾರ ಸಿಗುವಂತಾಗುವಾಗ ನ್ಯಾಯಲಯದ ಮೊರೆ ಹೋದವರು ಬಿಜೆಪಿಯವರು ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಪ್ರಮುಖರಾದ ಬೇಬಿ ಕುಂದರ್, ಬಿ.ಎಚ್.ಖಾದರ್, ಪದ್ಮಸೇಖರ ಜೈನ್, ಅಬ್ಬಾಸ್ ಅಲಿ, ಸಂಜೀವ ಪೂಜಾರಿ, ಬಿ.ಕೆ ಇದಿನಬ್ಬ, ಸುದೀಪ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಪ್ರಶಾಂತ್ ಕುಲಾಲ್, ಜನಾರ್ಧನ ಚೆಂಡ್ತಿಮಾರ್ ಹಾಜರಿದ್ದರು.

Related posts

Leave a Reply