Header Ads
Header Ads
Breaking News

ಎಡರಂಗ ಸರಕಾರದಲ್ಲಿ ಬ್ರಷ್ಟಾಚಾರಿ ಶಾಸಕರಿಲ್ಲ: ಬಾಲಕೃಷ್ಣ ಪಿಳ್ಳೆ

ಮಂಜೇಶ್ವರ: ಎಡರಂಗ ಸರಕಾರದ ಆಡಳಿತದಲ್ಲಿ ಬ್ರಷ್ಟಾಚಾರಿ ಶಾಸಕರಿಲ್ಲದೇ ಇರುವುದು ಸಂತೃಫ್ತಿಯನ್ನು ತಂದಿರುವುದಾಗಿ ಕೇರಳ ಬಿ ಕಾಂಗ್ರೆಸ್ ಮುಖ್ಯಸ್ಥ ಆರ್ ಬಾಲಕೃಷ್ಣ ಪಿಳ್ಳೆ ಹೇಳಿದರು.ಎಡರಂಗ ಸರಕಾರದಲ್ಲಿರುವ ಸಚಿವರೆಲ್ಲರೂ ಬ್ರಷ್ಟಾಚಾರ ರಹಿತ ಸಚಿವರಾಗಿರುವುದರಿಂದ ನಮಗೆ ಸಂತೋಷವಿರುವುದಾಗಿ ಅವರು ಹೇಳಿದರು. ಕಾಸರಗೋಡು ಅತಿಥಿ ಗೃಹದಲ್ಲಿ ಅವರು ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರು  ಮಾತನಾಡುತಿದ್ದರು. ಬ್ರಷ್ಟಾಚಾರ ರಹಿತ ಆಡಳಿತವನ್ನು ನಾವು ಬಯಸುತಿದ್ದೇವೆ, ಅದಕ್ಕನುಸಾರವಾಗಿ ಎಡರಂಗ ಸರಕಾರಕ್ಕೆ ಆಡಳಿತವನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತಿದೆ. ಎಂದು ಹೇಳಿದರು.ಕಾಸರಗೋಡು ಅತಿಥಿ ಗೃಹದಲ್ಲಿ ಏರ್ಪಡಿಸಲಾದ ಕೇರಳ ಕಾಂಗ್ರೆಸ್ ಬಿ ನೇತೃತ್ವದ ಸಮಾವೇಷಕ್ಕೆ ಚಾಲನೆ ನೀಡಿ ಅವರು ಈ ಮಾತುಗಳನ್ನು ಉಚ್ಚರಿಸಿದರು. ಮೋದಿ ಸರಕಾರ ಜ್ಯಾರಿಗೆ ತಂದ ಜಿ ಎಸ್ ಟಿ ಯಲ್ಲಿ ಜನರಿಗೆ ಉಪಕಾರವಿಲ್ಲದ ಸಾಮಾಗ್ರಿಗಳನ್ನು ಕಡಿತಗೊಳಿಸಿ ಯಾವುದೇ ಪ್ರಯೋಜನವಿಲ್ಲ. ಧೈನಂದಿನವಾಗಿ ಸಾಮಾನ್ಯ ಜನರು ಖರೀದಿಸುತ್ತಿರುವ ಸಾಮಾಗ್ರಿಗಳ ಬೆಲೆಯಲ್ಲಿ ಕಡಿತ ಉಂಟಾಗಬೇಕಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭ ಪಕ್ಷದ ನೇತಾರರ ಸಹಿತ ಹಲವಾರು ಮಂದಿ ಉಪಸ್ಥರಿದ್ದರು.

Related posts

Leave a Reply