Header Ads
Header Ads
Breaking News

ಕೇರಳಕ್ಕೆ ಕುಕ್ಕುಟ ಮಂಗಳೂರಿಗರಿಗೆ ಸಂಕಟ

ಮಂಗಳೂರು: ಜಿ‌ಎಸ್‌ಟಿ ಜಾರಿ ಲಾಭ ನಷ್ಟಗಳ ಲೆಕ್ಕಾಚಾರ ನಡೆದಿದೆ. ಯಾವ ವ್ಯಾಪಾರ ವ್ಯವಹಾರಕ್ಕೆ ಅನಕೂಲ ಮತ್ತು ಯಾರಿಗೆ ಆನಾನುಕೂಲ ಎಂಬ ವಿಷಯದಲ್ಲಿ ಈಗ ಮಾಂಸದ ವ್ಯಾಪಾರವೂ ಸ್ಥಾನ ಪಡೆದಿದೆ.
ಮಂಗಳೂರು ಮತ್ತು ಉಡುಪಿ ಜೆಲ್ಲೆಗಳ ಮಾಂಸ ಪ್ರೀಯರಿಗೆ ಇದು ಕಹಿ ಸುದ್ದಿ, ಇಲ್ಲಿನ ಮಾಂಸ ವ್ಯಾಪಾರಸ್ಥರಿಗೂ ಸ್ವಲ್ಪ ಮಟ್ಟಿಗೆ ಕಹಿ ಅನುಭವವೇ ಆಗುತ್ತಿರುವಂತಿದೆ. ಹೌದು ಈಗ ಕೇರಳಕ್ಕೆ ಅಧಿಕೃತ ಕೋಳಿ ಸಾಗಾಟ ನಡೆಯುತ್ತಿದೆ. ಈ ಹಿಂದಿನ ಅಡೆತಡೆಗಳೆಲ್ಲ ನಿವಾರಣೆಯಾಗಿದ್ದು ಕೇರಳಿಗರಿಗೆ ಕಾರ್ನಾಟಕದಿಂದ ಕೋಳಿ ಸಾಗಾಟ ಹೆಚ್ಚಾಗಿದೆ. ಹೆಚ್ಚು ಲಾಭ ತರುವ ಕೇರಳಕ್ಕೆ ಕೋಳಿ ಸಾಗಿಸಲು ಕುಕ್ಕುಟ ಉದ್ಯಮಿಗಳು ಆಸಕ್ತಿ ತೋರುತ್ತಿದ್ದು. ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಸಹಜವಾಗಿಯೇ ಕೋಳಿಯ ಬರ ಆವರಿಸಿದಂತಾಗಿದೆ. ಕೋಳಿಯ ಕೊರತೆಯ ಕಾರಣದಂದ ದಿನದಿಂದ ದಿನಕ್ಕೆ ಕೋಳಿ ಮಾಂಸದ ಬೆಲೆ ಹೆಚ್ಚುತ್ತಲೇ ಸಾಗಿದೆ. ಕಳೆದ ಒಂದು ವಾರದಲ್ಲಿ ದಿನವೂ ಕೋಳಿ ಮಾಂಸದ ಬೆಲೆ ಹೆಚ್ಚುತ್ತಲಿದೆ. ಆರಂಭದಲ್ಲಿ ಕೆ.ಜಿ.ಗೆ ಮೂರು ರೂ. ಹೆಚ್ಚುತ್ತಿದ್ದು. ಈಗ ದಿನಕ್ಕೆ ಎಂಟು ರೂ ಹೆಚ್ಚುತ್ತ ಸಾಗಿದೆ. ಸೋಮವಾರ ಕೋಳಿ ಕೆ.ಜಿ. ಒಂದಕ್ಕೆ ರಿಟೈಲ್ ದರ ೧೫೦ ರೂ. ಇತ್ತು. ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯನ್ನು ಮಾಂಸ ವ್ಯಾಪಾರ ನಡೆಸುತ್ತಿರುವ ಅಂಗಡಿಕಾರರು ಹೇಳುತ್ತಿದ್ದಾರೆ. ಇದು ಜಿ‌ಎಸ್‌ಟಿಯ ಪರಿಣಾಮ. ಇದರಿಂದ ಹೋಲ್‌ಸೆಲ್ ವ್ಯಾಪಾರಸ್ಥರಿಗಷ್ಟೇ ಲಾಭವಾಗುತ್ತಿದೆ ನಮಗೇನೂ ಇದರಿಂದ ಪ್ರಯೋಜನ ಇಲ್ಲ. ಬೆಲೆ ಹೆಚ್ಚಾಗಿರುವದರಿಂದ ಕೋಳಿ ಮಾಂಸಕ್ಕೆಂದು ಬರುವವರ ಪ್ರಮಾಣವೂ ಕಡಿಮೆ ಆಗುತ್ತಿರುವಂತಿದೆ ಎಂಬ ಆತಂಕವನ್ನು ರಿಟೇಲ್ ಕೋಳಿ ವ್ಯಾಪಾರಸ್ಥರು ವ್ಯಕ್ತಪಡಿಸುತ್ತಿದ್ದಾರೆ.
ರಮಝಾನ್ ಸಮಯದಲ್ಲಿ ಮಾಂಸದ ಬೇಡಿಕೆ ಹೆಚ್ಚಿರುತ್ತದೆ ಇದರಿಂದ ಸಹಜವಾಗಿಯೇ ಬೆಲೆಯೂ ಹೆಚ್ಚಾಗುತ್ತದೆ. ಆದರೆ ರಮಝಾನ್ ಬಳಿ ಬೆಲೆ ಸಹಜ ಸ್ಥಿತಿಗೆ ಬರುತ್ತದೆ. ರಮಝಾನ್ ಬಳಿಕವೂ ಮಾಂಸದ ಬೆಲೆ ಏರುತ್ತಲೇ ಸಾಗುತ್ತಿರುವುದು ಇದೇ ಮೊದಲು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಮಂಗಳೂರು ಬಂದರ್‌ನ ವ್ಯಾಪಾರಸ್ಥ ಅನ್ಸಾರ್.
ಬೆಲೆ ಹೆಚ್ಚುತ್ತಿರುವುದು ಕೇವಲ ಕೋಳಿ ಮಾಂಸದ್ದಲ್ಲ ಜಾನುವಾರು ಮಾಂಸದ ಬೆಲೆಯೂ ಹೆಚ್ಚುತ್ತಿದೆ. ಬೀಫ್ ಬೆಲೆ ಇಂದು ಕೆ.ಇ.ಗೆ ೨೨೦ ರೂ. ಆಗಿದೆ. ಕೆಳೆದ ನಾಲ್ಕು ವರ್ಷಗಳಿಂದ ಬೀಫ್ ಬೆಲೆ ಹೆಚ್ಚಳವಾಗಿರಲಿಲ್ಲ. ೨೦೦ ರೂ. ನಲ್ಲೇ ಮುಂದುವರಿದಿತ್ತು. ಜಾನುವಾರು ಸಾಗಾಟ ಸಂಕಷ್ಟದಿಂದ ಉಂಟಾದ ಕೊರತೆಯ ಕಾರಣದಿಂದ ಅನಿವಾರ್ಯವಾಗಿ ಬೆಲೆ ಹೆಚ್ಚಿಸಬೇಕಾಗಿದೆ. ಕೇಂದ್ರ ಸರಕರಾದ ಆದೀನದ ಪೆಟ್ರೋಲ್ ಬೆಲೆಯಲ್ಲಿಯೇ ಏರಿಳಿತ ಇರುವಾಗ ಬೇರೆ ವಸ್ತುಗಳ ಬಗ್ಗೆ ಏನು ಹೇಳುವುದು ಎಂದು ಕೇಳುತ್ತಾರೆ ಮಾಂಸ ವ್ಯಾಪಾರಸ್ತರ ಸಂಘz ಅಧ್ಯಕ್ಷ ಅಲಿ ಹಸನ್.
ಕುರಿ ಮಾಂಸದ ಬೆಲೆ ೪೦೦ರಿಂದ ೪೫೦ ರೂ. ದರದಲ್ಲಿ ಮಾರಾಟವಾಗುತ್ತಿದೆ. ಹೋಗಲಿ ಮೀನನ್ನಾದರೂ ತಿನ್ನೋಣ ಎಂದರೆ ಬಂಗುಡೆ, ಭೂತಾಯಿ, ಬೊಳಂಜಿರ್ ಹೊರತಾಗಿ ಬೇರೆ ಎಲ್ಲ ಮೀನಿನ ಬೆಲೆಯೂ ಗಗನಕ್ಕೇರಿದಂತಿದೆ. ಬಡವರು ಬೆಲೆ ಕೇಳಿಯೇ ಅಘಾತಕ್ಕೊಳಗಾಗುವ ಪರಿಸ್ಥಿತಿ ಇದೆ.
ತರಕಾರಿಯಂತೂ ಮೂಸಿ ನೋಡಿ ಮುಂದೆ ಹೋಗುವಂತಾಗಿದೆ.

Related posts

Leave a Reply