Header Ads
Breaking News

ಉಡುಪಿಯಲ್ಲಿ ಬಂದ್‍ಗೆ ನೀರಸ ಪ್ರತಿಕ್ರಿಯೆ

ಕನಿಷ್ಠ ವೇತನ 24 ಸಾವಿರಕ್ಕೆ ಹೆಚ್ಚಿಸಬೇಕು. ಎನ್‍ಆರ್‍ಸಿ, ಸಿಎಎ ಸ್ಥಗಿತಗೊಳಿಸಬೇಕು. 44 ಕಾರ್ಮಿಕ ಕಾಯ್ದೆಗಳನ್ನು ವಿಲೀನಗೊಳಿಸಿ ಮಸೂದೆ ಮಂಡಿಸುವುದನ್ನು ಕೈಬಿಡಬೇಕು. ಬ್ಯಾಂಕುಗಳ ಖಾಸಗೀಕರಣ ನಿಲ್ಲಿಸಬೇಕು. ಹೀಗೆ ಹಲವಾರು ಬೇಡಿಕೆಯನ್ನು ಮುಂದಿಟ್ಟು ವಿವಿಧ ಕಾರ್ಮಿಕ ಸಂಘಟನೆಗಳು ನೀಡಿರುವ ದೇಶವ್ಯಾಪಿ ಬಂದ್‍ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರೀಯೆ ವ್ಯಕ್ತವಾಗಿದೆ.

ಬಂದ್ ಹಿನ್ನಲೆಯಲ್ಲಿ ಖಾಸಗೀ ಬಸ್‍ಗಳ ಸೇವೆ ಎಂದಿನಂತೆ ಇತ್ತು. ನಿನ್ನೆಯೇ ಬಂದ್‍ಗೆ ಬೆಂಬಲ ಇಲ್ಲ ಎಂದು ಖಾಸಗೀ ಬಸ್‍ಗಳ ಮಾಲಕ ಸಂಘ ತಿಳಿಸಿದ್ದು ಈ ಹಿನ್ನಲೆಯಲ್ಲಿ ಇಂದು ಸಿಟಿ ಹಾಗೂ ಎಕ್ಸ್‍ಪ್ರೆಸ್ ಬಸ್‍ಗಳ ಓಡಾಟ ಎಂದಿನಂತೆ ಇತ್ತು. ಅದರ ಜೊತೆಗೆ ಸರಕಾರಿ ಬಸ್‍ಗಳು ಸಹ ನಿರಾತಂಕವಾಗಿ ಓಡಾಡಿದವು. ಆಟೋ, ಟ್ಯಾಕ್ಸಿ, ಸೇರಿದಂತೆ ಸಾರ್ವಜನಿಕ ಸೇವೆಗಳಿಗೆ ಅಡಚಣೆಯಾಗಲಿಲ್ಲ. ಶಾಲಾ, ಕಾಲೇಜುಗಳು, ಸರಕಾರಿ ಕಚೇರಿಗಳು, ಬ್ಯಾಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ದೇಶವ್ಯಾಪಿ ಮುಷ್ಕರ ಹಿನ್ನಲೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. ನಗರದ ಬೋರ್ಡ್ ಹೈಸ್ಕೂಲ್ ಆವರಣದಿಂದ ಆರಂಭವಾದ ಮೆರವಣಿಗೆ ಅಜ್ಜರಕಾಡು ಹುತಾತ್ಮರ ವೇದಿಕೆ ತನಕ ನಡೆಯಿತು. ದೇಶದ ಎಲ್ಲ ನಾಗರಿಕರಿಗೂ ಪೆನ್ಷನ್ ನೀಡಬೇಕು. ಕನಿಷ್ಟ ವೇತನ ಹೆಚ್ಚಳ ಮಾಡಬೇಕು . ರಾಷ್ಟ್ರೀಯ ಹೆದ್ದಾರಿ, ಮರಳು, ನಿವೇಶನ ಮೊದಲಾದ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಕಾರ್ಮಿಕ ಸಂಘಟನೆಗಳು ಮುಖಂಡರು ಆಗ್ರಹಿಸಿದರು.

Related posts

Leave a Reply

Your email address will not be published. Required fields are marked *