Header Ads
Header Ads
Breaking News

ಉದ್ಯಾವರ ಸ್ಮಶಾನ ಹಾಗೂ ರಸ್ತೆಗೆ ಸಿಕ್ಕಿದ ಶಾಶ್ವತ ಪರಿಹಾರ

ಮಂಜೇಶ್ವರ: ಕಳೆದ ಹಲವಾರು ವರ್ಷಗಳಿಂದ ಉದ್ಯಾವರ ಸ್ಮಶಾನ ಹಾಗೂ ರಸ್ತೆ ವಿಷಯದಲ್ಲಿ ಭುಗಿಲೇಳುತಿದ್ದ ಸಮಸ್ಯೆಗೆ ಬುಧವಾರದಂದು ಸಂಜೆ ಗ್ರಾ. ಪಂ. ನಲ್ಲಿ ನಡೆದ ಸರ್ವ ಪಕ್ಷ ಸಭೆಯಲ್ಲಿ ಶಾಶ್ವತ ಪರಿಹಾರವನ್ನು ಕಂಡು ಕೊಳ್ಳಲಾಯಿತು.

ಉದ್ಯಾವರ ಜುಮಾ ಮಸೀದಿ ಹಾಗೂ ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರವನ್ನು ಸಂಪರ್ಕಿಸುವ ರಸ್ತೆ ಹದೆಗೆಟ್ಟು ಶ್ಯಾವಸ್ಥೆಗೆ ತಲುಪಿದ್ದರೂ ಇದನ್ನು ಮರು ಡಾಮಾರೀಕರಣ ಮಾಡಲು ಜಿಲ್ಲಾ ಪಂ. ಹಾಗೂ ಗ್ರಾ. ಪಂ. ಮುಂದಾಗಿತ್ತು. ಇದಕ್ಕೆ ಕ್ಷೇತ್ರದ ಆಡಳಿತ ಸಮಿತಿ ಕೂಡಾ ಒಪ್ಪಿಗೆಯನ್ನು ನೀಡಿತ್ತು. ಈ ಮಧ್ಯೆ ಕೆಲವೊಂದು ವ್ಯಕ್ತಿಗಳು ಡಾಮಾರೀಕರಣಕ್ಕೆ ಅಡ್ದಪಡಿಸಿದ್ದರು. ಇದು ಸಂಘರ್ಷಕ್ಕೂ ದಾರಿಯಾಗಿತ್ತು. ಇದೇ ರಸ್ತೆಯನ್ನು 2003/04ರಲ್ಲಿ ಮಂಜೇಶ್ವರ ಗ್ರಾ. ಪಂ. ಫಂಡ್ ನಿಂದ ನಿರ್ಮಿಸಲಾಗಿತ್ತು. ಬಳಿಕ ೨೦೧೧/೧೨ ರಲ್ಲಿ ಮಂಜೇಶ್ವರ ಗ್ರಾ. ಪಂ. ನ ವತಿಯಿಂದ ಮರು ಡಾಮಾರೀಕರಣವನ್ನು ಕೂಡಾ ಮಾಡಲಾಗಿತ್ತು. ಆದರೆ ಈ ಸಲ ಈ ರಸ್ತೆಯ ಮರು ಡಾಮಾರೀಕರಣಕ್ಕೆ ಜಿಲ್ಲಾ ಪಂ. ನಿದ ಹಾಗೂ ಗ್ರಾ. ಪಂ. ನ ವತಿಯಿಂದ ಫಂಡನ್ನು ಮೀಸಲಿರಿಸಿ ಕಾಮಗಾರಿ ಆರಂಭಗೊಳ್ಳುವಾಗ ತಡೆಯೊಡ್ದಿದಾಗ ಎರಡು ವಿಭಾಗಗಳ ಮಧ್ಯೆ ಸಂಘರ್ಷ ಉಂಟಾಗಿ ಬಳಿಕ ಪೊಲೀಸರ ಮದ್ಯಸ್ಥಿಕೆಯಿಂದ ಶಾಂತಿ ಉಂಟಾಗಿದ್ದರೂ ರಸ್ತೆ ಕಾಮಗಾರಿ ಹಾಗೇ ಉಳಿದಿತ್ತು.

ಅದೇ ರೀತಿ ಹಲವಾರು ವರ್ಷಗಳ ಹಿಂದೆ ಮಂಜೇಶ್ವರ ಗ್ರಾ. ಪಂ. ನ ವತಿಯಿಂದ ನಿರ್ಮಾಣಗೊಳಿಸಲಾಗಿದ್ದ ಸಾರ್ವಜನಿಕ ಸ್ಮಶಾನಕ್ಕೆ ಸೂಕ್ತವಾದ ಬಂದೋಬಸ್ತ್ ಒದಗಿಸಲು ಗ್ರಾ. ಪಂ. ಮುಂದಾದಾಗ ಅಲ್ಲೂ ಕೆಲವೊಂದು ವ್ಯಕ್ತಿಗಳು ತಡೆಯೊಡ್ದಿ ರಾತ್ರೋ ರಾತ್ರಿ ಅಲ್ಲಿಯ ಗೇಟನ್ನು ಎತ್ತಿ ಕೊಂಡು ಹೋಗಿದ್ದರು. ಆ ಸಂದರ್ಭದಲ್ಲೂ ಅದು ಘರ್ಷಣೆಗೆ ಕಾರಣವಾಗಿತ್ತು. ಈ ಎರಡೂ ವಿಷಯಗಳಲ್ಲಿ ಆಗಾಗ ಸಂಘರ್ಷಗಳು ಉಂಟಾಗುತ್ತಿರುವುದನ್ನು ಮನಗಂಡು ಮಂಜೇಶ್ವರ ಸರ್ಕಲ್ ಇನ್ಸ್ ಪೆಕ್ಟರ್ ದಿನೇಶ್ ರವರ ನೇತ್ರತ್ವದಲ್ಲಿ ಬುಧವಾರ ಸಂಜೆ ಗ್ರಾ. ಪಂ. ಸಭಾಂಗಣದಲ್ಲಿ ಉದ್ಯಾವರ ಮಸೀದಿ ಆಡಳಿತ ಸಮಿತಿ, ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರ ಆಡಳಿತ ಸಮಿತಿ ಹಾಗೂ ಸರ್ವ ಪಕ್ಷಗಳ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಸೇರಿದವರೆಲ್ಲರ ಅಭಿಪ್ರಾಯಗಳನ್ನು ಕೇಳಿದ ಬಳಿಕ ಒಮ್ಮತದ ತೀರ್ಮಾನಕ್ಕೆ ಬರಲಾಯಿತು. ಮಾತ್ರವಲ್ಲದೆ ಪಂ. ಅಧ್ಯಕ್ಷರ ಮಾತು ಸೇರಿದವರೆಲ್ಲರನ್ನು ಒಮ್ಮೆಗೆ ಆಶ್ಚರ್ಯಚಕಿತರನ್ನಾಗಿ ಮಾಡಿದರೂ ಬಳಿಕ ಮಾತಿನ ನಿಜಾಂಶವನ್ನು ಅರಿತು ಎಲ್ಲರೂ ಮೌನವಾದದ್ದು ಸಭೆಯ ವಿಶೇಷತೆಯಾಗಿತ್ತು. ಬಳಿಕ ಕೆಲಗಿನ ತೀರ್ಮಾನವನ್ನು ಕೈಗೊಳ್ಳಲಾಯಿತು.

ಉದ್ಯಾವರ ಸ್ಮಶಾನಕ್ಕೆ ಮಂಜೇಶ್ವರ ಗ್ರಾ. ಪಂ.ನ ವತಿಯಿಂದ ಆವರಣಗೋಡೆಯನ್ನು ನಿರ್ಮಿಸಿಕೊಟ್ಟು ಆಧುನಿಕ ರೀತಿಯ ಸುಸಜ್ಜಿತವಾದ ಸ್ಮಶಾನವನ್ನಾಗಿ ಮಾಡುವಂತೆ ಹಾಗೂ ಉದ್ಯಾವರ ರಸ್ತೆಯನ್ನು ಮರು ಡಾಮಾರೀಕರಣಗೊಳಿಸಲು ಮಲಬಾರ್ ದೇವಸ್ವಂ ಬೋರ್ಡ್ ಗೆ ಒಂದು ಪತ್ರವನ್ನು ನೀಡಿ ಗ್ರಾ.ಪಂ. ವತಿಯಿಂದಲೇ ಕಾಮಗಾರಿಯನ್ನು ನಡೆಸಲು ಒಮ್ಮತದ ತೀರ್ಮಾನವನ್ನು ಕೈ ಗೊಳ್ಳಲಾಯಿತು. ಇದಕ್ಕೆ ಸೇರಿದ ಸರ್ವ ಪಕ್ಷದ ಜನಪ್ರತಿನಿಧಿಗಳಿಂದ ಹಾಗೂ ಜಮಾಹತ್ ಹಾಗೂ ಕ್ಷೇತ್ರದ ಪದಾಧಿಕಾರಿಗಳಿಂದ ಸರ್ವಾನುಮತದ ಅನುಮತಿಯೂ ದೊರಕಿತು. ಇನ್ನು ಈ ವಿಷಯದಲ್ಲಿ ಯಾವುದೇ ತರ್ಕವಿಲ್ಲ. ಈ ತೀರ್ಮಾನದ ವಿರುದ್ದ ಯಾರಾದರೂ ಧ್ವನಿ ಎತ್ತಿದರೆ ಪೊಲೀಸರು ಕಾನೂನು ಕ್ರಮವನ್ನು ಕೈ ಗೊಳ್ಳವಂತೆಯೂ ಸಭೆಯಲ್ಲಿ ತೀರ್ಮಾನ ಕೈ ಗೊಳ್ಳಲಾಯಿತು.

ಮಂಜೇಶ್ವರ ಸರ್ಕಲ್ ಇನ್ಸ್ ಪೆಕ್ಟರ್ ದಿನೆಶ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ಉದ್ಘಾಟಿಸಿದರು.

ಮಂಜೇಶ್ವರ ಎಸ್ಸೈ ಅನೂಪ್, ಉದ್ಯಾವರ ಸಾವಿರ ಜಮಾಹತ್ ಅಧ್ಯಕ್ಷ ಸೂಫಿ ಹಾಜಿ, ಉದ್ಯಾವರ ಶ್ರೀ ಅರಸು ಕ್ಷೇತ್ರ ಅಧ್ಯಕ್ಷ ದಯಾಕರ ಮಾಡ, ಕೆ ಆರ್ ಜಯಾನಂದ, ಬಿ ವಿ ರಾಜನ್, ಮುಸ್ತಫ ಉದ್ಯಾವರ, ಹರೀಶ್ಚಂದ್ರ ಮಂಜೇಶ್ವರ, ಶಶಿಕಲ, ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಹಾಗೂ ಸಂಘಟನೆಗಳ ನೇತಾರರು ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *