Header Ads
Breaking News

ಕರಾವಳಿಯಲ್ಲಿ ಎರಡು ದಿನ ಮಳೆ ಸಾಧ್ಯತೆ : ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಕರಾವಳಿಯಲ್ಲಿ ಅಕಾಲಿಕೆ ಮಳೆ ಸುರಿದಿದೆ. ಮಂಗಳೂರು, ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಕಡಬ ತಾಲೂಕಿನಲ್ಲಿ ಇಂದು ನಸುಕಿನ ವೇಳೆ ಅಕಾಲಿಕ ಮಳೆಯಾಗಿದೆ. ಕರಾವಳಿ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಮಳೆ ಬೀಳುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮಳೆಯ ಮುನ್ಸೂಚನೆಯನ್ನು ನೀಡಿದೆ.

ಇಂದು ಬೆಳಗಿನ ಜಾವ 3.30ರಿಂದ 4 ಗಂಟೆವರೆಗೆ ಮಳೆಯ ತುಂತುರು ಹನಿಗಳು ಬಿದ್ದಿದ್ದೆ. ಕೆಲವು ಕಡೆಗಳಲ್ಲಿ ಬೆಳಗ್ಗಿನ ಜಾವ ಎಂಟು ಗಂಟೆಯವರೆಗೂ ಅದು ಮುಂದುವರಿದಿದೆ. ಸದ್ಯ ಈ ಭಾಗದಲ್ಲಿ ಸಂಪೂರ್ಣ ಮೋಡ ಕವಿದ ವಾತಾವರಣವಿದೆ. ಕಳೆದ ಜನವರಿ ತಿಂಗಳಿನಲ್ಲಿಯೂ ವಾರಗಳ ಕಾಲ ಮಳೆ ಸುರಿದಿತ್ತು. ಇದೀಗ ತಿಂಗಳ ಬಳಿಕ ಮತ್ತೆ ಅಕಾಲಿಕ ಮಳೆಯಾಗಿದೆ. ಈ ರೀತಿ ಮಳೆ ಸುರಿಯುತ್ತಿರುವುದು ಅಡಿಕೆ ಬೆಳೆಗಾರರ ಸಹಿತ ಕೃಷಿಕರಿಗೆ ಶಾಪವಾಗಿ ಪರಿಣಮಿಸಿದೆ.ಮಳೆಯಿಂದ ಭತ್ತ, ಅಡಿಕೆ ಹಾಗೂ ಗೇರು ಬೀಜದ ಬೆಳೆಗಳಿಗೆ ಹಾನಿಯಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನಲೆಯಲ್ಲಿ ಮಳೆ ಸುರಿದಿದ್ದೂ , ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

Related posts

Leave a Reply

Your email address will not be published. Required fields are marked *