Header Ads
Breaking News

ಕಿನ್ನಿಗೋಳಿಯ ಪಕ್ಷಿಕೆರೆಯ ಮನೆಯೊಂದರಲ್ಲಿ ಘಟನೆ.ನಗದು ದೋಚಿ ಪರಾರಿಯಾದ ಕಳ್ಳರು.

ಹಗಲು ಹೊತ್ತಿನಲ್ಲೇ ಮನೆಗೆ ನುಗ್ಗಿ ನಗ ನಗದು ಕಳ್ಳತನ ಮಾಡಿರುವ ಘಟನೆ ಪಕ್ಷಿಕೆರೆಯ ಹೊಸಕಾಡು ಪೆಟ್ರೋಲ್ ಪಂಪ್ಶ್ ಬಳಿಯ ಮನೆಯೊಂದರಲ್ಲಿ ನಡೆದಿದೆ.ಪಕ್ಷಿಕೆರೆ ಕಿನ್ನಿಗೋಳಿ ಮುಖ್ಯ ರಸ್ತೆಯ ಹೊಸಕಾಡು ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ವಾಸವಾಗಿರುವ ಅಬ್ದುಲ್ ಮಜೀದ್ ಎಂಬುವರ ಮನೆಯ ಮುಂಭಾಗಿಲಿನ ಚಿಲಕವನ್ನು ಮುರಿದು ಒಳ ಹೋಗಿದ್ದಾರೆ. ಕೋಣೆಯೊಂದರಲ್ಲಿ ಇರುವ ಕಪಾಟಿನ ಬಾಗಿಲನ್ನು ಒಡೆದು ಅದರಲ್ಲಿದ್ದ ನಾಲ್ಕು ಚಿನ್ನದ ಉಂಗುರ, ಒಂದು ಬ್ರಾಸ್ ಲೈಟ್ ಕೊಣೆಯಲ್ಲಿ ಡಬ್ಬಒಂದರಲ್ಲಿ ಇದ್ದ ಸುಮಾರು 1500ರೂಪಾಯಿ ನಗದನ್ನು ಕದ್ದೊಯಿದ್ದಿದ್ದಾರೆ. ಪಕ್ಷಿಕೆರೆಯಲ್ಲಿ ರಿಕ್ಷಾ ಚಾಲಕರಾಗಿರುವ ಮದ್ಯಾಹ್ನ ಮಜೀದ್ ಅವರು ಮಸೀದಿಗೆ ಹೋಗಿದ್ದು, ಮಜೀದ್ ಅವರ ಹೆಂಡತಿ ಮತ್ತು ಮಗಳು ವೈದ್ಯರ ಬಳಿ ತೆರಳಿದ್ದರು. ಮಗ ಮನೆಯಿಂದ ಹೊರ ಹೋಗಿದ್ದರು, ಮಜೀದ್ ಅವರ ಮಗ ಮನೆಗೆ ಬರುವ ಸಂದರ್ಭ ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು ಈ ಸಂದರ್ಭ ಕಳ್ಳತನ ನಡೆದ ಘಟನೆ ಬೆಳಕಿಗೆ ಬಂದಿದೆ. ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply