Breaking News

ಕಳ್ಳನ ಬಂಧನ

ಮೂಡುಬಿದಿರೆ:ಬೆಳುವಾಯಿಯಲ್ಲಿ ಮನೆಗೆ ನುಗ್ಗಿ ಪಾತ್ರೆ, ಪಗಡೆ, ಗ್ಯಾಸ್ ಇನ್ನಿತರ ಮನೆ ಸಾಮಾಗ್ರಿಗಳನ್ನು ಕಳವು ಮಾಡಿದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಶುಕ್ರವಾರ ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿ ಬೆಳುವಾಯಿ ಮುಡಾಯಿಕಾಡು ನಿವಾಸಿ ಸಂತೋಷ್ ಶೆಟ್ಟಿ(೨೮)ಎಂದು ತಿಳಿದುಬಂದಿದೆ. ಜೂನ್ ೪ ರಂದು ಮುಡಾಯಿಕಾಡು ನಿವಾಸಿ ರವಿಚಂದ್ರ ಎಂಬವರು ಕಾರ್ಕಳದ ತನ್ನ ಸಂಬಂಧಿಕರ ಮನೆಗೆ ಕಾರ‍್ಯಕ್ರಮಕ್ಕೆ ಹೋದ ಸಂದರ್ಭ ಅವರ ಮನೆಗೆ ಆರೋಪಿ ಸಂತೋಷ್ ಶೆಟ್ಟಿ ನುಗ್ಗಿ ಮನೆಯಲ್ಲಿದ್ದ ಪಾತ್ರೆ, ಗ್ಯಾಸ್ ಸಿಲಿಂಡರ್, ಮನೆ ಎದುರಿನ ಕಬ್ಬಿಣದ ಗೇಟು ಕಳವು ಮಾಡಿ ಮಾರಾಟ ಮಾಡಲು ಮುಡಾಯಿಕಾಡು ಎಂಬಲ್ಲಿ ದಾಸ್ತಾನಿರಿಸಿದ್ದ. ಈ ಬಗ್ಗೆ ಮಾಹಿತಿ ಪಡೆದು ಸ್ಥಳಿಯರು ಮುಡಾಯಿ ಕಾಡಿಗೆ ತೆರಳಿದಾಗ ಆರೋಪಿ ಸ್ವತ್ತುಗಳನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದ. ಈ ಬಗ್ಗೆ ರವಿಚಂದ್ರ ನೀಡಿದ ದೂರಿನಂತೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ಶುಕ್ರವಾರ ಆರೋಪಿಯನ್ನು ಬಂಧಿಸಿ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ೧೫ ದಿನಗಳ ನ್ಯಾಯಾಂಘ ಬಂಧನ ವಿಧಿಸಲಾಗಿದೆ.
ಆರೋಪಿ ಸಂತೋಷ್ ಶೆಟ್ಟಿ ೨೦೧೫ರಲ್ಲಿ ಮಂಗಳೂರಿನಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು ಹುಡುಗಿ ವಿಚಾರವೊಂದಕ್ಕೆ ಸಂಬಂಧಿಸಿ ತಾನು ಕೆಲಸ ಮಾಡುತ್ತಿದ್ದ ಬಸ್ಸಿನ ಕಂಡಕ್ಟರನ್ನು ಕೊಲೆ ಮಾಡಿದ ಆರೋಪಕ್ಕೊಳಗಾಗಿ ಜೈಲು ಸೇರಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಎನ್ನಲಾಗಿದೆ.

Related posts

Leave a Reply