Header Ads
Header Ads
Breaking News

ಕಣಚೂರು ಸಂಸ್ಥೆಯಲ್ಲಿ ಲ್ಯಾಂಪ್ ಲೈಟಿಂಗ್, ಓತ್ ಟೇಕಿಂಗ್ ಸೆರೆಮನಿ ಕಾರ್ಯಕ್ರಮ

ದೇರಳಕಟ್ಟೆಯ ನಾಟೆಕಲ್ ಕಣಚೂರು ನರ್ಸಿಂಗ್ ವಿಜ್ಞಾನ ಸಂಸ್ಥೆಗಳ ಆಶ್ರಯದಲ್ಲಿ ಬಿ.ಎಸ್ಸಿ ನರ್ಸಿಂಗ್ ನ ಮೂರನೇ ಬ್ಯಾಚ್ ಆಯೋಜಿಸಿದ್ದ ಲ್ಯಾಂಪ್ ಲೈಟಿಂಗ್ ಆಂಡ್ ಓಥ್ ಟೇಕಿಂಗ್ ಸೆರೆಮನಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು. ಕಣಚೂರು ಮೋನು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಣಚೂರು ನರ್ಸಿಂಗ್ ಕಾಲೇಜಿನಲ್ಲಿ ಓತ್ ಟೇಕಿಂಗ್ ಮತ್ತು ಲ್ಯಾಂಪ್ ಲೈಟಿಂಗ್ .

ಉದಾದಿಯರು ಎಂದರೆ ಶ್ರೇಷ್ಟ ಜೀವದಾನಿಗಳು, ಸಂಸಾರದೊಂದಿಗೆ ಹೆಚ್ಚುಕಾಲ ಇರಲಾರದೆ ಸಮಾಜದಲ್ಲಿ ಬಾಳುತ್ತಾ ತ್ಯಾಗಮಯಿಗಳಾಗಿದ್ದಾರೆ ಎಂದು ನಾಟೆಕಲ್ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು. ಕಣಚೂರು ಮೋನು ಅಭಿಪ್ರಾಯ ಪಟ್ಟರುವಿದ್ಯಾರ್ಥಿಗಳಿಗೆ ಲ್ಯಾಂಪ್ ಲೈಟಿಂಗ್ ನಡೆಸಿಕೊಟ್ಟ ಕುಲಶೇಖರ ಯುನಿಟಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಚಿತ್ರಾ.ಜಿ ಮಾತನಾಡಿ, ಇನ್ನೊಬ್ಬರನ್ನು ಬೆಳೆಸುವ ಸಾಮರ್ಥ್ಯ ಇರುವವರು ನಾಯಕರಾಗುತ್ತಾರೆ. ವಿದ್ಯಾರ್ಥಿಗಳು ಗುರುಗಳಿಗೆ ಗೌರವ ನೀಡುತ್ತಾ ಮುಂದುವರಿಯಬೇಕಿದೆ. ರೋಗಿಗಳಲ್ಲಿ ಆತ್ಮವಿಶ್ವಾಸ, ದಯೆಯ ವರ್ತನೆ ಹಾಗೂ ವಿಶ್ವಾಸವನ್ನು ತುಂಬಿಸುವ ಮೂಲಕ ಗುಣಮುಖರಾಗಿಸುವಲ್ಲಿ ದಾದಿಯರ ಪಾತ್ರ ಪ್ರಮುಖವಾಗಿರುತ್ತದೆ ಎಂಂದರು. ಕಣಚೂರು ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಪ್ರೊ.ರೆನಿಲ್ಡಾ ಶಾಂತಿ ಲೋಬೊ, ನರ್ಸ್ ಮೆನೇಜರ್ ಸಿಮಾನ್ ವರ್ಗೀಸ್, ಡೇವಿಡ್ ರಾಕೇಶ್ ಡಿಸೋಜ, ಆಲಿಯಾ ರೆಹ್ಮಾನ್, ಅಸಿಸ್ಟೆಂಟ್ ಪ್ರೊ. ಮಾಲತಿ ಉಪಸ್ಥಿತರಿದ್ದರು.

Related posts

Leave a Reply