Header Ads
Header Ads
Breaking News

ಇಂದಿನಿಂದ ಸೂರಜ್ ಕಲಾಸಿರಿ-2018 ಸಂಭ್ರಮ:ಕಾರ್ಯಕ್ರಮಕ್ಕೆ ಮೆರುಗು ನೀಡಲಿದೆ ವಿ4 ನ್ಯೂಸ್‌ನ ಸಿಪಿಎಲ್-2

ಮಂಗಳೂರು ಹೊರವಲಯದ ಮುಡಿಪುವಿನ ಸೂರಜ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇಂದಿನಿಂದ ಸೂರಜ್ ಕಲಾಸಿರಿಯ ವೈಭವ ಮೇಳೈಸಲಿದೆ. ಮೂರುದಿನಗಳ ಕಾಲ ನಡೆಯುವ ಸೂರಜ್ ಕಲಾಸಿರಿ-ಕರಾವಳಿಯ ಕಲಾವೈಭವಕ್ಕೆ ಇಂದು ಮಧ್ಯಾಹ ಚಾಲನೆ ದೊರೆಯಲಿದೆ.

ಮಂಗಳೂರು ಹೊರವಲಯದ ಕುರ್ನಾಡು ಮುಡಿಪುವಿನ ಸೂರಜ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರಾವಳಿಯ ಕಲಾವೈಭವ ಮೇಳೈಸಲಿದೆ. ಇಂದಿನಿಂದ ಡಿಸೆಂಬರ್ 2ರವರೆಗೆ ನಡೆಯಲಿರುವ ಸೂರಜ್ ಕಲಾಸಿರಿ-2018ಕಾರ್ಯಕ್ರಮದಲ್ಲಿ ಕರಾವಳಿಯ ಕಲಾಪ್ರಕಾರಗಳು, ಜಾನಪದ ಸಂಸ್ಕೃತಿ ಲೋಕಮುಖಕ್ಕೆ ಅನಾವರಣಗೊಳ್ಳಲಿದೆ. ಸೂರಜ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರೊ.ಪಿಎಚ್.ಎಫ್. ಡಾ. ಮಂಜುನಾಥ್ ಎಸ್. ರೇವಣ್‌ಕರ್ ಅವರ ಮುಂದಾಳತ್ವದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಇಂದು ಮಧ್ಯಾಹ್ನ ಚಾಲನೆ ದೊರೆಯಲಿದೆ. 

 ಇಂದು ಮಧ್ಯಾಹ್ನ 2.30ಕ್ಕೆ ಸಾಂಸ್ಕೃತಿಕ ಮೆರವಣಿಗೆಯ ಮೂಲಕ ಸೂರಜ್ ಕಲಾಸಿರಿಗೆ ಚಾಲನೆ ದೊರೆಯಲಿದ್ದು, ಮುಡಿಪು ಜಂಕ್ಷನ್‌ನಿಂದ ಸೂರಜ್ ಸಂಸ್ಥೆಯವರೆಗೆ ಮೆರವಣಿಗೆ ನಡೆಯಲಿದೆ. ಕಲಾತಂಡಗಳು, ಚೆಂಡೆ, ಕೊಂಬು, ಕಲ್ಲಡ್ಕ ಗೊಂಬೆ, ಯಕ್ಷUನ, ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಲಿದೆ. ಬಳಿಕ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ ನಾಟ್ಯವೈಭವ ನಡೆಯಲಿದ್ದು, ಬಳಿಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಖ್ಯಾತ ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್ ಅವರ ಸರ್ವಾದ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನದಲ್ಲಿ ನಾಡಿನ ಹಲವು ಗಣ್ಯರು ಪಾಲ್ಗೊಳ್ಳಲಿದ್ದು, ಭರತನಾಟ್ಯ, ಸುಗಮಸಂಗೀತ ನಡೆಯಲಿದೆ.

: ಸಮ್ಮೇಳನದ ಎರಡನೇ ದಿನ ಬೆಳಗ್ಗೆ ಸೂರಜ್ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ನಡೆಯಲಿದ್ದು, ಬಳಿಕ ಜಾನಪದ ಕುಣಿತ ಗಮನಸೆಳೆಯಲಿದೆ. ಸಂಜೆ 6 ಗಂಟೆಯಿಂದ ಸೂರಜ್ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಹಲವು ಗಣ್ಯರ ಸಮ್ಮುಖದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಸಂಗೀತ ಗಾಯನ ಹಾಗೂ ಕೋರ್ಟ್ ಮಾರ್ಷಲ್ ನಾಟಕ ಪ್ರದರ್ಶನಗೊಳ್ಳಲಿದೆ. ಮೂರನೇ ದಿನ ವಿ4 ನ್ಯೂಸ್‌ನ ಜನಪ್ರಿಯ ಕಾರ್ಯಕ್ರಮ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ 2 ಕಲಾಸಿರಿಗೆ ವಿಶೇಷ ಮೆರುಗು ತಂದುಕೊಡಲಿದೆ. ಸಂಜೆ5 ಗಂಟೆಗೆ ಸೂರಜ್ ಕಲಾಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಖ್ಯಾತ ಚಲನಚಿತ್ರ ನಟಿ ಪದ್ಮಶ್ರೀ ಭಾರತೀ ವಿಷ್ಣುವರ್ಧನ್ ಅವರಿಗೆ ಪ್ರಶಸ್ತಿ ಪ್ರದಾನಿಸಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಕುದ್ರೋಳಿ ಗಣೇಶ್ ತಂಡದಿಂದ ಜಾದೂ ಪ್ರದರ್ಶನ ನಡೆಯಲಿದ್ದು, ಈ ಮೂಲಕ ಮೂರುದಿನಗಳ ಸೂರಜ್ ಕಲಾಸಿರಿ ಉತ್ಸವಕ್ಕೆ ತೆರೆ ಬೀಳಲಿದೆ.

Related posts

Leave a Reply