Header Ads
Breaking News

ಕಾರು ಚಾಲಕನ ಅವಾಂತರ.. ಇಬ್ಬರು ಆಸ್ಪತ್ರೆಗೆ..! ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತೆ?

ಪಡುಬಿದ್ರಿ: ಕಾರು ಚಾಲಕನೊರ್ವನ ಅಜಾಗರೂಕತೆ ಹಾಗೂ ಅತೀ ವೇಗದ ಚಾಲನೆಯಿಂದಾಗಿ ತಡರಾತ್ರಿ ಪಾದಚಾರಿಗಳಿಬ್ಬರಿಗೆ ಡಿಕ್ಕಿಯಾದ ಪರಿಣಾಮ ಇಬ್ಬರೂ ಆಸ್ಪತ್ರೆ ಸೇರಿದ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ.

ಗಾಯಗೊಂಡವರು ಹೆಜಮಾಡಿ ಅಯ್ಯಪ್ಪ ನಗರ ನಿವಾಸಿ ಹರೀಶ್ ಹಾಗೂ ಕನ್ನಾಂಗಾರು ನಿವಾಸಿ ಮನ್ಸೂರ್. ಮನ್ಸೂರ್ ಅವರು ರಾಷ್ಟ್ರೀಯ ಹೆದ್ದಾರಿ ೬೬ರ ಶಿವನಗರ ಬಳಿ ತನ್ನ ಸ್ಕೂಟರ್ ನಿಲ್ಲಿಸಿ ಅದರ ಪಕ್ಕದಲ್ಲಿ ನಿಂತಿದ್ದ ವೇಳೆ ಕಾರೊಂದು ಮುನ್ನುಗ್ಗಿ ಬಂದು ಸ್ಕೂಟರ್ ಸಹಿತ ಆತನಿಗೆ ಡಿಕ್ಕಿಯಾಗಿದೆ, ಆ ಬಳಿಕ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ವಿಭಜಕವೇರಿ ಮತ್ತೊಂದು ಪಾಶ್ವಕ್ಕೆ ಹಾರಿ ನಡೆದುಕೊಂಡು ಹೋಗುತ್ತಿದ್ದ ಹರೀಶ್‌ಗೆ ಡಿಕ್ಕಿಯಾಗಿದೆ. ಗಾಯಗೊಂಡ ಹರೀಶ್ ಮತ್ತು ಮನ್ಸೂರ್‌ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

Leave a Reply

Your email address will not be published. Required fields are marked *