Header Ads
Breaking News

ಐಪಿಎಸ್ ಅಧಿಕಾರಿ ಡಾ.ಮಧುಕರ್ ಶೆಟ್ಟಿಯವರ ಸಾವಿನಲ್ಲಿವೆ ಸಂದೇಹಾಸ್ಪದ ವಿಚಾರಗಳು: ಸಿಬಿಐ ತನಿಖೆಗೆ ಒತ್ತಾಯ

ಭಾರತ ಕಂಡ ದಕ್ಷ ಐಪಿಎಸ್ ಅಧಿಕಾರಿ, ಕರಾವಳಿಯ ಹೆಮ್ಮೆಯ ಪುತ್ರ ಡಾ.ಮಧುಕರ್ ಶೆಟ್ಟಿ ಅವರ ಅಕಾಲಿಕ ಮೃತ್ಯುವಿನ ವಿಚಾರ ವ್ಯಾಪಕ ಚರ್ಚೆಯಾಗ್ತಾ ಇದೆ. ಅವರಿಗೆ ನೀಡಿದ ಚಿಕಿತ್ಸೆಯ ಬಗ್ಗೆ ಅನುಮಾನಗಳು ದಟ್ಟವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅವರ ಅಕಾಲಿಕ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಪಿ. ಚೆಂಗಪ್ಪ ಅವರು ಕೂಡ ಮಧುಕರ್ ಶೆಟ್ಟಿಯವರ ಅಕಾಲಿಕ ಮೃತ್ಯುವಿನ ಬಗ್ಗೆ ಸಿಬಿಐನಿಂದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *