Header Ads
Header Ads
Breaking News

ಆಶ್ರಯದಾತ ಆಟೋ ಯೂನಿಯನ್

ಉಡುಪಿ ಜಿಲ್ಲೆಯಾದ್ಯಂತ ಹೆಸರು ಗಳಿಸುರುವ ಆಶ್ರಯದಾತ ಆಟೋ ಯೂನಿಯನ್ ತನ್ನ ಮೂರನೇ ಕಚೇರಿಯನ್ನು ಕಾರ್ಕಳದಲ್ಲಿ ತೆರೆದಿದೆ. ಈಗಾಗಲೇ ಉಡುಪಿ ಮತ್ತು ಕುಂದಾಪುರದಲ್ಲಿ ಆಟೋ ಯೂನಿಯನ್ ನ ಕಚೇರಿ ಹೊಂದಿದ್ದು ಅಲ್ಲಿ ರಿಕ್ಷಾ ಚಾಲಕರಿಗೆ ಅಗತ್ಯ ಕೆಲಸಗಳನ್ನು ಮಾಡಿಕೊಡುತ್ತಿದೆ.ಕಳೆದ ವರ್ಷ ಜುಲೈ ೨ರಂದೇ ಕಚೇರಿಯು ಕುಂದಾಪುರದಲ್ಲಿ ಆರಂಭವಾಗಿದ್ದು ಈ ಬಾರಿ ಜುಲೈ ೨ರಂದೇ ಕಾರ್ಕಳದ ಕಚೇರಿ ಉದ್ಘಾಟನೆಗೊಂಡಿದೆ. ಆಶ್ರಯದಾತ ಆಟೋ ಯೂನಿಯನ್ ಅಧ್ಯಕ್ಷರಾಗಿರುವ ಕೆ.ರಮೇಶ್ ಶೆಟ್ಟಿ ಈಗ ಜಯಕರ್ನಾಟಕದ ಜಿಲ್ಲಾಧ್ಯಕ್ಷರಾಗಿರುವ ಹಿನ್ನಲೆಯಲ್ಲಿ ಜಯಕರ್ನಾಟಕದ ಕಚೇರಿಯೂ ಇಲ್ಲೇ ಕಾರ್ಯನಿರ್ವಹಿಸಲಿದೆ. ಕಾರ್ಕಳದ ಹೃದಯ ಭಾಗದಲ್ಲಿ ಕಚೇರಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಜಯಕರ್ನಾಟಕದ ಗೌರವ ಸಲಹೆಗಾರ ಸತೀಶ್ ಶೆಟ್ಟಿ ಮುಟ್ಲುಪಾಡಿ ಉದ್ಘಾಟಿಸಿದರೆ, ಆಶ್ರಯದಾತ ಆಟೋ ಯೂನಿಯನ್ ಅಧ್ಯಕ್ಷ ರಮೆಶ್ ಶೆಟ್ಟಿ ದೀಪ ಬೆಳಗಿಸುವ ಮೂಲಕ ಕಚೇರಿ ಉದ್ಘಾಟಿಸಿದರು. ಈ ಸಂದರ್ಬದಲ್ಲಿ ಮಾತನಾಡಿದ ರಮೆಶ್ ಶೆಟ್ಟಿ ಸಾರಿಗೆ ಕಚೇರಿಯಲ್ಲಿ ಲಂಚ ರಹಿತವಾಗಿ ಕೆಲಸ ಮಾಡಿಸಿಕೊಡುವ ಮೂಲಕ ಸಂಘಟನೆಗೆ ಉತ್ತಮ ಹೆಸರು ಸಿಕ್ಕಿದೆ. ಮಾತ್ರವಲ್ಲದೇ ಸಾರಿಗೆ ಇಲಾಖೆಯಲ್ಲಿ ಗೌರವ ನೀಡಲಾಗುತ್ತಿದೆ. ಇನ್ಸೂರೆನ್ಸ್ ಕೂಡಾ ಮಾಡಿಕೊಡಲಾಗುತ್ತಿದ್ದು ಅದರ ಕಮಿಷನ್ ಕೂಡಾ ನೇರವಾಗಿ ರಿಕ್ಷಾ ಚಾಲಕರಿಗೆ ನೀಡುವ ಕೆಲಸ ನಮ್ಮ ಸಂಘಟನೆಯಿಂದ ಆಗುತ್ತಿದೆ. ಬ್ರಾಜಕಾರಣಿಗಳು ಜಾತಿ, ಕ್ಷೇತ್ರ ನೋಡಿ ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಆದ್ರೆ ನಾನು ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಡವರಿಗೆ ಮನೆ ಕಟ್ಟಿಸಿಕೊಟ್ಟಿದ್ದೇನೆ, ಬಡ ರಿಕ್ಷಾ ಚಾಲಕರಿಗೆ ಸಹಾಯ ಮಾಡಿದ್ದೇನೆ. ಸಂಘಟನೆ ಇದೇ ರೀತಿಯಲ್ಲಿ ಬೆಳೆದು ಬಂದು ನವೆಂಬರ್ ನಲ್ಲಿ ದೊಡ್ಡ ಸಮಾವೇಶ ಮಾಡುವಂತಾಗಬೇಕು. ಅದಕ್ಕೆ ಎಲ್ಲಾ ಸದಸ್ಯರು ಶ್ರಮಿಸಬೇಕು ಎಂದು ಹೇಳಿದರು.
ಕಾರ್ಕಳ ತಾಲೂಕಿನ ಅಧ್ಯಕ್ಷರಾಗಿ ಉಮರ್ ಅಬ್ಬ ಆಯ್ಕೆಯಾಗಿದ್ದು ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.
ಸಮಾರಂಭದಲ್ಲಿ ಜಯಕರ್ನಾಟಕದ ಸಂಘಟನಾ ಕಾರ್ಯದರ್ಶಿ ರತ್ನಾಕರ್ ಹಾವಂಜೆ, ಕಾರ್ಯದರ್ಶಿ ಅಣ್ಣಪ್ಪ ಕುಲಾಲ್, ಉಪಾದ್ಯಕ್ಷ ಶಶಿಕಾಂತ್ ಶೆಟ್ಟಿ, ಕರುಣಕರ್ ಪೂಜಾರಿ, ವಿನಯ್ ಶೆಟ್ಟಿ, ಸೋಮಶೇಖರ್, ಶಿವಾನಂದ ಮೂಡಬೆಟ್ಟು, ಕೇಶವ ಶೇರಿಗಾರ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ಪಲ್ಲವಿ ಸಂತೊಷ್

Related posts

Leave a Reply