Header Ads
Header Ads
Breaking News

ಒರ್ವ ಕ್ರೀಡಾಪಟು ಸತತ ಸೋಲಿನಿಂದ ಚಾಂಪಿಯಾನ್ ಆಗಲು ಸಾಧ್ಯ : ವೈ. ಸುಕುಮಾರ್ ಹೇಳಿಕೆ

ಯಾವುದೇ ಒರ್ವ ಕ್ರೀಡಾಪಟು ಏಕಾಏಕಿ ಚಾಂಪಿಯಾನ್ ಆಗಲು ಸಾಧ್ಯವಿಲ್ಲ, ಸತತ ಸೋಲಿನಿಂದ ಕಲಿಯುವ ಪಾಠ ಆತನನ್ನು ಉತ್ತಮ ಕ್ರೀಡಾ ಪಟುವನ್ನಾಗಿಸಲು ಸಾಧ್ಯ ಎಂಬುದಾಗಿ ಪಡುಬಿದ್ರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ. ಸುಕುಮಾರ್ ಹೇಳಿದ್ದಾರೆ.(ಬೈಟ್ ಸುಕುಮಾರ್)

ಅವರು ಪಡುಬಿದ್ರಿ ಮಮ್ಮಡನ್ ಬ್ಯಾಡ್ಮಿಂಟನ್ ಕ್ಲಬ್ ಆಯೋಜಿಸಿದ ಬ್ಯಾಡ್ಮಿಂಟನ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾಪು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವೀನ್‍ಚಂದ್ರ ಜೆ. ಶೆಟ್ಟಿ ಮಾತನಾಡಿ, ಬ್ಯಾಡ್ಮಿಂಟನ್ ಆಟದಿಂದ ದೇಹಕ್ಕೆ ಉತ್ತಮ ವ್ಯಾಯಾಮ ದೊರಕುತ್ತಿದ್ದು, ಈ ಆಟವನ್ನು ಮುಂಜಾನೆ ಬೇಗನೆ ಎದ್ದು ಆಡಿದರೆ ದೇಹದ ಜಡತ್ವ ಮಾಯವಾಗಿ ಆ ವ್ಯಕ್ತಿ ದಿನದ ಎಲ್ಲಾ ಸಮಯದಲ್ಲೂ ಲವಲವಿಕೆಯಿಂದ ಇರಲು ಸಾಧ್ಯ, ಇದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿದೆ ಎಂದರು( ಬೈಟ್ ನವೀನ್‍ಚಂದ್ರ ಶೆಟ್ಟಿ).
ಇದೇ ಸಂದರ್ಭ ಕ್ರೀಡಾಕೂಟ ನಡೆಸಲು ಸ್ಥಳಾವಕಾಶ ಕಲ್ಪಿಸಿದ ಸ್ಥಳೀಯ ವ್ಯಕ್ತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಕ್ರೀಡಾಕೂಟವನ್ನು ಟೇಪ್ ಕತ್ತರಿಸುವ ಮೂಲಕ ಹಿರಿಯರಾದ ಶಬ್ಬೀರ್ ಹುಸೇನ್ ನೆರವೇರಿದರು, ಮುಖ್ಯ ಅಥಿತಿಗಳಾಗಿ ಜಿ.ಪಂ.ಸದಸ್ಯ ಶಶಿಕಾಂತ್ ಪಡುಬಿದ್ರಿ, ವೈ. ಸುಧೀರ್ ಕುಮಾರ್, ರಮೀಜ್ ಹುಸೇನ್, ಶಂಕರ ಬಂಗೇರ, ಸಂಜೀವಿ ಪೂಜಾರ್ತಿ, ಹಕೀಂ, ಕೌಸರ್, ಮೊಯ್ಯದ್ಧಿ ಮುಂತಾದವರಿದ್ದರು.

Related posts

Leave a Reply

Your email address will not be published. Required fields are marked *