Header Ads
Header Ads
Breaking News

ಕಾರ್ಕಳ : ದಿನಗೂಲಿ ನೌಕರರ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ

 

ಕಾರ್ಕಳದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಎಮ್. ನಾಗರಾಜ್ ಇಲಾಖೆಯು ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಗುತ್ತಿಗೆ ಪದ್ದತಿ ಜಾರಿಗೊಳಿಸಿದೆ. ಆದರೆ ನೌಕರರಿಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿಸಿದ ಈ ಕ್ರಮ ಕೈ ಬಿಡಬೇಕು.

ಇಲಾಖೆಯಲ್ಲಿ ಇಪ್ಪತ್ತು ವರ್ಷಗಳಿಗೂ ಹೆಚ್ಚಿನ ಸೇವೆ ಸಲ್ಲಿಸಿ ಮುಂದುವರಿಯುತ್ತಿರುವ ನೌಕರರಿಗೆ ಸರ್ಕಾರದ ಆದೇಶದಂತೆ ಹೆಚ್ಚುವರಿ ವೇತನ ನೀಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭ ಪ್ರತಿಭಟನೆಯಲ್ಲಿ ಎಮ್. ನಾಗರಾಜು, ರಾಜ್ಯ ಅಧ್ಯಕ್ಷರು, ನಾಗರಾಜನಾಯ್ಕ್, ಉಪರಾಜ್ಯ ಅಧ್ಯಕ್ಷರು, ಮೋಹನ್ ಕಾರ್ಯದರ್ಶಿಗಳು, ರಾಜಶೇಖರ್, ಎಸ್. ನಂಜುಂಡಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು.

Related posts

Leave a Reply