Header Ads
Header Ads
Breaking News

ಕಾರ್ಗಿಲ್ ವಿಜಯ ದಿವಸ್ ಆಚರಣೆ. ಹುತಾತ್ಮರ ಯುದ್ಧ ಸ್ಮಾರಕದಲ್ಲಿ ವೀರ ಯೋಧ ಸ್ಮರಣೆ. ಅಜ್ಜರಕಾಡು ಉಡುಪಿಯಲ್ಲಿ ನಡೆದ ಕಾರ್ಯಕ್ರಮ.

ಮಾಜಿ ಸೈನಿಕರ ವೇದಿಕೆ ಉಡುಪಿ, ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ಲಯನ್ಸ್ ಕ್ಲಬ್ ಸಂತೆಕಟ್ಟೆ ಸಹಯೋಗದಲ್ಲಿ ಹುತಾತ್ಮರ ಯುದ್ಧ ಸ್ಮಾರಕ, ಅಜ್ಜರಕಾಡು ಉಡುಪಿಯಲ್ಲಿ ಕಾರ್ಗಿಲ್ ವಿಜಯೋತ್ಸವ ನಡೆಯಿತು.ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿ ಭಾರತದ ವಿಜಯ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಹೆಮ್ಮೆಯ ಯೋಧರಿಗೆ ಗೌರವ ಸೂಚಿಸುವ ಕಾರ್ಯಕ್ರಮ ಹುತಾತ್ಮರ ಯುದ್ಧ ಸ್ಮಾರಕ, ಅಜ್ಜರಕಾಡು ಉಡುಪಿಯಲ್ಲಿ ನಡೆಯಿತು.

ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ, ಹನುಮಾನ್ ಸಂಸ್ಥೆಯ ವಿಲಾಸ್ ನಾಯಕ್, ನಗರಸಭಾ ಸದಸ್ಯ ಶಾಮ್ ಪ್ರಸಾದ್ ಕುಡ್ವರನ್ನು ಗುರುತಿಸಲಾಯೈತು. ಮಾಜಿ ಸೈನಿಕರು ತಮ್ಮ ಜೀವನದ ಅನುಭವವನ್ನು ಹಂಚಿಕೊಂಡರು.ಈ ಸಂಧರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ,ಇಂದಿನ ಆಧುನಿಕ ಯುಗದಲ್ಲಿ ತ್ಯಾಗ ಯೆನ್ನುವುದರ ಬಗ್ಗೆ ಜನರಿಗೆ ತಿಳುವಳಿಕೆ ಇಲ್ಲ,ಇಂದಿನ ಮನೆಗಳಲ್ಲಿ ಸಣ್ಣ ಸಂಸಾರ ವಿರುತ್ತದೆ ಅಲ್ಲಿ ಕೇವಲ ೨ ಮಕ್ಕಳಿದ್ದು ಅವರಿಗೆ ಸ್ವಾತಂತ್ರ್ಯ ಹೋರಾಟ ಗಾರರ ತ್ಯಾಗದ ಬಗ್ಗೆ,ಅವರು ಮಾಡಿದ ದೇಶಸೇವೆಯಬಗ್ಗೆ ಅರಿವಿಲ್ಲ ಎಂದು ವಿಶಾದ ವ್ಯಕ್ತ ಪಡಿಸಿದರು.ಭಾರತದ ರಾಷ್ಟ್ರ ಧ್ವಜ ವನ್ನು ಸಂಘದ ಉಪಾಧ್ಯಕ್ಷರಾದ ದಿನೇಶ್ ನಾಯಕ್ ಧ್ವಜಾರೋಹಣ ಗೈಯುವ ಮೂಲಕ ಕಾರ್ಯಕ್ರಮವನ್ನು ಪ್ರಾಂಭಿಸಲಾಯಿತು. ನಂತರ ವೇದಿಕೆಯ ಧ್ವಜ ಹಾರಿಸಿ ಯುದ್ಧ ಸ್ಮಾರಕಕ್ಕೆ ಭಕ್ತಿ ಇಂದ ಪುಷ್ಪ ನಮನ ಸಲ್ಲಿಸಲಾಯಿತು …. .. ದೇಶಕ್ಕಾಗಿ ಧುಡಿಧು ಪ್ರಾಣ ತ್ಯಾಗ ಗೈದ ಸೈನಿಕರ ಸಾಹಸ ಮತ್ತು ಬಲಿದಾನ ಸ್ಮರಿಣಿಸಲಾಯಿತು … ಈ ಸಂದರ್ಭದಲ್ಲಿ ಕಾರ್ಯದರ್ಶಿ ಎಡಿಎ ಗಣೇಶ್ ರಾವ್, ಕೋಶಾಧಿಕಾರಿ ಗಣಪತಿ ಶೆಟ್ಟಿ ,, ರಘುಪತಿ ರಾವ್, ಶುಭಾಷ್ ವಿಶ್ವನಾಥ್ ಹಂದೇ, ಪರಮಶಿವ, ಶ್ರೀಮತಿ ಧೋರಥಿ, ಹಲವಾರು ಮಾಜಿ ಸೈನಿಕರು ಉಪಸ್ಥಿತರಿದ್ದರು.

Related posts

Leave a Reply