Header Ads
Header Ads
Breaking News

ಕಂಚಿನಡ್ಕ ಆಪತ್ಬಾಂಧವ ಫೆಂಡ್ಸ್ ವತಿಯಿಂದ ನಡೆದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯ.

ಕಂಚಿನಡ್ಕ ಆಪತ್ಬಾಂಧವ ಫೆಂಡ್ಸ್ ವತಿಯಿಂದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯ ಆಪತ್ಬಾಂಧವ ಟ್ರೋಫಿ-2018 ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ನಡೆಯಿತು.

ರಕ್ತದಾನ ಶಿಬಿರ ನಡೆಸುವ ಮೂಲಕ ಪಂದ್ಯಾವಳಿಯನ್ನು ಉದ್ಘಾಟಿಸಿ, ಸಮಾರೋಪ ಸಮಾರಂಭದಲ್ಲಿ ತುಮಕೂರು ಶ್ರೀ ವಿಷ್ಣು ವಿಶೇಷ ಚೇತನ ಕಲಾ ತಂಡದಿಂದ ಗಾನ ಮೇಳ ನಡೆಸುವ ಮೂಲಕ ಆಪತ್ಬಾಂಧವ ಮೊಹಮ್ಮದ್ ಆಸಿಫ್ ಸರ್ವರಿಂದ ಪ್ರಶಂಸೆಗೆ ಒಳಗಾದರು.ಈ ಸಂದರ್ಭ ಶ್ರೀ ವಿಷ್ಣು ಕಲಾ ತಂಡಕ್ಕೆ ಆಪತ್ಬಾಂಧವ ಫ್ರೆಂಡ್ಸ್ ವತಿಯಿಂದ ರೂ.10 ಸಾವಿರ ಸಹಾಯಧನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು, ಯಾವುದೇ ಕೆಲಸ ಮಾಡಿದಾಗ ಟೀಕೆ-ಟಿಪ್ಪಣಿ ಸಾಮಾನ್ಯ, ಯಾವುದಕ್ಕೂ ಜಗ್ಗದೆ ಮುಂದುವರಿದಾಗ ನಮ್ಮ ಗುರಿ ನಾವು ತಲುಪುವ ಮೂಲಕ ಟೀಕಕಾರರಿಗೆ ತಕ್ಕ ಉತ್ತರ ನೀಡಿದಂತ್ತಾಗುತ್ತದೆ ಎಂದರು.

ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ನವೀನ್‌ಚಂದ್ರ ಜೆ. ಶೆಟ್ಟಿ, ಸೋಲೇ ಗೆಲುವಿನ ಮೆಟ್ಟಿಲು. ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ, ನಮ್ಮ ಪ್ರಯತ್ನ ಮುಂದುವರಿಸಿದ್ದಲ್ಲಿ ಮುಂದೆ ನಮಗೆ ಗೆಲುವು ಕಟ್ಟಿಟ್ಟ ಬುತ್ತಿ. ಜೀವನಕ್ಕೂ ಕ್ರೀಡೆಗೂ ಅವಿನಾಬಾವ ಸಂಬಂಧವಿದೆ, ಎರಡರಲ್ಲೂ ಪ್ರಯತ್ನ ಅಗತ್ಯವೆಂದರು.

ಇದೇ ವೇಳೆ ಅತ್ಯಾಧುನಿಕ ಆಪತ್ಬಾಂಧವ ಕಲ್ಪತರು ಅಂಬುಲೆನ್ಸ್‌ನ್ನು ಮುಂಬೈ ಉದ್ಯಮಿ ಕರ್ನಿರೆ ಉದ್ಘಾಟಿಸಿ ಶುಭ ಹಾರೈಸಿದರು.
ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾದಲ್ಲಿ ಬಲಿಷ್ಠ ಮಲ್ಪೆ ರಿಯಲ್ ಫೈಟರ್‍ಸ್ ತಂಡ ಮುಲ್ಕಿ ಸ್ಪಾನ್ ಮರೈನ್ ತಂಡವನ್ನು ಸೋಲಿಸುವ ಮೂಲಕ ಆಪತ್ಬಾಂಧವ ಟ್ರೋಫಿ-2018ಸಹಿತ ನಗದು ರೂ.೫೦ ಸಾವಿರ ಪಡೆಯಿತು, ಪರಾಜಯ ಕಂಡ ಸ್ಪಾನ್ ಮರೈನ್ ತಂಡವು ದ್ವಿತೀಯ ಟ್ರೋಫಿ ಸಹಿತ ನಗದು ರೂ.30 ಸಾವಿರ ಪಡೆಯಿತು.

Related posts

Leave a Reply