Header Ads
Header Ads
Header Ads
Breaking News

ಕಥಾಬಿಂದು ಪ್ರಕಾಶನದ ಕನ್ನಡದ ಕಂಪು ಸರಣಿ-3 : ಜ.12ರಂದು ನೇಪಾಳದಲ್ಲಿ ನಡೆಯಲಿರುವ ಕಾರ್ಯಕ್ರಮ

ಕಥಾಬಿಂದು ಪ್ರಕಾಶನ ಸಂಸ್ಥೆಯು ಕನ್ನಡದ ಕಂಪು ಸರಣಿ ಕಾರ್ಯಕ್ರಮವು ಜನವರಿ 12ರಂದು ನೇಪಾಳದ ಕುಟಿ ರೆಸಾರ್ಟ್ ಮತ್ತು ಸ್ಪಾ ಲೇಕ್ ಸೈಡ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಥಾಬಿಂದು ಪ್ರಕಾಶನ ಸಂಸ್ಥೆಯು ಕನ್ನಡದ ಕಂಪಿ ಸರಣಿ-1 ಕಾರ್ಯಕ್ರಮ ಮಲೇಷಿಯಾದ ಮಾರಿಯಮ್ಮ ದೇವಸ್ಥಾನದಲ್ಲಿ ಯಶಸ್ವಿಯಾಗಿ ನಡೆಸಿ ನಂತರ ದುಬೈಯಲ್ಲಿ ಸರಣಿ -2 ಕಾರ್ಯಕ್ರಮವನ್ನು ನಡೆಸಿ ಇದೀಗ ಜನವರಿ 12ರಂದ ಸಂಜೆ 54 ಗಂಟೆಗೆ ನೇಪಾಳದ ಪೋಕ್ರಾ ಕುಟಿ ರೆಸಾರ್ಟ್ ಮತ್ತು ಸ್ಪಾ ಲೇಕ್‌ಸೈಡ್ ನಡೆಯಲಿದ್ದು, ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ವಿರೇಶ್ ಪಾಟೀಲ್ ಕದಳ್ಳಿ ಅವರು ಆಗಮಿಸಲಿದ್ದಾರೆ. ಅಂದು ಕನ್ನಡ ಕೃತಿಗಳ ಬಿಡುಗಡೆ, ಅಂತರರಾಷ್ಟ್ರೀಯ ಕವಿಗೋಷ್ಟಿ ಲಕ್ಷ್ಮೀ, ರೇಮಂಡ್ ಡಿಕುನ್ನ, ಜಯಾನಂದ್ ಎಸ್, ಪ್ರದೀಪ್ ಕುಮಾರ್ ಇವರಿಂದ ಕವಿಗೋಷ್ಟಿ ನಡೆಯಲಿದೆ. ಕನ್ನಡ ಚಲನಚಿತ್ರಗೀತೆಗಳ ರಸಮಂಜರಿ, ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಡಾ. ಸುರೇಶ್ ನೆಗರಗುಳಿ, ಜಯಾನಂದ್ ಎಸ್. ಪೆರಾಜೆ, ರೇಮಂಡ್ ಡಿಕುನ್ನ, ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *