Header Ads
Breaking News

ಕೆಸಿಎಫ್ – ಐಕೆಎಫ್ ಪ್ರಯತ್ನ: ದುಬೈನಲ್ಲಿ 8ತಿಂಗಳಿಂದ ಕೋಮದಲ್ಲಿದ್ದು ಮೃತಪಟ್ಟ ದಿಲೀಪ್ ಮೃತದೇಹ ತಾಯ್ನಾಡಿಗೆ

55 ವರ್ಷವಾಗಿದ್ದರೂ ಅವಿವಾಹಿತರಾಗಿದ್ದು ತಾಯಿ ಮತ್ತು ಅವಿವಾಹಿತ ಸಹೋದರಿಯರ ಕುಟುಂಬಕ್ಕೆ ಏಕೈಕ ಆಸರೆಯಾಗಿ ಕಳೆದ 15 ವರ್ಷಗಳಿಂದ ದುಬೈನಲ್ಲಿ ದುಡಿಯುತ್ತಿದ್ದ ಮಂಗಳೂರಿನ ಕಾವೂರು ನಿವಾಸಿ, ಅನಿವಾಸಿ ಕನ್ನಡಿಗ ದಿಲೀಪ್ ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಬ್ರೈನ್ ಸ್ಟ್ರೋಕ್ ನ ಪರಿಣಾಮ ಕೋಮವಸ್ಥೆಗೆ ತಲುಪಿದ್ದರು. ಸತತ ಎಂಟು ತಿಂಗಳಿಂದ ಕೋಮದಲ್ಲಿದ್ದ ದಿಲೀಪ್ ಕುಮಾರ್ ಕಳೆದ ಶುಕ್ರವಾರ ನಿಧನರಾದರು. ಅವರ ಮೃತದೇಹವನ್ನು ಇಂಡಿಯನ್ ಕಾನ್ಸುಲೇಟ್ ದುಬೈ, ಕೆಸಿಎಫ್, ಕನ್ನಡಿಗಾಸ್ ಫೆಡರೇಷನ್, ಇಂಡಿಯನ್ ಅಸೋಸಿಯೇಷನ್ ಅಜ್ಮಾನ್ ನೆರವಿನಿಂದ ಕೋವಿಡ್ ಸಂದರ್ಭದಲ್ಲಿ ಪಡೆಯಬೇಕಾದ ಎಲ್ಲಾ ಅನುಮತಿ ಪತ್ರಗಳನ್ನು ಪಡೆದು ತಾಯ್ನಾಡಿಗೆ ಕಳುಹಿಸಲಾಯಿತು.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್, 8ತಿಂಗಳಿಂದ ಆಸ್ಪತ್ರೆಯಲ್ಲಿದ್ದ ದಿಲೀಪ್ ಕುಮಾರ್ ಮತ್ತವರ ಕುಟುಂಬದ ಜೊತೆಗಿದ್ದು ಪ್ರತೀ ವಾರ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರೊಂದಿಗೆ ಆರೋಗ್ಯ ವಿಚಾರಿಸಿ, ವೀಡಿಯೋ ಕಾಲ್ ಮೂಲಕ ದಿಲೀಪ್ ಸಹೋದರಿಯರಿಗೂ ಮಾತನಾಡಿಸಿ ಮಾನವೀಯತೆ ಮೆರೆದವರು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ನಾಯಕರಾದ ಅಬ್ದುಲ್ ಕರೀಮ್ ಮತ್ತವರ ತಂಡ.

ದಿಲೀಪ್ ಆರೋಗ್ಯದ ಕುರಿತು ಒಡಹುಟ್ಟಿದವರಂತೆ ಕಾಳಜಿ ವಹಿಸಿದ ಕೆಸಿಎಫ್ ತಂಡ, ದಿಲೀಪ್ ಸಹೋದರಿಗೆ ವೀಡಿಯೋ ಕಾಲ್ ಮೂಲಕ ಮಾತನಾಡಿಸಿ ಆಕೆ ದಿಲೀಪ್ ಹೆಸರು ಕರೆದಾಗ ಕಣ್ಣಿನ ಮೂಲಕ ಸ್ಪಂದಿಸಿ ನಂತರ ನಿದ್ರೆಗೆ ಜಾರುತ್ತಿದ್ದ, ಈ ರೀತಿ ಹಲವು ತಿಂಗಳಿಂದ ಸತತವಾಗಿ ದಿಲೀಪ್ ಕುಟುಂಬದವರಿಗೆ ಅಲ್ಪ ಸಾಂತ್ವನ ನೀಡುತ್ತಿದ್ದರು. ಆದರೆ ಕಳೆದ ಶುಕ್ರವಾರ ದಿಲೀಪ್ ಚಿಕಿತ್ಸೆಗೆ ಸ್ಪಂದಿಸದೇ ನಿಧನರಾದರು, ಅವರ ತಾಯಿ, ಸಹೋದರಿಯರು ಮಗನ ಮುಖವನ್ನು ಕೊನೆಯ ಬಾರಿ ನೋಡಬೇಕು, ಹೇಗಾದರೂ ಮೃತದೇಹ ಕಳುಹಿಸಿ ಎಂದು ಕೋರಿಕೊಂಡಾಗ, ಮೃತದೇಹವನ್ನು ತಾಯ್ನಾಡಿಗೆ ತಲುಪಿಸುವ ಬಗ್ಗೆ ಕೆಸಿಎಫ್ ತಂಡ ನಮ್ಮನ್ನು ಸಂಪರ್ಕಿಸಿರು, ನಾನು ಕೂಡಲೇ ಕೆಎನ್ಆರೈ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಮತ್ತು ದುಬೈ ಕಾನ್ಸುಲೇಟ್ ಕಚೇರಿಯ ಕಾನ್ಸುಲ್ ಜಿತೇಂದ್ರ ಸಿಂಗ್ ನೇಗಿ ಅವರನ್ನು ಸಂಪರ್ಕಿಸಿದೆ, ಅವರೂ ತಕ್ಷಣವೇ ಸ್ಪಂದಿಸಿ ಕಾನ್ಸುಲೇಟ್ ಮೂಲಕ ಎಲ್ಲಾ ರೀತಿಯ ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ಅಜ್ಮಾನ್ ಇಂಡಿಯನ್ ಅಸೋಸಿಯೇಷನ್ ನ ಛಾಯದೇವಿ ಕೃಷ್ಣಮೂರ್ತಿಯವರು ದಿಲೀಪ್ ವಿಸಾ, ಇಮಿಗ್ರೇಷನ್, ಡೆತ್ ಸರ್ಟಿಫಿಕೇಟ್ ಪಡೆಯಲು ವ್ಯವಸ್ಥೆ ಮಾಡಿ ಸಹಕರಿಸಿದರು, ಇದೆಲ್ಲರ ಫಲವಾಗಿ ದಿಲೀಪ್ ಮೃತದೇಹ ದುಬೈನಿಂದ ಮಂಗಳೂರಿಗೆ ತಲುಪಿತು, ಮಂಗಳೂರಿನಲ್ಲೂ ಕೆಸಿಎಫ್ ರವರ ಆಂಬ್ಯುಲೆನ್ಸ್ ಮೂಲಕ ದಿಲೀಪ್ ಮನೆಗೆ ತಲುಪಿಸುವ ವ್ಯವಸ್ಥೆಯೂ ನಡೆಯಿತು.

‘ದಿಲೀಪ್ ರವರ ಒಬ್ಬ ಸಹೋದರಿ ಕಿಡ್ನಿ ಸಮಸ್ಯೆಯಿಂದ ಡೈಯಾಲಿಸಿಸ್ ಮಾಡಿಸುತ್ತಿದ್ದರು, ದಿಲೀಪ್ ಆದಾಯವನ್ನೇ ನಂಬಿದ್ದ ಕುಟುಂಬ ದಿಲೀಪ್ ಆಸ್ಪತ್ರೆಗೆ ದಾಖಲಾದ ನಂತರ ಹಣದ ಕೊರತೆಯಿಂದ ಡೈಯಾಲಿಸಿಸ್ ಮಾಡಲಾಗದೆ ಮೃತಪಟ್ಟರು, ಇನ್ನು ಮದುವೆ ವಯಸ್ಸು ಮೀರಿದ ತಂಗಿ ಮತ್ತು ತಾಯಿಗೆ ಈಗ ಆಸರೆಯೇ ಇಲ್ಲದಾಗಿದ್ದು, ಕೆಸಿಎಫ್ ತಂಡ ಅವರ ಕುಟುಂಬಕ್ಕೆ ಹಲವು ಬಾರಿ ರೇಷನ್ ವ್ಯವಸ್ಥೆ ಮಾಡಿತ್ತು, ಈಗ ತಮ್ಮಿಂದಾದ ಸಹಾಯ ಮಾಡುವ ಭರವಸೆಯೂ ನೀಡಿದ್ದಾರೆ, ನಾವೂ ಕನ್ನಡಿಗಾಸ್ ಫೆಡರೇಷನ್ ಮೂಲಕವೂ ನಮ್ಮಿಂದಾಗುವ ಸಹಾಯ ಮಾಡಲಿದ್ದೇವೆ,

ಈ ಬಡ ಕುಟುಂಬಕ್ಕೆ ಸಹಾಯ ಮಾಡಲಿಚ್ಚಿಸುವವರು
ಸುರೇಖಾ
A/c no: 520101002065998
IFSC code: CORP0000711
ಕಾರ್ಪೋರೇಶನ್ ಬ್ಯಾಂಕ್
ಕಾವೂರು ಬ್ರ್ಯಾಂಚ್
ಮಂಗಳೂರು,
ಈ ಖಾತೆಗೆ ಧನಸಹಾಯ ಮಾಡಬಹುದು’ ಎಂದು ಹಿದಾಯತ್ ಅಡ್ಡೂರ್ ತಿಳಿಸಿದರು.

Related posts

Leave a Reply

Your email address will not be published. Required fields are marked *