Header Ads
Header Ads
Header Ads
Breaking News

ಅಮಿಶ್ ಶಾ ಬಂದರೆ ಉಪವಾಸ ಸತ್ಯಾಗ್ರಹ : ಐವನ್ ಡಿಸೋಜಾ

ಎನ್‌ಆರ್‌ಸಿ ಮತ್ತು ಸಿಎಎ ಜಾರಿ ಮಾಡಿ ಕೇಂದ್ರ ಸರ್ಕಾರ ಯುದ್ಧಕ್ಕೆ ಹೊರಟಿದೆಯೇ. ಮುಸ್ಲಿಂ ಸಮುದಾಯಕ್ಕೆ ಏನು ತೊಂದರೆ ಇಲ್ಲ ಎಂದಾದರೆ, ನಿಮ್ಮ ವಿಧೇಯಕದಲ್ಲಿ ಮುಸ್ಲಿಂ ಸಮುದಾಯವನ್ನು ಸೇರಿಸಿ, ೩ ದೇಶಕ್ಕೆ ಮಾತ್ರ ಸೀಮಿತ ಯಾಕೆ? ಶ್ರೀಲಂಕಾವನ್ನು ಯಾಕೆ ಬಿಟ್ಟಿದ್ದೀರಿ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದ್ದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ನಿಮ್ಮದು ದೊಡ್ಡ ನಾಟಕ ಕಂಪನಿ, ಪೌರತ್ವ ವಿಧೇಯಕದಿಂದ ನಿಮ್ಮ ಸಾಧನೆ ಏನಾಗುತ್ತದೆ ಎಂದು ಹೇಳಿದರು. ಪೌರತ್ವ ಹಿಂದೆಯೂ ಕೊಡುತ್ತಿತ್ತು, ಆದರೆ ಹೊಸತ್ತು ಯಾಕೆ ತಂದಿದ್ದೀರಿ, ಬಿಜೆಪಿ ಮತ ಬ್ಯಾಂಕ್‌ಗಾಗಿ ಇದನ್ನು ಜಾರಿಗೆ ತರಲು ಹೊರಟಿದೆ. ಕೂಡಲೇ ಇದನ್ನು ಹಿಂದೆ ತೆಗೆದುಕೊಳ್ಳಬೇಕು. ಮನೆ ಮನೆಗೆ ಹೋಗಿ ಅರಿವು ಮೂಡಿಸುದನ್ನು ನಿಲ್ಲಿಸಬೇಕು. ದಾಖಲೆ ಇಲ್ಲ ಎಂದಾದರೆ ಅವನನ್ನು ಜೈಲಿಗೆ ಹಾಕುತ್ತೀರಿ. 19 ರಂದು ಅಮಿತ್ ಶಾ ಬರುವುದು ಬೇಡ. ಬಂದರೆ ನಾವು ಹೋ ಬ್ಯಾಕ್ ಪ್ರತಿಭಟನೆ ಮಾಡುತ್ತೇವೆ. ಸದ್ಯಕ್ಕೆ ಯಾವುದೇ ಇಂತ ಸಭೆಗಳನ್ನು ಮಾಡಬಾರದು. ಅಮಿಶ್ ಶಾ ಬಂದರೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಐವನ್ ಡಿಸೋಜ ಹೇಳಿದರು.

Related posts

Leave a Reply

Your email address will not be published. Required fields are marked *