Breaking News

ಕೃಷ್ಣ ಮಠದಲ್ಲಿ ಇಪ್ತಾರ್ ಕೂಟ ವಿವಾದ : ಜುಲೈ 2ರಂದು ರಾಜ್ಯದಾದ್ಯಂತ ಶ್ರೀರಾಮ ಸೇನೆ ಪ್ರತಿಭಟನೆ

ಕೃಷ್ಣ ಮಠದಲ್ಲಿ ಇಪ್ತಾರ್ ಕೂಟ ನಡೆಸಿದ ಬಳಿಕ ಇದನ್ನು ಆಕ್ಷೇಪಿಸಿ ಪೇಜಾವರ ಶ್ರೀಗಳನ್ನು ಭೇಟಿ ಮಾಡಿರುವ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತೋಂದು ಹೆಜ್ಜೆ ಇರಿಸಿದ್ದಾರೆ. ಇಪ್ತಾರ್ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ನೀಡಿರುವ ಪೇಜಾವರ ಶ್ರೀಗಳ ವಿರುದ್ದ ರಾಜ್ಯದಾದ್ಯಂತ ಜಿಲೈ 2ರಂದು ಪ್ರತಿಭಟನೆಗೆ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿರುವ ಪ್ರಮೋದ್ ಮುತಾಲಿಕ್ ಗೋಮಾಂಸ ಭಕ್ಷಕರಿಗೆ ಮಠದ ಆವರಣಕ್ಕೆ ಪ್ರವೇಶ ನೀಡಿದ್ದು, ನಮಾಝ್ ಗೆ ಅವಕಾಶ ನೀಡಿದ್ದು ಸರಿಯಲ್ಲ. ಇದು ಇದೀ ಹಿಂದೂ ಸಮಾಜಕ್ಕೆ ಅವಮಾನವಾಗಿದೆ.ಈ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು. ಇನ್ನು ಮೈಸೂರಿನಲ್ಲಿ ಸರಕಾರಿ ಕಚೇರಿಯಲ್ಲಿ ಗೋ ಮಾಂಸಭಕ್ಷಣೆ ಮಾಡಿರುವ ಬಗ್ಗೆ ಪ್ರತಿಕ್ರೀಯಿಸಿ ಇದು ಅಕ್ಷಮ್ಯ ಅಪರಾಧ. ಸಂವಿಧಾನದ ಉಲ್ಲಂಘಣೆಯಾಗಿದೆ. ಆಹಾರ ಪದ್ದತಿಯ ಆಚರಣೆ ನಿಮ್ಮ ಮನೆಯಲ್ಲಿ ಮಾಡಿ ಅದು ಬಿಟ್ಟು ಸಾರ್ವಜನಿಕ ಸ್ಥಳದಲ್ಲಿ ಮಾಡುವುದನ್ನು ನಾವು ಖಂಡಿಸುತ್ತೇವೆ. ಗಲಭೆ ಪ್ರಚೋದಿಸುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಿಪೋರ್ಟರ್: ಸಂತೋಷ್ ಸರಳೇಬೆಟ್ಟು

Related posts

Leave a Reply