Header Ads
Breaking News

ಉಚ್ಚಿಲದಲ್ಲಿ ತೀರಕ್ಕೆಬಂದ ಮೀನುಗಾರಿಗಾ ಬೋಟ್: ವಿಶ್ರಾಂತಿಯಲ್ಲಿದ್ದ ವೇಳೆ ಬಂಡೆಕಲ್ಲಿಗೆ ಸಿಲುಕಿ ನಾಶಗೊಂಡ ಬೋಟ್

ಮತ್ಸ್ಯ ಬೇಟೆಗೆ ಬಲೆ ಬೀಸಿ, ಆಳ ಸಮುದ್ರದಲ್ಲಿ ಟ್ರೊಲ್ ಹಾಕಿ ನಿಲ್ಲಿಸಿದ ಮೀನುಗಾರಿಕಾ ಬೋಟ್ ನಲ್ಲಿದ್ದ ಮಂದಿ ವಿಶ್ರಾಂತಿಯಲ್ಲಿದ್ದ ವೇಳೆ ಬೀಸಿದ ಬಲೆ ಬಂಡೆ ಕಲ್ಲಿಗೆ ಸಿಲುಕಿ ನಾಶಗೊಂಡು, ಬೋಟ್ ಉಚ್ಚಿಲ ಕಡಲ ತೀರಕ್ಕೆಬಂದು ಅಪ್ಪಳಿಸಿದಾಗಲೇ ಬೊಟ್‍ನಲ್ಲಿದ್ದ ಮೀನುಗಾರ ಗಮನಕ್ಕೆ ಬಂದಿದೆ.

ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಐವರಿದ್ದ ಬೋಟ್ ಆಳ ಸಮುದ್ರದಲ್ಲಿ ಬಲೆ ಬೀಸಿ ವಿಶ್ರಾಂತಿಯಲ್ಲಿದ್ದರು. ಬಂಡೆಗೆ ತಾಗಿದ ಬಲೆ ನಾಶಗೊಂಡು ಬೋಟ್ ತೀರಕ್ಕೆ ಬಂದ ಮರಳಿಗೆ ಅಪ್ಪಳಿಸಿದಾಗಲೇ ಬೋಟ್ ನಲ್ಲಿದ್ದವರಿಗೆ ಎಚ್ಚರವಾಗಿದೆ. ಸಮುದ್ರ ಶಾಂತವಾಗಿದ್ದರಿಂದ ಬೋಟ್ ಸಹಿತ ಮೀನುಗಾರರಿಗೆ ಯಾವುದೇ ಅಪಾಯ ಸಂಭವಿಸಿಲ್ಲ, ಸಮುದ್ರ ಬಿರುಸುಗೊಂಡಿದ್ದರೆ ಬೋಟ್ ನಾಶ ಸಹಿತ ಪ್ರಾಣಹಾನಿಯ ಸಂಭವವೂ ಇತ್ತೆನ್ನುತ್ತಾರೆ ಸ್ಥಳೀಯ ಮೀನುಗಾರರು. ಮುಂಜಾನೆ ಮತ್ತೊಂದು ಬೋಟಿನ ಮೂಲಕ ತೀರ ಸೇರಿದ ಬೋಟ್‍ಗೆ ಹಗ್ಗ ಕಟ್ಟಿ ಸಮುದ್ರ ಮಧ್ಯೆ ಎಳೆದು ಸುಸ್ಥಿಗೆ ತರಲಾಗಿದೆ.

Related posts

Leave a Reply

Your email address will not be published. Required fields are marked *