Header Ads
Header Ads
Breaking News

ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಕಾಪು ಠಾಣೆಗೆ ವರ್ಗಾವಣೆ

ಪುತ್ತೂರು ನಗರ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರಿಗೆ ಕಾಪು ಠಾಣೆಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ತೆರವಾದ ಹುದ್ದೆಗೆ ತಿಮ್ಮಪ್ಪ ನಾಯ್ಕ್ ವರ್ಗಾವಣೆಗೊಂಡು ಅ.10ರಂದು ಮಧ್ಯಾಹ್ನದ ವೇಳೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಹೋಗಿ ಅಲ್ಲಿ ಮಧ್ಯಾಹ್ನದ ಪೂಜೆ ಬಳಿಕ ಠಾಣೆಗೆ ಆಗಮಿಸಿ ಕರ್ತವ್ಯ ನಿರತ ವೃತ್ತನಿರೀಕ್ಷಕ ಮಹೇಶ್ ಪ್ರಸಾದ್ ಅವರ ಜೊತೆ ಈ ಹಿಂದಿನ ಕ್ರೈಂಗಳ ಮಾಹಿತಿ ಪಡೆದು ಬಳಿಕ ಅಧಿಕಾರ ಸ್ವೀಕಾರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.  ತಿಮ್ಮಪ್ಪ ನಾಯ್ಕ್ ಪುತ್ತೂರಿಗೆ ಬರುವ ಮುನ್ನ ಅವರು ಉಡುಪಿ ಜಿಲ್ಲೆ ನಕ್ಸಲ್ ನಿಗ್ರಹ ದಳದ ಕಾರ್ಕಳ ಘಟಕದ ಇನ್ಸ್‌ಪೆಕ್ಟರ್ ಆಗಿದ್ದರು.  2015ಜುಲೈಯಿಂದ 2016ಅಕ್ಟೋಬರ್ ತನಕ ಉಪ್ಪಿನಂಗಡಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದವರು, ಬಳಿಕ ಭಡ್ತಿ ಹೊಂದಿ ಆಂತರಿಕ ಭದ್ರತಾ ದಳ ಬೆಂಗಳೂರು ಕಚೇರಿಗೆ ವರ್ಗಾವಣೆ ಹೊಂದಿದ್ದರು. ಅಲ್ಲಿಂದ ಉಡುಪಿ ಜಿಲ್ಲೆ ನಕ್ಸಲ್ ನಿಗ್ರಹ ದಳಕ್ಕೆ ನಿಯೋಜನೆ ಹೊಂದಿದ್ದರು.

Related posts

Leave a Reply