Header Ads
Header Ads
Breaking News

ಎಸ್.ಸಿ.ಎಸ್ ಪ್ರಿಸ್ಕೂಲ್ ಕಿಂಡರ್‌ರ್ಗಾಡನ್ ಶಾಲೆಯ ವಾರ್ಷಿಕೋತ್ಸವ

ಅಲ್ಲಿ ಮುಗ್ಧ ಮನಸ್ಸಿನ ಮುದ್ದು ಮುದ್ದು ಮಕ್ಕಳ, ಹಾಡು,ಕುಣಿತ ನೆರೆದಿದ್ದವರ ಮನೋರಂಜಿಸುತ್ತಿದ್ದರು. ಪೋಷಕರಂತು ತಮ್ಮ ಮಕ್ಕಳ ಹಾಡು ಕುಣಿತ ನೋಡಿ ಮಂತ್ರಮುಗ್ದರಾಗಿದ್ದರು, ಮಕ್ಕಳ. ತೊದಲು ನುಡಿ ಕಿವಿಗೆ ಇಂಪು ನೀಡುತ್ತಿದ್ದವು, ಕುಣಿತ ಕಣ್ಣಿಗೆ ಹಬ್ಬ ನೀಡುತ್ತಿದ್ದವು ಒಟ್ಟಿನಲ್ಲಿ ಸ್ವರ್ಗಕಿಂತಲು ಮಿಗಿಲಾದ ಅದ್ಬುತ ಕ್ಷಣ ಅಲ್ಲಿ ಸ್ರಷ್ಟಿಯಾಗಿತ್ತು ಅಯ್ಯೊ ಇದೆಲ್ಲಾ ಎಲ್ಲಿ ಅಂತ ಯೊಚಿಸ್ತಾ ಇದ್ದಿರಾ ಹಾಗಾದ್ರೆ ಈ ಸ್ಟೋರಿ ನೋಡಿ.

ಮಂಗಳೂರಿನ ಬಿಕರ್ನಕಟ್ಟೆಯ ಎಸ್.ಸಿ.ಎಸ್ ಪ್ರಿಸ್ಕೂಲ್ ಕಿಂಡರ್‌ರ್ಗಾಡನ್ ಶಾಲೆಯ ವಾರ್ಷಿಕೋತ್ಸವದಲ್ಲಿ ಕಂಡು ಬಂದ ದೃಶ್ಯವಿದು. ತೊದಲು ನುಡಿಯ ಪುಟಾಣಿ ತಾವು ಸಂತಸಪಟ್ಟಿದ್ದಲ್ಲದೆ ತಮ್ಮ ನೆರೆದಿದ್ದವರನ್ನು ಮನರಂಜಿಸುವಂತೆ ಮಾಡಿದ್ದರು. ಕಾರ್ಯಕ್ರಮವನ್ನು ಡಾ.ಮುರಳಿ ಕೇಶವ್ ದೀಪ ಬೇಳಗಿಸುವ ಮೂಲಕ ಉದ್ಗಾಟಿಸಿದರು.ಬಳಿಕ ಮಾತನಾಡಿದ ಅವರು ಮಕ್ಕಳ ಬಾಲ್ಯ ಶಿಕ್ಷಣದ ಹಾಗೂ ಬೆಳವಣಿಗೆಯ ಕುರಿತು ತಿಳಿಸಿದರು.

ಬಳಿಕ ವಿವಿಧ ಚಟುವಟಿಕೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.ನಂತರ ಮಕ್ಕಳ ಹಾಡು, ಕುಣಿತ, ಸ್ಕಿಟ್ ಪ್ರೇಕ್ಷಕರ ಹಾಗೂ ಪೋಷಕರ ಮೆಚ್ಚುಗೆಗೆ ಸಾಕ್ಷಿಯಾಯಿತು.ಕಾರ್ಯಕ್ರಮದಲ್ಲಿ ರಜನೀಶ್ ಸೊರಕೆ, ಯು.ಕೆ ಖಾಲೀದ್,ಶಾಲೆಯ ಶಿಕ್ಷಕರು, ಪೋಷಕರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *