Header Ads
Breaking News

ಕಂಬಳದ ಕೋಣಗಳಿಗೆ ಮಧುಮಗನ ಶೃಂಗಾರ

ಅವಿಭಜಿತ ಮೂರು ಜಿಲ್ಲೆಗಳ ಜಾನಪದ ಕ್ರೀಡೆಯಾಗಿರುವ ಕಂಬಳವನ್ನು ನೋಡಲು ಹಿಂದಿನಿಂದಲೂ ಜನರು ಕಿಕ್ಕಿರಿದು ಸೇರುತ್ತಿದ್ದರು. ಕಂಬಳದಲ್ಲಿ ಬರೀ ಕೋಣಗಳನ್ನು ಓಡಿಸುವುದನ್ನು ನೋಡಲು ಮಾತ್ರ ಜನರು ಸೇರುವುದಲ್ಲ ಬದಲಾಗಿ ಬಣ್ಣ ಬಣ್ಣದ ಆಲಂಕಾರಿಕ ವಸ್ತುಗಳನ್ನು ತಮ್ಮ ತಲೆ, ನೆತ್ತಿ, ಮುಖ ಮೇಲೆ ಹಾಕಿಕೊಂಡು ಮದುಮಗನಂತೆ ಸಿಂಗರಿಸಿಕೊಂಡು ಕಂಬಳದ ಕರೆಯಲ್ಲಿ ಓಡುವ ಕೋಣಗಳನ್ನು ನೋಡಲೆಂದೇ ಬರುವ ಕಂಬಳಾಭಿಮಾನಿಗಳ ಸಂಖ್ಯೆಯೂ ಹೆಚ್ಚಿದೆ.

ಕಂಬಳದ ಕೋಣಗಳಿಗೆ ಮದುಮಗನ ರೀತಿಯಲ್ಲಿ ಶೃಂಗಾರಗೊಳ್ಳಲು ಅದಕ್ಕೆ ಬೇಕಾದ ನೆತ್ತಿ ಹಗ್ಗ, ಓಡಿಸುವ ಹಗ್ಗ, ಪನಕೆ, ಬೆತ್ತ ಮುಂತಾದುವುಗಳನ್ನು ಬಣ್ಣ ಬಣ್ಣದ ದಪ್ಪದ ತಂಗೀಸು ನೂಲು ಸಹಿತ ಪ್ಲಾಸಿಕ್ ಹಗ್ಗಗಳಿಂದ ತಯಾರು ಮಾಡಿ ಕೋಣಗಳು ಸುಂದರವಾಗಿ ಕಾಣುವಂತೆ ರೂಪು ಕೊಡುವವರು ಮೂಡುಬಿದಿರೆ ತಾಲೂಕಿನ ಕಡಂದಲೆ ಸಮೀಪದ ಗಣೇಶ್ ಬಲ್ಲಾಡಿ ಅವರು. ಹಿಂದೆ ನಡೆಯುತ್ತಿದ್ದ ಕಂಬಳಗಳನ್ನು ನೋಡಿದರೆ ಕಂಬಳದ ಕೋಣಗಳಿಗೆ ಅಷ್ಟೇನೂ ಅಲಂಕಾರಿಕ ವಸ್ತುಗಳನ್ನು ತೊಡಿಸುತ್ತಿರಲಿಲ್ಲ. ಚೌರಿಯಿಂದ ಮಾಡಿದ ಬೆತ್ತ, ಮಾಮೂಲಿ ಹಗ್ಗ, ನೇಗಿಲಿನಲ್ಲಿ ಕಟ್ಟಿ ಕೋಣಗಳನ್ನು ಓಡಿಸುತ್ತಿದ್ದರು. ಆದರೆ ಇದೀಗ ಕಂಬಳ ಹೇಗೆ ರಾಷ್ಟ್ರ-ಅಂತರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆಯೋ ಹಾಗೇ ಕಂಬಳದ ಕೋಣಗಳು ಕೂಡಾ ತಮ್ಮ ವೇಗದ ಓಟ ಮತ್ತು ಆಲಂಕಾರಿಕ ವಸ್ತುಗಳೊಂದಿಗೆ ಗಮನ ಸೆಳೆಯುತ್ತಿವೆ.

Related posts

Leave a Reply

Your email address will not be published. Required fields are marked *