Breaking News

ಕೋಟಿ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆ

ವಿಟ್ಲದ ಕುದ್ದುಪದವು ದಿವ್ಯಶಕ್ತಿ ಯುವಕ ಮಂಡಲ ಕ್ರೀಡಾಂಗಣದಲ್ಲಿ ದ ಕ ಭಾರತೀಯ ಜನತಾಪಾರ್ಟಿಯ ರೈತಮೋರ್ಚಾ ನೇತೃತ್ವದಲ್ಲಿ ಪಂ. ದೀನ್ ದಯಾಳ್ ಉಪಾಧ್ಯಾಯ ಜನ್ಮ ಶತಾಬ್ದಿ ಪ್ರಯುಕ್ತ ಸಮರ್ಥ ಭಾರತ ಅಂಗವಾಗಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ವಿಟ್ಲ ಮಂಡಲ, ಕುದ್ದುಪದವು ದಿವ್ಯಶಕ್ತಿ ಯುವಕ ಮಂಡಲ ಹಾಗೂವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಕೋಟಿ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿ ಬದುಕು – ಧರ್ಮದ ಸಂವಿಧಾನ ಬಳಕೆ ಬರುವ ಕಾರ್ಯವಾಗಬೇಕು. ಪ್ರಕೃತಿ ಸಂರಕ್ಷಣೆಯ ಕಾರ್ಯದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ಪ್ರಕೃತಿಯ ರಕ್ಷಣೆ ನಡೆದಾಗ ಬದುಕು ಉತ್ತಮವಾಗುತ್ತದೆ. ಒಳ್ಳೆಯ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿದಾಗ ಸಮಾಜ ಅಭಿವೃದ್ಧಿಯಾಗುತ್ತದೆ. ಸಾಧನೆಯ ಹಿಂದೆ ಹೆಜ್ಜೆ ಹಾಕಿದಾಗ ಮಾತ್ರ ಯಶಸ್ಸು ಲಭಿಸಲು ಸಾಧ್ಯ ಎಂದರು.ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ದೀನ್ ದಯಾಳ್ ಉಪಾಧ್ಯಾಯರು ಕಂಡ ಕನಸು, ಯೋಜನೆ, ಯೋಚನೆಗಳು ಸಂಘ ಸಂಸ್ಥೆಗಳ ಸಹಕಾರದಿಂದ ಸಕಾರಗೊಳ್ಳುತ್ತಿದೆ. ಕಟ್ಟ ಕಡೆಯ ವ್ಯಕ್ತಿಗೂ ಬದುಕುವ ಹಕ್ಕಿರುವ ಅಂತ್ಯೋದಯದ ಪರಿಕಲ್ಪನೆಯನ್ನು ಸರ್ಕಾರ ಜಾರಿಗೆ ತರುವ ಕಾರ್ಯ ನಡೆಯುತ್ತಿದೆ. ಪ್ರಕೃತಿಯ ಚರಾಚರ ಜೀವಿಗಳು ಉಳಿದಾಗ ದೇಶ ಉಳಿಯಲಿ ಸಾಧ್ಯ ಎಂಬ ಚಿಂತನೆಯೂ ಇಂದು ಸಸಿಗಳನ್ನು ನೆಡುವ ಮೂಲಕ ನಡೆಯುತ್ತಿದೆ. ಈ ಕಾರ್ಯಕ್ರಮ ಜನ್ಮಶತಾಬ್ದಿಗೆ ಸೀಮಿತವಾಗದೆ ನಿರಂತರವಾಗಿ ನಡೆಯಲಿ ಎಂದು ತಿಳಿಸಿದರು.

ಕುದ್ದುಪದವು ದಿವ್ಯಶಕ್ತಿ ಯುವಕ ಮಂಡಲ ಅಧ್ಯಕ್ಷ ಸತೀಶ್ ಪಾಟಾಳಿ, ಕಾರ್ಯದರ್ಶಿ ರಾಮನಾಯ್ಕ ಒಡಿಯೂರು ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರು. ಯುವಕ ಮಂಡಲ ಕ್ರೀಡಾಂಗಣದ ಸುತ್ತ ವಿವಿಧ ಸಸಿಗಳನ್ನು ನೆಡಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ಸಸಿ ವಿತರಣೆ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಣಚ ಮಹಿಷಮರ್ಧಿನಿ ದೇವಸ್ಥಾನದ ಎಸ್. ಆರ್. ರಂಗಮೂರ್ತಿ ವಹಿಸಿದ್ದರು.ಭಾ ಜ ಪಾ ಜಿಲ್ಲಾಧ್ಯಕ್ಷ ಸಂಜೀವಮಠಂದೂರು, ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಣಿಲ ತಿಮ್ಮಪ್ಪ ಶೆಟ್ಟಿ, ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿಯ ಸುರೇಶ್ ಆಳ್ವ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು, ತಾಲೂಕು ಪಂಚಾಯಿತಿ ಸದಸ್ಯೆ ಕವಿತಾ ನಾಯ್ಕ, ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ, ಬಾಲಕೃಷ್ಣ ಬಾಣಜಾಲು, ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಬಾಜಪಾ ರೈತಮೋರ್ಚಾ ಜಿಲ್ಲಾಧ್ಯಕ್ಷ ರಾಜೀವ ಭಂಡಾರಿ, ಸುದೇಶ್, ಬಾಜಪಾ ರೈತಮೋರ್ಚಾ ಪುತ್ತೂರು ಮಂಡಲ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply