Header Ads
Header Ads
Breaking News

ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಲವಾರು ಯೋಜನೆಗಳಿವೆ. ಅವು ಮನೆ ಮನೆಗೆ ತಲುಪುತ್ತಿಲ್ಲ,ಸಂಸದ ನಳಿನ್ ಕುಮಾರ್

ವಿಟ್ಲ: ಶಿವಮೊಗ್ಗ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಶಿಶು ಅಭಿವೃದ್ಧಿ ಯೋಜನ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಟ್ಲ, ದ.ಕ.ಜಿ.ಪಂ., ಬಂಟ್ವಾಳ ತಾ.ಪಂ., ವಿಟ್ಲ ಪಟ್ಟಣ ಪಂಚಾಯತ್ ಸಹಯೋಗದೊಂದಿಗೆ ಸ್ವಚ್ಛ ಭಾರತ್ ಅಭಿಯಾನ, ಹೆಣ್ಣು ಮಗು ರಕ್ಷಿಸಿ-ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಿ, ಯೋಗದ ಮಹತ್ವ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಲವಾರು ಯೋಜನೆಗಳಿವೆ. ಅವು ಮನೆ ಮನೆಗೆ ತಲುಪುತ್ತಿಲ್ಲ. ಸರಕಾರದ ಯೋಜನೆ ಫಲಾನುಭವಿಗಳಿಗೆ ಶೇ.೧೦೦ರಷ್ಟು ತಲುಪಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿವಿಧ ಯೋಜನೆಗಳ ಮೂಲಕ ಬಡವರು ಮತ್ತು ಗ್ರಾಮಗಳ ಸಬಲೀಕರಣ, ಆದರ್ಶ ಗ್ರಾಮ ಯೋಜನೆ, ಹಳ್ಳಿಗಳಿಗೆ ವಿದ್ಯುತ್, ಸಣ್ಣ ಉದ್ದಿಮೆದಾರರಿಗೆ ಖಾತರಿ ರಹಿತ ಸಾಲ, ಜನ್‌ಧನ್‌ಖಾತೆಗಳು, ಜನ್ ಸುರಕ್ಷಾ ಯೋಜನೆ, ಜೀವನಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಗಳು ಈ ದೇಶದ ಪ್ರಜೆಗಳಿಗೆ ಅನುಕೂಲಕರವಾಗಿದೆ ಎಂದು ಅವರು ಹೇಳಿದರು.
ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿ, ಮಾತನಾಡಿ ಸ್ವಚ್ಛತೆಗೆ ಪ್ರತಿಯೊಬ್ಬರೂ ಪ್ರಾಧಾನ್ಯತೆ ಕೊಡಬೇಕು. ವಿದ್ಯಾಭ್ಯಾಸ ಪಡೆಯಬೇಕು. ಮಹಿಳೆ ಜವಾಬ್ದಾರಿಯನ್ನು ನಿಭಾಯಿಸಿದಾಗ ಮನೆ ಅಭಿವೃದ್ಧಿಯಾಗುತ್ತದೆ. ಆ ಮೂಲಕ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಂಟ್ವಾಳ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್‌ಆಲಿ, ವಿಟ್ಲ ಪ.ಪಂ.ಅಧ್ಯಕ್ಷ ಅರುಣ್ ಎಂ.ವಿಟ್ಲ, ವಿಟ್ಲ ಗ್ರಾ.ಪಂ.ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಪ.ಪಂ.ಸದಸ್ಯರು, ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಶಾರದಾ, ಬಂಟ್ವಾಳ ಸಿಡಿಪಿ‌ಒ ಮಲ್ಲಿಕಾ, ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಉಪನಿರ್ದೇಶಕ ಕೆ.ಪಿ.ರಾಜೀವನ್, ಕ್ಷೇತ್ರ ಪ್ರಚಾರ ಸಹಾಯಕ ರೋಹಿತ್, ದರ್ಶನ್ ಭಾಗವಹಿಸಿದ್ದರು.

Related posts

Leave a Reply